ಮೊದಲ ಬಾರಿ ಟಾಪ್-5ರಲ್ಲಿ ಟೆಂಬಾ ಬವುಮಾ

ಟೆಂಬಾ ಬವುಮಾ | PC : X \ @ProteasMenCSA
ಕೋಲ್ಕತಾದಲ್ಲಿ ಭಾರತ-ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಅಂತ್ಯಗೊಂಡ ನಂತರ ಟೆಸ್ಟ್ ರ್ಯಾಂಕಿಂಗ್ನಲ್ಲೂ ಬದಲಾವಣೆ ಆಗಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಅವರು ಎರಡನೇ ಇನಿಂಗ್ಸ್ ನಲ್ಲಿ 55 ರನ್ ಗಳಿಸಿದ ನಂತರ ಮೊದಲ ಬಾರಿ ಅಗ್ರ-5ರಲ್ಲಿ ಸ್ಥಾನ ಪಡೆದಿದ್ದಾರೆ.
ಮೊದಲ ಪಂದ್ಯದ ವೇಳೆ ಕುತ್ತಿಗೆ ನೋವಿಗೆ ಒಳಗಾಗಿ ಬ್ಯಾಟಿಂಗ್ ಮಾಡದಿದ್ದರೂ ಭಾರತ ತಂಡದ ನಾಯಕ ಶುಭಮನ್ ಗಿಲ್ ಎರಡು ಸ್ಥಾನ ಮೇಲಕ್ಕೇರಿ 11ನೇ ಸ್ಥಾನ ತಲುಪಿದರು.
ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹುಸೇನ್ ಐರ್ಲ್ಯಾಂಡ್ ವಿರುದ್ಧ ಶತಕ ಗಳಿಸಿದ ಹಿನ್ನೆಲೆಯಲ್ಲಿ 34ನೇ ಸ್ಥಾನ ಹಂಚಿಕೊಂಡಿದ್ದಾರೆ. ತನ್ನ ಎರಡನೇ ಶತಕ ದಾಖಲಿಸಿದ ನಂತರ ಮಹ್ಮೂದುಲ್ ಹಸನ್ 19 ಸ್ಥಾನ ಮೇಲಕ್ಕೇರಿ 74ನೇ ರ್ಯಾಂಕ್ ತಲುಪಿದ್ದಾರೆ.
ಈಡನ್ ಗಾರ್ಡನ್ಸ್ನಲ್ಲಿ ಆರು ವಿಕೆಟ್ಗೊಂಚಲು ಪಡೆದಿದ್ದ ಜಸ್ಪ್ರಿತ್ ಬುಮ್ರಾ ಬೌಲಿಂಗ್ ರ್ಯಾಂಕಿಂಗ್ನಲ್ಲಿ ತನ್ನ ಅಗ್ರ ಸ್ಥಾನ ಕಾಯ್ದುಕೊಂಡಿದ್ದಾರೆ. ಕುಲದೀಪ ಯಾದವ್ ಎರಡು ಸ್ಥಾನ ಮೇಲಕ್ಕೇರಿ 13ನೇ ರ್ಯಾಂಕಿಗೆ ತಲುಪಿದ್ದಾರೆ. ರವೀಂದ್ರ ಜಡೇಜ 15ನೇ ಸ್ಥಾನಕ್ಕೇರಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕೊ ಜಾನ್ಸನ್ 11ನೇ ಸ್ಥಾನಕ್ಕೇರಿದ್ದಾರೆ. ಅದೇ ರೀತಿ ಟೆಸ್ಟ್ ಆಲ್ರೌಂಡರ್ಗಳಲ್ಲಿ ಐದನೇ ಸ್ಥಾನ ಪಡೆದಿದ್ದಾರೆ. ಸೈಮನ್ ಹಾರ್ಮರ್ 20 ಸ್ಥಾನ ಭಡ್ತಿ ಪಡೆದು 24ನೇ ರ್ಯಾಂಕಿಗೆ ಪ್ರವೇಶಿಸಿದ್ದಾರೆ.







