ಟೆನಿಸ್: ಜೊಕೊವಿಕ್ ಪ್ರಿ-ಕ್ವಾರ್ಟರ್ ಫೈನಲ್ಗೆ
ವಿಂಬಲ್ಡನ್ ಚಾಂಪಿಯನ್ಶಿಪ್ : ವಾವ್ರಿಂಕ ವಿರುದ್ಧ ಗೆಲುವು

Novak Djokovic | Photo: PTI
ಲಂಡನ್: ಸ್ವಿಸ್ ಆಟಗಾರ ಸ್ಟ್ಯಾನಿಸ್ಲಾಸ್ ವಾವ್ರಿಂಕರನ್ನು ಸೋಲಿಸಿದ ನೊವಾಕ್ ಜೊಕೊವಿಕ್ ವಿಂಬಲ್ಡನ್ ಟೆನಿಸ್ ಚಾಂಪಿಯನ್ಶಿಪ್ನಲ್ಲಿ ಪ್ರಿ-ಕ್ವಾರ್ಟರ್ ಫೈನಲ್ ತಲುಪಿ ದ್ದಾರೆ.
ಸೆಂಟರ್ ಕೋರ್ಟ್ನಲ್ಲಿ ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ನ ಮೂರನೇ ಸುತ್ತಿನ ಪಂದ್ಯದಲ್ಲಿ 7 ಬಾರಿಯ ಚಾಂಪಿಯನ್ ಜೊಕೊವಿಕ್ ಅವರು ವಾವ್ರಿಂಕರನ್ನು 6-3, 6-1, 7-6(5) ಸೆಟ್ಗಳ ಅಂತರದಿಂದ ಸದೆ ಬಡಿದರು.
ವಿಂಬಲ್ಡನ್ನಲ್ಲಿ ಸತತ 31ನೇ ಗೆಲುವು ಸಾಧಿಸಿದ ಜೊಕೊವಿಕ್ ಗ್ರ್ಯಾನ್ಸ್ಲಾಮ್ ಟೂರ್ನಿಯಲ್ಲಿ 61ನೇ ಬಾರಿ
ಅಂತಿಮ-16ರ ಸುತ್ತು ತಲುಪಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಪೋಲ್ಯಾಂಡ್ನ 17ನೇ ಶ್ರೇಯಾಂಕದ ಹ್ಯೂಬರ್ಟ್ ಹುರ್ಕಾಝ್ರನ್ನು ಎದುರಿಸಲಿದ್ದಾರೆ.
ಜೊಕೊವಿಕ್ಗಿಂತ ಎರಡು ವರ್ಷ ಹಿರಿಯರಾದ ವಾವ್ರಿಂಕ ಈ ತನಕ 3 ಬಾರಿ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಆಗಿದ್ದಾರೆ.
ಜೊಕೊವಿಕ್ 24ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಜಯಿಸಿ ಮಾರ್ಗರೆಟ್ ಕೋರ್ಟ್ ಅವರ ದಾಖಲೆ ಸರಿಗಟ್ಟಲು ಎದುರು ನೋಡುತ್ತಿದ್ದಾರೆ. 8ನೇ ವಿಂಬಲ್ಡನ್ ಪ್ರಶಸ್ತಿ ಜಯಿ ಸಿದರೆ ರೋಜರ್ ಫೆಡರರ್ ದಾಖಲೆ ಸರಿಗಟ್ಟಬಹುದು.