ಎಟಿಪಿ ಡಬಲ್ಸ್ ರ್ಯಾಂಕಿಂಗ್: ಟಾಪ್-20ರಲ್ಲಿ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಯೂಕಿ ಭಾಂಬ್ರಿ

ಯೂಕಿ ಭಾಂಬ್ರಿ | Photo : ANI
ಹೊಸದಿಲ್ಲಿ, ಫೆ.3: ಭಾರತೀಯ ಟೆನಿಸ್ ಆಟಗಾರ ಯೂಕಿ ಭಾಂಬ್ರಿ ಎಟಿಪಿ ಡಬಲ್ಸ್ ರ್ಯಾಂಕಿಂಗ್ನಲ್ಲಿ ವಿಶ್ವದ ನಂ.20ನೇ ಆಟಗಾರನಾಗುವ ಮೂಲಕ ಜೀವನಶ್ರೇಷ್ಠ ಸಾಧನೆ ಮಾಡಿದರು.
ಈ ಮೂಲಕ ರೋಹನ್ ಬೋಪಣ್ಣ ನಂತರ ಈ ಸಾಧನೆ ಮಾಡಿದ ಭಾರತದ ಎರಡನೇ ಆಟಗಾರನಾಗಿದ್ದಾರೆ.
ಆಸ್ಟ್ರೇಲಿಯನ್ ಓಪನ್ನಲ್ಲಿ ಮೂರನೇ ಸುತ್ತಿಗೆ ತಲುಪಿ ಉತ್ತಮ ಪ್ರದರ್ಶನ ನೀಡಿದ್ದ 33ರ ವಯಸ್ಸಿನ ಭಾಂಬ್ರಿ 22ರಿಂದ 20ನೇ ಸ್ಥಾನಕ್ಕೇರಿದರು. ಭಾಂಬ್ರಿ 2025ರಲ್ಲಿ ಭಾರತದ ನಂ.1 ಡಬಲ್ಸ್ ಆಟಗಾರನಾಗಿದ್ದರು. ಇದರೊಂದಿಗೆ ರೋಹನ್ ಬೋಪಣ್ಣರ ಪ್ರಾಬಲ್ಯ ಮುರಿದಿದ್ದರು.
Next Story





