ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ : ಇಂಗ್ಲೆಂಡ್ಗೆ ಜೋ ರೂಟ್ ನಾಯಕ

Photo Credit : X/@englandcricket
ಲಂಡನ್: ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಮಂಡಿನೋವಿನಿಂದಾಗಿ ಪಾಕಿಸ್ತಾನ ವಿರುದ್ಧದ ಸರಣಿಯಿಂದ ವಂಚಿತರಾಗಿದ್ದ ಜೇಕಬ್ ಬೆಥೆಲ್, ಹೊಸ ಮುಖ, ಎಡಗೈ ಸ್ಪಿನ್ನರ್ ಲಿಯಾಮ್ ಪ್ಯಾಟರ್ಸನ್ರನ್ನು ಸೇರಿಸಿಕೊಳ್ಳಲಾಗಿದೆ.
ಇಂಗ್ಲೆಂಡ್ ತಂಡದ ಆಫ್ರಿಕಾ ಪ್ರವಾಸವು ಡಿ.17ರಂದು ಆರಂಭವಾಗಲಿದೆ. ಜೋ ರೂಟ್ ತಂಡದ ನಾಯಕನಾಗಿದ್ದು, ಜೋಫ್ರಾ ಆರ್ಚರ್, ರಾಬಿನ್ಸನ್, ಟಾಂಗ್, ಸೋನಿ ಬೇಕರ್,ಅಟ್ಕಿನ್ಸನ್ ಬೌಲಿಂಗ್ ವಿಭಾಗದಲ್ಲಿದ್ದಾರೆ.
ಇಂಗ್ಲೆಂಡ್ ಟೆಸ್ಟ್ ತಂಡ: ಜೋ ರೂಟ್(ನಾಯಕ),ಜೋಫ್ರಾ ಆರ್ಚರ್, ಅಟ್ಕಿನ್ಸನ್, ಸೋನಿ ಬೇಕರ್, ಜೇಕಬ್ ಬೆಥೆಲ್, ಹ್ಯಾರಿ ಬ್ರೂಕ್, ಸ್ಯಾಮ್ ಕುಕ್, ಜೋರ್ಡನ್ ಕಾಕ್ಸ್, ಬೆನ್ ಡಕೆಟ್, ಎಮಿಲಿಯೊ ಗೇ, ಡಾನ್ ಲಾರೆನ್ಸ್, ಪ್ಯಾಟರ್ಸನ್, ಒಲಿ ರಾಬಿನ್ಸನ್, ಜಮೀ ಸ್ಮಿತ್, ಜೋಶ್ ಟಾಂಗ್.
Next Story




