2030ರ ಫಿಫಾ ವಿಶ್ವಕಪ್ ಗೆ ಮೊರಾಕ್ಕೊ, ಪೋರ್ಚುಗಲ್, ಸ್ಪೇನ್ ಆತಿಥ್ಯ

ಫಿಫಾ ವಿಶ್ವಕಪ್ | Photo Credit : @FIFA
ಹೊಸದಿಲ್ಲಿ: 2030ರ ಫಿಫಾ ವಿಶ್ವಕಪ್ ಮೂರು ದೇಶಗಳಲ್ಲಿ ಅಂದರೆ ಮೊರಾಕ್ಕೊ, ಪೋರ್ಚುಗಲ್ ಮತ್ತು ಸ್ಪೇನ್ ನಲ್ಲಿ ನಡೆಯಲಿದೆ.
ಅದೇ ವೇಳೆ, ಚೊಚ್ಚಲ ವಿಶ್ವಕಪ್ನ ಶತಮಾನೋತ್ಸವ ಆಚರಣೆಗಳ ಭಾಗವಾಗಿ, ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳು ದಕ್ಷಿಣ ಅಮೆರಿಕದಲ್ಲಿ ನಡೆಯಲಿವೆ.
ಶತಮಾನೋತ್ಸವ ಆಚರಣೆ ಪಂದ್ಯಗಳು ಅರ್ಜೆಂಟೀನದ ಬ್ಯೂನಸ್ ಐರಿಸ್, ಪರಾಗ್ವೆಯ ಅಸುನ್ಸ್ಯೋನ್ ಮತ್ತು ಉರುಗ್ವೆಯ ಮೋಂಟೆವಿಡೇಯೊ ನಗರಗಳಲ್ಲಿ ನಡೆಯಲಿವೆ. ಈ ಮೂರು ನಗರಗಳಲ್ಲಿ ತಲಾ ಒಂದು ಪಂದ್ಯ ನಡೆಯಲಿದೆ.
ಪ್ರಧಾನ ಪಂದ್ಯಾವಳಿಯು ಮೂರು ಪ್ರಮುಖ ಆತಿಥೇಯ ದೇಶಗಳ ಹಲವಾರು ನಗರಗಳಲ್ಲಿ ನಡೆಯಲಿದೆ.
2034ರ ಫಿಫಾ ವಿಶ್ವಕಪ್ ಸೌದಿ ಅರೇಬಿಯದಲ್ಲಿ ನಡೆಯಲಿದೆ. ಮಧ್ಯಪ್ರಾಚ್ಯದಲ್ಲಿ ಫಿಫಾ ವಿಶ್ವಕಪ್ ನಡೆಯುತ್ತಿರುವುದು ಇದು ಎರಡನೇ ಬಾರಿಯಾಗಿದೆ. 2022ರಲ್ಲಿ ಖತರ್ನಲ್ಲಿ ಈ ಪಂದ್ಯಾವಳಿ ನಡೆದಿತ್ತು.
ಆಸ್ಟ್ರೇಲಿಯ ಸ್ಪರ್ಧೆಯಿಂದ ಹಿಂದೆ ಸರಿದ ಬಳಿಕ, ಆತಿಥೇಯ ಹಕ್ಕುಗಳ ಸ್ಪರ್ಧೆಯಲ್ಲಿ ಉಳಿದ ಏಕೈಕ ಸೌದಿ ಅರೇಬಿಯ ಆಗಿತ್ತು.
Next Story




