ಏಳು ಆಟಗಾರರನ್ನು ಕೈಬಿಡುವ ವಿಚಾರ ನನ್ನ ಗಮನಕ್ಕೆ ಬಂದಿರಲಿಲ್ಲ: ಪಿಸಿಬಿ ನಿರ್ಧಾರದ ಕುರಿತು ಮೌನ ಮುರಿದ ಬಾಬರ್ ಆಝಂ

ಬಾಬರ್ ಆಝಂ |Photo Credit : PTI
ಕರಾಚಿ: ಇಂಗ್ಲೆಂಡ್ ವಿರುದ್ದ ಟೆಸ್ಟ್ ಸರಣಿಯ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ನಿರ್ಧಾರದ ಕುರಿತು ತನ್ನ ಮೌನ ಮುರಿದ ನಾಯಕ ಬಾಬರ್ ಆಝಂ, ಏಳು ಆಟಗಾರರನ್ನು 3ನೇ ಟೆಸ್ಟ್ ಪಂದ್ಯಕ್ಕಿಂತ ಕೈಬಿಡುವ ಮೊದಲು ನನ್ನನ್ನು ಸಂಪರ್ಕಿಸಲಾಗಿರಲಿಲ್ಲ. ಕೋಚಿಂಗ್ ವಿಭಾಗದಲ್ಲಿ ಮಾತ್ರ ಬದಲಾವಣೆ ಮಾಡಲಾಗಿತ್ತು ಎಂದು ಬಹಿರಂಗಪಡಿಸಿದರು.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನ ತಂಡವು ಸತತ ಪಂದ್ಯಗಳಲ್ಲಿ ಹೀನಾಯವಾಗಿ ಸೋತ ನಂತರ ಪಿಸಿಬಿ ಆಮೂಲಾಗ್ರ ಬದಲಾವಣೆ ಮಾಡಿತ್ತು. ಎಜ್ಬಾಸ್ಟನ್ನಲ್ಲಿ ಮೂರನೇ ಪಂದ್ಯ ನಡೆಯುವ ಮೊದಲೇ ಹಲವು ಆಟಗಾರರನ್ನು ಸ್ವದೇಶಕ್ಕೆ ಕಳುಹಿಸಲಾಗಿತ್ತು.
ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕಿಂತ ಮೊದಲು ಮಾತನಾಡಿದ ಬಾಬರ್, ‘‘ತಂಡದಲ್ಲಿ ಸಮಗ್ರ ಬದಲಾವಣೆ ಮಾಡುವ ನಿರ್ಧಾರವನ್ನು ಪಿಸಿಬಿ ತೆಗೆದುಕೊಂಡಿತ್ತು. ನನಗೆ ಈ ಸುದ್ದಿ ತಡವಾಗಿ ಗೊತ್ತಾಯಿತು. ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದ್ದು ಈ ಕುರಿತು ಕ್ರಿಕೆಟ್ ಮಂಡಳಿಯೇ ಚೆನ್ನಾಗಿ ವಿವರಿಸಬಹುದು. ಏಳು ಆಟಗಾರರನ್ನು ಮನೆಗೆ ಕಳುಹಿಸಿರುವ ಅಥವಾ ಕೋಚಿಂಗ್ ಸಿಬ್ಬಂದಿಯನ್ನು ಬದಲಿಸಿರುವ ನಿರ್ಧಾರದಲ್ಲಿ ನಾನು ಭಾಗಿಯಾಗಿಲ್ಲ’’ ಎಂದು ಹೇಳಿದರು.
ಮುಹಮ್ಮದ್ ರಿಝ್ವಾನ್, ಇಮಾಮುಲ್ ಹಕ್, ಸಲ್ಮಾನ್ಅಲಿ, ಆಮಿರ್ ಜಮಾಲ್, ಖುರ್ರಂ ಶಾಝಾದ್, ಅಲಿ ಉಸ್ಮಾನ್ ಹಾಗೂ ಅವೈಸ್ ಝಾಫರ್ರನ್ನು ತಂಡದಿಂದ ಬಿಡುಗಡೆ ಮಾಡಲಾಗಿತ್ತು.






