ನಾಳೆಯಿಂದ ಬೆಂಗಳೂರಿನಲ್ಲಿ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್ಶಿಪ್ ಆರಂಭ

Photo : Volleyball Club World Championships
ಬೆಂಗಳೂರು: ಐಟಿ ನಗರ ಬೆಂಗಳೂರು ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್ಶಿಪ್ 2023 ಅನ್ನು ಆಯೋಜಿಸಲು ಸಜ್ಜಾಗಿದೆ. ಕೆಲವು ಜಾಗತಿಕ ತಾರೆಗಳನ್ನು ಒಳಗೊಂಡ ಚಾಂಪಿಯನ್ ಶಿಪ್ ನ್ನು ಭಾರತೀಯ ವಾಲಿಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ದೇಶದಲ್ಲಿ ಆಯೋಜಿಸಲಾಗುತ್ತಿದೆ.
ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾಗಲಿರುವ ಐದು ದಿನಗಳ ವಾಲಿಬಾಲ್ ಸಂಭ್ರಮಕ್ಕೆ ಮುನ್ನ ಬೆಂಗಳೂರಿನ ರಿನೈಸಾನ್ಸ್ ಹೋಟೆಲ್ ನಲ್ಲಿ ಎಲ್ಲ 6 ತಂಡಗಳ ಪ್ರತಿನಿಧಿಗಳು ಹಾಗೂ ಪ್ರಮುಖ ಸಂಘಟಕರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ರುಪೇ ಪ್ರೈಮ್ ವಾಲಿಬಾಲ್ ಲೀಗ್ ಸೀಸನ್ 2 ರ ಹಾಲಿ ಚಾಂಪಿಯನ್ ಅಹ್ಮದಾಬಾದ್ ಡಿಫೆಂಡರ್ಸ್ನಲ್ಲಿರುವ ಭಾರತೀಯ ಆಟಗಾರರಿಗೆ ವಿಶ್ವಶ್ರೇಷ್ಠ ಆಟಗಾರರ ವಿರುದ್ಧ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸುವ ಅವಕಾಶ ಲಭಿಸಿದೆ.
ಅಹ್ಮದಾಬಾದ್ ಡಿಫೆಂಡರ್ಸ್ ತಂಡದಲ್ಲಿರುವ ಕರ್ನಾಟಕದ ಆಟಗಾರ ಸೃಜನ್ ಶೆಟ್ಟಿ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್ಶಿಪ್ನ ಮಹತ್ವದ ಕುರಿತು ಮಾತನಾಡಿದರು.
“ತವರು ನೆಲದಲ್ಲಿ ಪುರುಷರ ವಾಲಿಬಾಲ್ ಕ್ಲಬ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ನಮಗೆ ಅಪಾರ ಹೆಮ್ಮೆಯ ವಿಷಯವಾಗಿದೆ. ಈ ಪಂದ್ಯಾವಳಿಯು ನಮಗೆ ವಿಶ್ವದ ಅತ್ಯುತ್ತಮ ಆಟಗಾರರೊಂದಿಗೆ ಆಡುವ ಸುವರ್ಣ ಅವಕಾಶವನ್ನು ಒದಗಿಸುವುದಲ್ಲದೆ ಭಾರತೀಯ ವಾಲಿಬಾಲ್ನ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲು ಕೂಡ ಅವಕಾಶ ಕಲ್ಪಿಸಲಿದೆ ಎಂದರು.







