ಜಗತ್ತಿಗೆ ಚಕ್ರವರ್ತಿ ಬೇಕಿಲ್ಲ: ಬ್ರಿಕ್ಸ್ ವಿರುದ್ಧ ಟ್ರಂಪ್ ಸುಂಕ ಬೆದರಿಕೆಗೆ ಬ್ರೆಝಿಲ್ ವಾಗ್ದಾಳಿ

PC : @IndiaPulseNow
ಬ್ರಸೀಲಿಯಾ: ಬ್ರಿಕ್ಸ್ ಗುಂಪಿನ ಅಮೆರಿಕ ವಿರೋಧಿ ನೀತಿಗಳ ಜೊತೆ ಗುರುತಿಸಿಕೊಂಡಿರುವ ದೇಶಗಳ ವಿರುದ್ಧ ಹೆಚ್ಚುವರಿ 10% ಸುಂಕ ವಿಧಿಸುವ ಬೆದರಿಕೆ ಒಡ್ಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಬೇಜವಾಬ್ದಾರಿ ವರ್ತನೆ ' ತೋರಿದ್ದಾರೆ ಎಂದು ಬ್ರೆಝಿಲ್ ಅಧ್ಯಕ್ಷ ಲೂಲ ಡ ಸಿಲ್ವಾ ವಾಗ್ದಾಳಿ ನಡೆಸಿದ್ದಾರೆ.
ಜಗತ್ತು ಚಕ್ರವರ್ತಿಯನ್ನು ಬಯಸುವುದಿಲ್ಲ. ಜಗತ್ತು ಬದಲಾಗಿದೆ. ನಮ್ಮ ದೇಶಗಳು ಸಾರ್ವಭೌಮ ರಾಷ್ಟ್ರಗಳು. ಒಂದು ವೇಳೆ ಟ್ರಂಪ್ ಸುಂಕ ಜಾರಿಗೊಳಿಸಿದರೆ ಇತರ ದೇಶಗಳಿಗೂ ಇದೇ ರೀತಿ ಮಾಡುವ ಹಕ್ಕು ಇದೆ. ಇಲ್ಲಿ `ಪರಸ್ಪರ ಕಾನೂನು' ಇದೆ. ಅಮೆರಿಕದಂತಹ ದೇಶದ ಅಧ್ಯಕ್ಷರಾಗಿ ಸಾಮಾಜಿಕ ಮಾಧ್ಯಮದ ಮೂಲಕ ಈ ರೀತಿ ಬೆದರಿಕೆ ಒಡ್ಡುವುದು ಬೇಜವಾಬ್ದಾರಿಯಾಗಿದೆ' ಎಂದವರು ಹೇಳಿದ್ದಾರೆ. ಚೀನಾ, ಭಾರತ ಮತ್ತು ರಶ್ಯ ಬ್ರಿಕ್ಸ್ ನ ಭಾಗವಾಗಿದೆ.
Next Story





