ಮೂರನೇ ಯೂತ್ ಏಕದಿನ: ಭಾರತ ವಿರುದ್ಧ ಶ್ರೀಲಂಕಾಕ್ಕೆ ಜಯ

Photo Credit : X \ @ThePapareSports
ಹಂಬನ್ಟೋಟ, ಜು.9: ಮೂರನೇ ಯೂತ್ ಏಕದಿನ ಪಂದ್ಯದಲ್ಲಿ ಭಾರತದ ಅಂಡರ್-19 ಕ್ರಿಕೆಟ್ ತಂಡವು ಆತಿಥೇಯ ಶ್ರೀಲಂಕಾ ಅಂಡರ್-19 ತಂಡದ ವಿರುದ್ಧ ಒಂದು ವಿಕೆಟ್ನಿಂದ ಸೋಲುಂಡಿದೆ.
ಈ ಫಲಿತಾಂಶದ ಮೂಲಕ ಶ್ರೀಲಂಕಾ ಅಂಡರ್-19 ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಭಾರತ ತಂಡವು ಅಗ್ರ ಸರದಿಯ ಬ್ಯಾಟರ್ ವಿ.ಕೆ,ವಿನೀತ್(131 ರನ್, 136 ಎಸೆತ, 13 ಬೌಂಡರಿ, 3 ಸಿಕ್ಸರ್) ಶತಕ ಹಾಗೂ ಲಕ್ಷ್ಯ ರಾಯ್ಚಂದಾನಿ(61 ರನ್, 63 ಎಸೆತ, 7 ಬೌಂಡರಿ)ಅರ್ಧಶತಕದ ಕೊಡುಗೆಯ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗಳ ನಷ್ಟಕ್ಕೆ 290 ರನ್ ಗಳಿಸಿತು. ಸೆತ್ಮಿಕಾ ಸೆನೆವಿರತ್ನೆ (4-41)ಯಶಸ್ವಿ ಪ್ರದರ್ಶನ ನೀಡಿದರು.
ಗೆಲ್ಲಲು 291 ರನ್ ಬೆನ್ನಟ್ಟಿದ ಶ್ರೀಲಂಕಾ ತಂಡವು ಕೊನೆಯ ಎಸೆತದಲ್ಲಿ ಗೆಲುವಿನ ರನ್ ಗಳಿಸಿತು. ಚಾಮಿಕಾ ವಿಥನಪಥಿರನ (ಔಟಾಗದೆ 84, 68 ಎಸೆತ, 7 ಬೌಂಡರಿ, 2 ಸಿಕ್ಸರ್)ಶ್ರೀಲಂಕಾಕ್ಕೆ ರೋಚಕ ಗೆಲುವು ತಂದುಕೊಟ್ಟರು.
ಸೆನುಜಾ ವಿಕುನಗೊಡಾ(67 ರನ್, 59 ಎಸೆತ)ಅರ್ಧಶತಕ ಗಳಿಸಿ ವಿಥನಪಥಿರನಗೆ ಸಾಥ್ ನೀಡಿದರು.
ಭಾರತದ ಅಂಡರ್-19 ತಂಡದ ಪರ ಅನ್ಮೋಲ್ಜೀತ್ ಸಿಂಗ್(4-42)ಯಶಸ್ವಿ ಪ್ರದರ್ಶನ ನೀಡಿದರು. ಶವಿನ್ ವಿನೋದ್(3-41)ಹಾಗೂ ಮೋಹಿತ್ (2-66)ಐದು ವಿಕೆಟ್ಗಳನ್ನು ಹಂಚಿಕೊಂಡರು.






