2,000 ಟೆಸ್ಟ್ ರನ್ಗಳನ್ನು ಪೂರ್ಣಗೊಳಿಸಿದ ಟಿಮ್ ಸೌತೀ
ಹ್ಯಾಡ್ಲೀ, ವೆಟೋರಿ ಸಾಲಿಗೆ ಸೇರ್ಪಡೆ

Photo: X/nasser_mo3gza
ಸಿಲ್ಹೆಟ್: ನ್ಯೂಝಿಲ್ಯಾಂಡ್ ಟೆಸ್ಟ್ ತಂಡದ ನಾಯಕ ಹಾಗೂ ವೇಗಿ ಟಿಮ್ ಸೌತೀ ಬುಧವಾರ 2,000 ಟೆಸ್ಟ್ ರನ್ಗಳನ್ನು ಗಳಿಸಿದ್ದಾರೆ. ಆ ಮೂಲಕ ಆಲ್ರೌಂಡರ್ಗಳಾದ ರಿಚರ್ಡ್ ಹ್ಯಾಡ್ಲೀ ಮತ್ತು ಡೇನಿಯಲ್ ವೆಟೋರಿ ಅವರ ಸಾಲಿಗೆ ಸೇರ್ಪಡೆಗೊಂಡಿದ್ದಾರೆ.
ಬಾಂಗ್ಲಾದೇಶದ ಸಿಲ್ಹೆಟ್ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ನಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ನ್ಯೂಝಿಲ್ಯಾಂಡ್ನ ಮೊದಲ ಇನಿಂಗ್ಸ್ನಲ್ಲಿ ಅವರು 62 ಎಸೆತಗಳಿಂದ 35 ರನ್ಗಳನ್ನು ಗಳಿಸಿದ್ದಾರೆ. ಅವರ ಮೊತ್ತದಲ್ಲಿ ಮೂರು ಬೌಂಡರಿಗಳಿದ್ದವು. ಸೌತೀ 95 ಟೆಸ್ಟ್ಗಳನ್ನು ಆಡಿ 2011 ರನ್ಗಳನ್ನು ಗಳಿಸಿದ್ದಾರೆ. ಅವರ 135 ಇನಿಂಗ್ಸ್ನಲ್ಲಿ ಆರು ಅರ್ಧ ಶತಕಗಳಿವೆ. ಅವರ ಅತ್ಯುತ್ತಮ ಸ್ಕೋರ್ ಅಜೇಯ 77.
2,000 ಪ್ಲಸ್ ರನ್ಗಳು ಮತ್ತು 300 ಪ್ಲಸ್ ವಿಕೆಟ್ಗಳನ್ನು ಪಡೆದ ತನ್ನ ದೇಶದ ಹ್ಯಾಡ್ಲೀ ಮತ್ತು ವೆಟೋರಿ ಅವರ ಸಾಲಿಗೆ ಸೌತಿ ಸೇರ್ಪಡೆಗೊಂಡಿದ್ದಾರೆ.
ಹ್ಯಾಡ್ಲೀ 86 ಟೆಸ್ಟ್ಗಳಲ್ಲಿ 431 ವಿಕೆಟ್ಗಳನ್ನು ಪಡೆದು 3,124 ರನ್ಗಳನ್ನು ಗಳಿಸಿದ್ದಾರೆ. ಅವರ ಮೊತ್ತದಲ್ಲಿ ಎರಡು ಶತಕಗಳು ಮತ್ತು 15 ಅರ್ಧ ಶತಕಗಳಿವೆ.
ವೆಟೋರಿ 113 ಟೆಸ್ಟ್ಗಳಲ್ಲಿ 362 ವಿಕೆಟ್ಗಳನ್ನು ಪಡೆದು 4,531 ರನ್ಗಳನ್ನು ಗಳಿಸಿದ್ದಾರೆ. ಅದರಲ್ಲಿ ಆರು ಶತಕಗಳು ಮತ್ತು 23 ಅರ್ಧ ಶತಕಗಳಿವೆ.





