ಭಾರತೀಯರ 10 ಗರಿಷ್ಠ ಟೆಸ್ಟ್ ರನ್‌ಗಳು

ಬರ್ಮಿಂಗ್‌ಹ್ಯಾಮ್ (ಇಂಗ್ಲೆಂಡ್): ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಆ್ಯಂಡರ್‌ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಕೌಶಲ್ಯವನ್ನು ಪ್ರದರ್ಶಿಸಿರುವ ಶುಭಮನ್ ಗಿಲ್ ಇಂಗ್ಲೆಂಡ್ ವಿರುದ್ಧ 269 ರನ್ ಬಾರಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತೀಯರೊಬ್ಬರ ಏಳನೇ ಅತ್ಯಧಿತ ಮೊತ್ತವಾಗಿದೆ ಹಾಗೂ ಭಾರತೀಯ ನಾಯಕರ ಪೈಕಿ ನೂತನ ದಾಖಲೆಯಾಗಿದೆ. 2019ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಬಾರಿಸಿರುವ 254 ರನ್‌ಗಳ ಮೊತ್ತವನ್ನು ಶುಭಮನ್ ಗಿಲ್ ಮೀರಿಸಿದ್ದಾರೆ.
ಶುಭಮನ್ ಗಿಲ್‌ರ ಈ ನಿರ್ವಹಣೆಯು ಅವರನ್ನು ಭಾರತೀಯ ಬ್ಯಾಟಿಂಗ್ ಶ್ರೇಷ್ಠರ ಪಟ್ಟಿಗೆ ಸೇರಿಸಿದೆ. ಆದರೆ, ಅವರು ಬ್ಯಾಟಿಂಗ್ ದಂತಕತೆ ವೀರೇಂದ್ರ ಸೆಹ್ವಾಗ್‌ಗಿಂತ ಹಿಂದಿದ್ದಾರೆ. ಅತ್ಯಧಿತ ಟೆಸ್ಟ್ ರನ್ ಗಳಿಸಿರುವ ಭಾರತೀಯ ಎಂಬ ದಾಖಲೆ ಸೆಹ್ವಾಗ್ ಹೆಸರಿನಲ್ಲಿದೆ. 2008ರಲ್ಲಿ ಚೆನ್ನೈಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಹ್ವಾಗ್ 319 ರನ್ ಸಿಡಿಸಿದ್ದಾರೆ. ಅದೂ ಅಲ್ಲದೆ, ಸೆಹ್ವಾಗ್ ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ಇನ್ನೊಂದು ತ್ರಿಶತಕ ಬಾರಿಸಿದ್ದಾರೆ.
ತ್ರಿಶತಕ ಬಾರಿಸಿದ ಇನ್ನೋರ್ವ ಭಾರತೀಯ ಕ್ರಿಕೆಟಿಗನೆಂದರೆ ಕರುಣ್ ನಾಯರ್. ಅವರು 2016ರಲ್ಲಿ ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸಿದ್ದಾರೆ.
ವೀರೇಂದ್ರ ಸೆಹ್ವಾಗ್ 319 ದಕ್ಷಿಣ ಆಫ್ರಿಕ ಚೆನ್ನೈ-2008
ವೀರೇಂದ್ರ ಸೆಹ್ವಾಗ್ 309 ಪಾಕಿಸ್ತಾನ ಮುಲ್ತಾನ್- 2004
ಕರುಣ್ ನಾಯರ್ 303 ಇಂಗ್ಲೆಂಡ್ ಚೆನ್ನೈ- 2016
ವೀರೇಂದ್ರ ಸೆಹ್ವಾಗ್ 293 ಶ್ರೀಲಂಕಾ 2009
ವಿ.ವಿ.ಎಸ್. ಲಕ್ಷ್ಮಣ್ 281 ಆಸ್ಟ್ರೇಲಿಯ ಕೋಲ್ಕತ- 2001
ರಾಹುಲ್ ದ್ರಾವಿಡ್ 270 ಪಾಕಿಸ್ತಾನ ರಾವಲ್ಪಿಂಡಿ- 2004
ಶುಭಮನ್ ಗಿಲ್ 269 ಇಂಗ್ಲೆಂಡ್ ಬರ್ಮಿಂಗ್‌ಹ್ಯಾಮ್- 2025
ವಿರಾಟ್ ಕೊಹ್ಲಿ 254* ದಕ್ಷಿಣ ಆಫ್ರಿಕಾ ಪುಣೆ- 2019
ವೀರೇಂದ್ರ ಸೆಹ್ವಾಗ್ 254 ಪಾಕಿಸ್ತಾನ ಲಾಹೋರ್- 2006
ಸಚಿನ್ ತೆಂಡುಲ್ಕರ್ 248* ಬಾಂಗ್ಲಾದೇಶ ಢಾಕಾ- 2004