ಹಾಕಿ ಗೋಡೆಗೆ ಶ್ರೀಜೇಶ್ ಗೆ ಗೌರವ | ಜೆರ್ಸಿ ಸಂಖ್ಯೆ 16ಕ್ಕೆ ವಿದಾಯ

ಪಿ.ಆರ್. ಶ್ರೀಜೇಶ್ | PC : X \ @airnewsalerts
ಹೊಸದಿಲ್ಲಿ : ಭಾರತದ ಹಾಕಿ ಗೋಡೆ ಎಂದೇ ಖ್ಯಾತರಾಗಿರುವ ಹಿರಿಯ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ಅವರಿಗೆ ಗೌರವ ಸೂಚಕವಾಗಿ, ಅವರು ಧರಿಸುತ್ತಿದ್ದ ಜೆರ್ಸಿ ಸಂಖ್ಯೆ 16ಕ್ಕೆ ವಿದಾಯ ಹೇಳಲು ಹಾಕಿ ಇಂಡಿಯಾ ನಿರ್ಧರಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದಲ್ಲಿದ್ದ ಹಿರಿಯ ಗೋಲ್ ಕೀಪರ್ ಪಿ.ಆರ್. ಶ್ರೀಜೇಶ್ ನಿವೃತ್ತಿ ಹೊಂದಿದ್ದು, ಇನ್ನು ಮುಂದೆ ಜೆರ್ಸಿ ಸಂಖ್ಯೆ 16 ಯಾವ ಆಟಗಾಗರರಿಗೂ ಲಭ್ಯವಿರುವುದಿಲ್ಲ. ಹಾಕಿ ದಂತಕತೆ ಶ್ರೀಜೇಶ್ ಅವರು ಭಾರತದ ಜೂನಿಯರ್ ಹಾಕಿ ತಂಡಕ್ಕೆ ಕೋಚಿಂಗ್ ನೀಡಲಿದ್ದಾರೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಭೋಲಾನಾಥ್ ಸಿಂಗ್ ಹೇಳಿದ್ದಾರೆ.
A great tribute to a hockey legend! Sreejesh's unwavering dedication to Indian hockey over 18 illustrious years has rightfully earned him this honor.
— India at Paris 2024 Olympics (@sportwalkmedia) August 14, 2024
He also has aspirations for his coaching career, drawing inspiration from Rahul Dravid.
Follow @sportwalkmedia for… pic.twitter.com/Fd4SjpiNnl
An era of excellence ends as Hockey India retires the iconic No. 16 jersey of PR Sreejesh.
— All India Radio News (@airnewsalerts) August 14, 2024
From impossible saves to inspiring generations, Sreejesh’s legacy will forever be etched in the history of Indian hockey: @TheHockeyIndia #IndiaKaGame | #HockeyIndia |… pic.twitter.com/OQ4W7k1bfq
‘ಶ್ರೀಜೇಶ್ ಅವರು ಭಾರತದ ಜೂನಿಯರ್ ಹಾಕಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಲ್ಲದೆ, ಶ್ರೀಜೇಶ್ ಸುಮಾರು 20 ವರ್ಷಗಳ ಕಾಲ ಧರಿಸಿದ್ದ ಜೆರ್ಸಿ ಸಂಖ್ಯೆ 16 ಅನ್ನು ಹಿರಿಯ ತಂಡದಿಂದ ನಿವೃತ್ತಿ ಘೋಷಿಸುತ್ತಿದ್ದೇವೆ. ಕಿರಿಯರ ತಂಡದಲ್ಲಿ ಆ ಸಂಖ್ಯೆಗೆ ನಿವೃತ್ತಿ ಘೋಷಿಸಲಾಗಿಲ್ಲ’ ಎಂದೂ ಭೋಲಾನಾಥ್ ಸಿಂಗ್ ಹೇಳಿದ್ದಾರೆ.
ಟೋಕಿಯೋ ನಂತರ ಪ್ಯಾರಿಸ್ ಒಲಿಂಪಿಕ್ಸ್ಗಳಲ್ಲಿ ಸತತರ ಎರಡು ಬಾರಿ ಭಾರತ ಹಾಕಿ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಶ್ರೀಜೇಶ್ ಪ್ರಮುಖ ಪಾತ್ರ ವಹಿಸಿದ್ದರು.