ಟೋಕಿಯೊ | ಪಂದ್ಯದ ವೇಳೆ ಮೆದುಳಿಗೆ ಗಾಯ: ಜಪಾನಿನ ಇಬ್ಬರು ಬಾಕ್ಸರ್ಗಳು ನಿಧನ

ಶಿಗೆಟೋಶಿ - ಹಿರೋಮಾಸಾ ಉರಕಾವಾ (Photos: Instagram/worldboxingorg)
ಟೋಕಿಯೊ, ಆ.10: ಟೋಕಿಯೊದಲ್ಲಿ ನಡೆದ ಒಂದೇ ಸ್ಪರ್ಧೆಯಲ್ಲಿ ಪ್ರತ್ಯೇಕ ಪಂದ್ಯಗಳ ವೇಳೆ ಮೆದುಳಿಗೆ ಪೆಟ್ಟುಬಿದ್ದ ಪರಿಣಾಮ ಜಪಾನಿನ ಇಬ್ಬರು ಬಾಕ್ಸರ್ಗಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಗಸ್ಟ್ 2ರಂದು ಟೋಕಿಯೊದ ಕೊರಾಕುಯೆನ್ ಹಾಲ್ನಲ್ಲಿ 28ರ ವಯಸ್ಸಿನವರಾದ ಸೂಪರ್ ಫೆದರ್ವೇಟ್ ಶಿಗೆಟೋಶಿ ಹಾಗೂ ಹಿರೋಮಾಸಾ ಉರಕಾವಾ ಪ್ರತ್ಯೇಕ ಪಂದ್ಯಗಳಲ್ಲಿ ಹೋರಾಡಿದ್ದರು.
ತಮ್ಮದೇ ದೇಶದ ಯಮಟೊ ಹಟಾ ವಿರುದ್ಧ 12 ಸುತ್ತುಗಳ ನಂತರ ಡ್ರಾ ಸಾಧಿಸಿದ ಶಿಗೆಟೋಶಿ ಅವರು ತಕ್ಷಣವೇ ಪ್ರಜ್ಞೆ ಕಳೆದುಕೊಂಡರು. ಆಗಸ್ಟ್ 8ರಂದು ರಾತ್ರಿ 10:59ಕ್ಕೆ ನಿಧನರಾದರು ಎಂದು ಎಂ.ಟಿ. ಬಾಕ್ಸಿಂಗ್ ಜಿಮ್ ಶನಿವಾರ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
ಯೋಜಿ ಸೈಟೊ ವಿರುದ್ಧ 8ನೇ ಹಾಗೂ ಅಂತಿಮ ಸುತ್ತಿನಲ್ಲಿ ಸೆಣಸಾಡಿದ್ದ ಉರಕಾವಾ ಈ ವೇಳೆ ಮೆದುಳಿಗೆ ಆಗಿದ್ದ ಗಾಯದಿಂದಾಗಿ ಶನಿವಾರ ರಾತ್ರಿ ದಾರುಣವಾಗಿ ಮೃತಪಟ್ಟರು ಎಂದು ವಿಶ್ವ ಬಾಕ್ಸಿಂಗ್ ಸಂಸ್ಥೆ ರವಿವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತಿಳಿಸಿದೆ.





