Commonwealth Games 2026 | ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಮತ್ತೆ ಮೂರು ಚಿನ್ನ: ಸಾಕ್ಷಿ ಚೌಧರಿ, ಪ್ರಿಯಾ, ಅರುಂಧತಿಗೆ ಬಂಗಾರದ ಪದಕ

ಸಾಕ್ಷಿ ಚೌಧರಿ , ಪ್ರಿಯಾ ಘಂಘಸ್ | Photo Credit : X \ @TheKhelIndia
ಗ್ಲಾಸ್ಗೊ: ಭಾರತದ ಬಾಕ್ಸರ್ಗಳಾದ ಸಾಕ್ಷಿ ಚೌಧರಿ, ಪ್ರಿಯಾ ಘಂಘಸ್ ಹಾಗೂ ಅರುಂಧತಿ ಚೌಧರಿ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ಶನಿವಾರ ನಡೆದ ಮಹಿಳೆಯರ 51 ಕೆಜಿ ತೂಕ ವಿಭಾಗದ ಫೈನಲ್ನಲ್ಲಿ ಸ್ವಾತಿ ಅವರು ಇಂಗ್ಲೆಂಡ್ನ ರೂಬಿ ವೈಟ್ ಅವರನ್ನು 5-0 ಅಂತರದಿಂದ ಮಣಿಸಿ ಚಿನ್ನಕ್ಕೆ ಮುತ್ತಿಟ್ಟರು.
ಮಹಿಳೆಯರ 60 ಕೆಜಿ ತೂಕ ವಿಭಾಗದಲ್ಲಿ ಆರಂಭಿಕ ಹಿನ್ನಡೆಯಿಂದ ಪುಟಿದೆದ್ದ ಪ್ರಿಯಾ ಕೆನಡಾದ ಮೇರಿ-ಬಥೌಲ್ರನ್ನು 4-1 ಅಂತರದಿಂದ ಮಣಿಸಿದರು.
ಮಹಿಳೆಯರ 70 ಕೆಜಿ ತೂಕ ವಿಭಾಗದಲ್ಲಿ ಇಂಗ್ಲೆಂಡ್ ನ ಎದುರಾಳಿಯನ್ನು ಸೋಲಿಸಿ ಅರುಂಧತಿ ಚೌಧರಿ ಚಿನ್ನದ ಪದಕ ಪಡೆದರು.
ಭಾರತವು ಗ್ಲಾಸ್ಗೊ ಗೇಮ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಗೆದ್ದಿರುವ 6ನೇ ಪದಕ ಇದಾಗಿದೆ. ಭಾರತದ ಬಾಕ್ಸರ್ಗಳು ಈ ತನಕ 5 ಚಿನ್ನ, ಒಂದು ಬೆಳ್ಳಿ ಗೆದ್ದಿದ್ದಾರೆ.
ಸಾಕ್ಷಿ ಹಾಗೂ ಪ್ರಿಯಾ ಸಾಹಸದಿಂದಾಗಿ ಭಾರತವು ಇದೀಗ 11 ಚಿನ್ನ ಸಹಿತ ಒಟ್ಟು 34 ಪದಕಗಳನ್ನು ಗೆದ್ದುಕೊಂಡು ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.




