ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಯುಪಿ ವಾರಿಯರ್ಸ್ಗೆ 33 ರನ್ಗಳ ಜಯ
ಜೆಮಿಮಾ ರಾಡ್ರಿಗಸ್ ಅರ್ಧ ಶತಕ ವ್ಯರ್ಥ

PC | @wplt20
ಬೆಂಗಳೂರು : ಇಲ್ಲಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಡಬ್ಲುಪಿಎಲ್ನ 8ನೇ ಪಂದ್ಯವನ್ನು 33 ರನ್ ಗಳ ಅಂತರದಿಂದ ಗೆದ್ದುಕೊಂಡಿತು.
ಯುಪಿ ವಾರಿಯರ್ಸ್ ನೀಡಿದ್ದ 178 ರನ್ ಗಳ ಗುರಿ ಬೆನ್ನತ್ತಲು ಬ್ಯಾಟಿಂಗ್ ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕಳಪೆ ಆರಂಭ ಪಡೆಯಿತು. ಆರಂಭಿಕರಾಗಿ ಬ್ಯಾಟಿಂಗ್ ಇಳಿದಿದ್ದ ನಾಯಕಿ ಮೆಗ್ ಲ್ಯಾನಿಂಗ್ 5 ಎಸೆತಗಳಲ್ಲಿ 1 ಬೌಂಡರಿ ನೆರವಿನೊಂದಿಗೆ 5 ರನ್ ಗಳಿಸಿ ಔಟಾದರೆ, 8.1ನೇ ಓವರ್ ನಲ್ಲಿ ಶಫಾಲಿ ವರ್ಮಾ 30 ಎಸೆತಗಳಲ್ಲಿ 4 ಬೌಂಡರಿ ನೆರವಿನೊಂದಿಗೆ 24 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ಮರಿಜಾನ್ನೆ ಕಾಪ್ 9 ಎಸೆತಗಳಲ್ಲಿ 1 ಬೌಂಡರಿ ನೆರವಿನೊಂದಿಗೆ 9 ರನ್ ಗಳಿಸಿ ಔಟಾದರೆ, ಅನ್ನಾಬೆಲ್ ಸದರ್ಲ್ಯಾಂಡ್ 5 ಎಸೆತಗಳಲ್ಲಿ 5 ರನ್ ಗಳಿಸಿ ಔಟಾದರು.
ಬಳಿಕ ಸ್ಪೊಟಕ ಬ್ಯಾಟಿಂಗ್ ಮಾಡಿದ ಜೆಮಿಮಾ ರಾಡ್ರಿಗಸ್ 35 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 56 ರನ್ ಗಳಿಸಿ ಔಟಾದರು.
ನಂತರ ಕ್ರಮಾಂಕದಲ್ಲಿ ಬಂದ ನಿಕಿ ಪ್ರಸಾದ್ 10 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸ್ ನೆರವಿನೊಂದಿಗೆ 18 ರನ್ ಗಳಿಸಿ ಔಟಾದರೆ, ನಂತರ ಬಂದ ಯಾವುದೇ ಬ್ಯಾಟರ್ಗಳು ದಡ ಸೇರಿಸುವಲ್ಲಿ ವಿಫಲವಾದರು.
ಯುಪಿ ವಾರಿಯರ್ಸ್ ಪರ ಕ್ರಾಂತಿಗೌಡ್, ಗ್ರೇಸ್ ಹ್ಯಾರಿಸ್ ತಲಾ 4 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ, ಚಿನೆಲ್ಲೆ ಹೆನ್ರಿ ತಲಾ 1 ವಿಕೆಟ್ ಪಡೆದರು.







