ಅಂಪೈರ್ ತೀರ್ಪಿಗೆ ಅಸಮಾಧಾನ: ಬ್ಯಾಟ್ನಲ್ಲಿ ಹೊಡೆದು ಹೆಲ್ಮೆಟ್ ಅನ್ನು ಪಾರ್ಕ್ನಿಂದ ಹೊರಗಟ್ಟಿದ ಕಾರ್ಲೋಸ್ ಬ್ರಾತ್ ವೇಟ್

PC : X
ಜಾರ್ಜ್ ಟೌನ್: ವಿವಾದಾತ್ಮಕ ಔಟ್ ಗೆ ಆಕ್ರೋಶ ವ್ಯಕ್ತಪಡಿಸಿದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಕಾರ್ಲೋಸ್ ಬ್ರಾತ್ ವೇಟ್, ಬ್ಯಾಟ್ನಲ್ಲಿ ಹೊಡೆದು ಹೆಲ್ಮೆಟ್ ಅನ್ನು ಪಾರ್ಕ್ನಿಂದ ಹೊರಗಟ್ಟಿದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಮ್ಯಾಕ್ಸ್ 60 ಕೆರೆಬಿಯನ್ 2024 ಪಂದ್ಯಾವಳಿಯಲ್ಲಿ ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ತಂಡದ ಎದುರು ಬ್ರಾತ್ ವೇಟ್ ತಂಡವಾದ ನ್ಯೂಯಾರ್ಕ್ ಸ್ಟ್ರೈಕರ್ಸ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಆಡುವಾಗ ನಡೆದಿದೆ.
ಜೊಶುವಾ ಲಿಟ್ಲ್ ಎಸೆದ ಬಾಲ್ ಸ್ಟಂಪ್ಸ್ ಹಿಂದೆ ಕ್ಯಾಚ್ ಆಗುವುದಕ್ಕೂ ಮುನ್ನ, ಆ ಬಾಲ್ ಬ್ರಾತ್ ವೇಟ್ ರ ತೋಳಿಗೆ ಬಡಿದಿತ್ತು. ಆ ಸಂದರ್ಭದಲ್ಲಿ ಬಾಲ್ ಮತ್ತು ಬ್ಯಾಟ್ ನಡುವೆ ಯಾವುದೇ ಸಂಪರ್ಕವಾದಂತೆ ಕಂಡು ಬಂದಿಲ್ಲ. ಆದರೆ, ಎದುರಾಳಿ ತಂಡದ ಆಟಗಾರರು ಕ್ಯಾಚ್ ಮನವಿ ಮಾಡಿದಾಗ, ಅದನ್ನು ಪುರಸ್ಕರಿಸಿದ ಅಂಪೈರ್ ಬ್ರಾತ್ ವೇಟ್ ಔಟ್ ಎಂದು ತೀರ್ಪು ನೀಡಿದ್ದಾರೆ.
— Cric guy (@Cricguy88) August 25, 2024
ಪೆವಿಲಿಯನ್ ಗೆ ಮರಳುವಾಗ ಕುಪಿತ ಬ್ರಾತ್ ವೇಟ್, ಬೌಂಡರಿ ಗೆರೆಯ ಬಳಿ ಸಮೀಸುತ್ತಿದ್ದಂತೆಯೆ ತಮ್ಮ ಹೆಲ್ಮೆಟ್ ಅನ್ನು ಬ್ಯಾಟ್ ನಿಂದ ಪಾರ್ಕಿನಾಚೆ ಹೊಡೆದಿದ್ದಾರೆ.
ಆದರೂ, ಈ ಪಂದ್ಯದಲ್ಲಿ ನ್ಯೂಯಾರ್ಕ್ ಸ್ಟ್ರೈಕರ್ಸ್ ತಂಡವು, ಗ್ರ್ಯಾಂಡ್ ಕೇಮನ್ ಜಾಗ್ವಾರ್ಸ್ ತಂಡವನ್ನು ಎಂಟು ರನ್ ಗಳಿಂದ ಮಣಿಸುವಲ್ಲಿ ಯಶಸ್ವಿಯಾಯಿತು.







