ಅಮೆರಿಕನ್ ಓಪನ್: ನೊವಾಕ್ ಜೊಕೊವಿಕ್ ಶುಭಾರಂಭ

ನೊವಾಕ್ ಜೊಕೊವಿಕ್ Photo: twitter/@usopen
ನ್ಯೂಯಾರ್ಕ್, ಆ.29: ಅಲೆಕ್ಸಾಂಡರ್ ಮುಲ್ಲರ್ ವಿರುದ್ಧ ಸೋಮವಾರ ರಾತ್ರಿ 6-0, 6-2, 6-3 ಸೆಟ್ಗಳ ಅಂತರದಿಂದ ಜಯ ಸಾಧಿಸಿರುವ ನೊವಾಕ್ ಜೊಕೊವಿಕ್ ಯು.ಎಸ್. ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.
ರಾತ್ರಿ ನಡೆದ ಉದ್ಘಾಟನಾ ಸಮಾರಂಭದ ನಂತರ ತಡವಾಗಿ ಆರಂಭವಾದ ಪಂದ್ಯದಲ್ಲಿ 23 ಗ್ರ್ಯಾನ್ಸ್ಲಾಮ್ ಒಡೆಯ ಜೊಕೊವಿಕ್ ಮೊದಲ ಸೆಟನ್ನು 23 ನಿಮಿಷಗಳಲ್ಲಿ ಗೆದ್ದುಕೊಂಡರು.
ಕೋವಿಡ್-19 ವಿರುದ್ಧದ ಲಸಿಕೆ ತೆಗೆದುಕೊಳ್ಳದ ಕಾರಣ ಕಳೆದ ವರ್ಷ ಅಮೆರಿಕಕ್ಕೆ ಪ್ರಯಾಣಿಸಲು ಜೊಕೊವಿಕ್ಗೆ ಅವಕಾಶ ನಿರಾಕರಿಸಲಾಗಿತ್ತು. ಹೀಗಾಗಿ ಅವರು ಯುಎಸ್ ಓಪನ್ ನಿಂದ ವಂಚಿತರಾಗಿದ್ದರು.
2021ರಲ್ಲಿ ಫೈನಲ್ನಲ್ಲಿ ಡೇನಿಯಲ್ ಮೆಡ್ವೆಡೆವ್ ವಿರುದ್ಧ ಸೋತ ನಂತರ ಜೊಕೊವಿಕ್ ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ.
ಯುಎಸ್ ಓಪನ್ನಲ್ಲಿ ಮೊದಲ ಸುತ್ತಿನಲ್ಲಿ 17ನೇ ಪಂದ್ಯವನ್ನು ಜಯಿಸಿರುವ ಜೊಕೊವಿಕ್ ಸೆ.11ರಲ್ಲಿ ನಂ.1 ರ್ಯಾಂಕ್ ಪಡೆಯುವುದನ್ನು ಖಚಿತಪಡಿಸಿಕೊಂಡರು.
Next Story