ಯು.ಎಸ್. ಓಪನ್: ಸಿಂಗಲ್ಸ್ ಪಂದ್ಯ ಗೆದ್ದ ಹಿರಿಯ ಆಟಗಾರ ವಾವ್ರಿಂಕ

Stan Wawrinka | Photo : PTI
ನ್ಯೂಯಾರ್ಕ್, ಆ.30: ಮಾಜಿ ಯು.ಎಸ್. ಓಪನ್ ಚಾಂಪಿಯನ್ ಸ್ಟ್ಯಾನ್ ವಾವ್ರಿಂಕ 1992ರ ನಂತರ ಯು.ಎಸ್. ಓಪನ್ನಲ್ಲಿ ಸಿಂಗಲ್ಸ್ ಪಂದ್ಯವನ್ನು ಜಯಿಸಿದ ಹಿರಿಯ ಆಟಗಾರನಾಗಿದ್ದಾರೆ. 1992ರಲ್ಲಿ 40ರ ಹರೆಯದ ಜಿಮ್ಮಿ ಕೊನರ್ಸ್ ಈ ಸಾಧನೆ ಮಾಡಿದ್ದರು.
2016ರಲ್ಲಿ ಕೊನೆಯ ಬಾರಿ ನ್ಯೂಯಾರ್ಕ್ನಲ್ಲಿ ಪ್ರಶಸ್ತಿ ಜಯಿಸಿದ್ದ ವಾವ್ರಿಂಕ ಪುರುಷರ ಸಿಂಗಲ್ಸ್ನ ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನಿನ ಯೊಶಿಹಿಟೊ ನಿಶಿಯೊಕಾರನ್ನು 7-6(5), 6-2, 6-4 ಸೆಟ್ಗಳ ಅಂತರದಿಂದ ಮಣಿಸಿದರು.
*ಮೆಡ್ವೆಡೆವ್ 2ನೇ ಸುತ್ತಿಗೆ ಪ್ರವೇಶ: ಮೂರನೇ ಶ್ರೇಯಾಂಕದ ಡೇನಿಯಲ್ ಮೆಡ್ವೆಡೆವ್ ಯು.ಎಸ್. ಓಪನ್ನಲ್ಲಿ ಮಂಗಳವಾರ ಹಂಗೇರಿಯದ ಅಟ್ಟಿಲಾ ಬಾಲಾಝ್ರನ್ನು ಸೋಲಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ 2021ರಲ್ಲಿ ಚಾಂಪಿಯನ್ ಅಗಿದ್ದ ಮೆಡ್ವೆಡೆವ್ 74 ನಿಮಿಷಗಳಲ್ಲಿ ಅಂತ್ಯಗೊಂಡ ಪಂದ್ಯದಲ್ಲಿ ಜಯಭೇರಿ ಬಾರಿಸಿದರು.
ರಶ್ಯದ ಆಟಗಾರ ಅಂತಿಮ-32ರ ಸುತ್ತಿನಲ್ಲಿ ಸ್ಥಾನ ಪಡೆಯಲು ಮ್ಯಾಕ್ಸ್ ಪುರ್ಸೆಲ್ ಅಥವಾ ಕ್ರಿಸ್ಟೋಫರ್ ಒಕಾನ್ನೆಲ್ರನ್ನು ಎದುರಿಸಲಿದ್ದಾರೆ.
ಇದೊಂದು ಉತ್ತಮ ಆರಂಭವಾಗಿದ್ದು, ನನ್ನ ಪ್ರದರ್ಶನವು ನನಗೆ ಖುಷಿಕೊಟ್ಟಿದೆ ಎಂದು ವಿಶ್ವದ ಮೂರನೇ ರ್ಯಾಂಕಿನ ಆಟಗಾರ ಹೇಳಿದ್ದಾರೆ.





