ಶೂನ್ಯಕ್ಕೆ ಔಟಾಗುವಲ್ಲೂ ದಾಖಲೆ ನಿರ್ಮಿಸಿದ ಉಸ್ಮಾನ್ ಖ್ವಾಜಾ!

ಉಸ್ಮಾನ್ ಖ್ವಾಜಾ | PC : NDTV
ಲಂಡನ್: ಲಂಡನ್ನ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಬುಧವಾರ ಆಸ್ಟ್ರೇಲಿಯದ ಉಸ್ಮಾನ್ ಖ್ವಾಜಾ ಅನಪೇಕ್ಷಿತ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮೂರನೇ ಅತಿ ಹೆಚ್ಚು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಾಪಸಾದ ಆಸ್ಟ್ರೇಲಿಯದ ಆಟಗಾರ ಎಂಬ ದಾಖಲೆಯನ್ನು ಸರಿಗಟ್ಟಿದ್ದಾರೆ.
ಖ್ವಾಜಾ 7ನೇ ಓವರ್ನಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಕಾಗಿಸೊ ರಬಾಡರ ಎಸೆತವನ್ನು ಸ್ಲಿಪ್ಸ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅವರು 20 ಎಸೆತಗಳನ್ನು ಎದುರಿಸಿದರು.
ಇದಕ್ಕೂ ಮೊದಲು, ಡೇವಿಡ್ ವಾರ್ನರ್ 22 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಾಪಸಾಗಿದ್ದರೆ, ಶಾನ್ ಮಾರ್ಶ್ 21 ಎಸೆತಗಳನ್ನು ಎದುರಿಸಿ ಶೂನ್ಯ ಗಳಿಸಿದ್ದರು. ಜಂಟಿ ಮೂರನೇ ಸ್ಥಾನದಲ್ಲಿ 20 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ವಾಪಸಾದ ಸ್ಯಾಮಿ ಜೋನ್ಸ್ ಇದ್ದಾರೆ.
Next Story





