ನಿರಾಶೆಗೊಳಿಸಿದ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit; PTI
ಕ್ರೈಸ್ಟ್ಚರ್ಚ್, ಅ.24: ನ್ಯೂಝಿಲ್ಯಾಂಡ್ ವಿರುದ್ಧ ಶನಿವಾರ ನಡೆದ ಎರಡನೇ ಟಿ-20 ಪಂದ್ಯದಲ್ಲಿ ಟೀಮ್ ಇಂಡಿಯಾದ ಆಡುವ ಹನ್ನೊಂದರ ಬಳಗಕ್ಕೆ ಮರಳಿದ 15 ವರ್ಷದ ವೈಭವ್ ಸೂರ್ಯವಂಶಿ ಬ್ಯಾಟಿಂಗ್ನಲ್ಲಿ ಮಿಂಚದೆ ನಿರಾಶೆ ಮೂಡಿಸಿದರು.
ದೀರ್ಘಕಾಲದ ಬಳಿಕ ಭಾರತದ ಆಡುವ ಹನ್ನೊಂದರ ಬಳಗಕ್ಕೆ ಮರಳಿದ ಸೂರ್ಯವಂಶಿ, ವೆಸ್ಟ್ಇಂಡೀಸ್ ವಿರುದ್ಧದ ಐದೂ ಟಿ-20 ಪಂದ್ಯಗಳು ಹಾಗೂ ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಆಡುವ ಅವಕಾಶ ಪಡೆದಿರಲಿಲ್ಲ. 2026ರ ಏಷ್ಯನ್ ಗೇಮ್ಸ್ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅವರು ಭಾರತದ ಪರ ಕೊನೆಯ ಬಾರಿ ಟಿ-20 ಪಂದ್ಯ ಆಡಿದ್ದರು.
ಸರಣಿಯ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ ಗಾಯಗೊಂಡ ಕಾರಣ ಸೂರ್ಯವಂಶಿಗೆ ಕೊನೆಗೂ ಮತ್ತೊಮ್ಮೆ ಅವಕಾಶ ದೊರೆಯಿತು. ಆದರೆ, ನಾಥನ್ ಸ್ಮಿತ್ಗೆ ವಿಕೆಟ್ ಒಪ್ಪಿಸುವ ಮೊದಲು ಎಂಟು ಎಸೆತಗಳನ್ನು ಎದುರಿಸಿದ ಅವರು ಕೇವಲ ನಾಲ್ಕು ರನ್ ಗಳಿಸಲಷ್ಟೇ ಶಕ್ತರಾದರು.
Next Story




