ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದ ಕಿರಿಯ ಆಟಗಾರ ವೈಭವ್ ಸೂರ್ಯವಂಶಿ

ವೈಭವ್ ಸೂರ್ಯವಂಶಿ | Photo Credit : X
ನಗೋಯ: ವೈಭವ್ ಸೂರ್ಯವಂಶಿ ಏಶ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಕಿರಿಯ ವಯಸ್ಸಿನ ಆಟಗಾರನೆಂಬ ಕೀರ್ತಿಗೆ ಭಾಜನರಾದರು.
ಪಾಕಿಸ್ತಾನ ತಂಡದ ವಿರುದ್ಧ ಶನಿವಾರ ಕೊರೊಗಿ ಸ್ಪೋರ್ಟ್ಸ್ ಪಾರ್ಕ್ನಲ್ಲಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ಸೂರ್ಯವಂಶಿ ಈ ಸಾಧನೆ ಮಾಡಿದರು.
15ರ ವಯಸ್ಸಿನ ಆರಂಭಿಕ ಬ್ಯಾಟರ್ ಸೂರ್ಯವಂಶಿ ಭಾರತೀಯ ಶೂಟರ್ ಸೌರಭ್ ಚೌಧರಿ ದಾಖಲೆಯನ್ನು ಮುರಿದರು. ಚೌಧರಿ ಜಕಾರ್ತದಲ್ಲಿ ನಡೆದಿದ್ದ 2018ರ ಏಶ್ಯನ್ ಗೇಮ್ಸ್ನಲ್ಲಿ 16 ವರ್ಷ, ಮೂರು ತಿಂಗಳು, 9 ದಿನಗಳ ವಯಸ್ಸಿನಲ್ಲಿ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದರು.
ಸೂರ್ಯವಂಶಿ(15 ವರ್ಷ, 6 ತಿಂಗಳು, 7 ದಿನಗಳು) ಗೇಮ್ಸ್ನಲ್ಲಿ ಪದಕ ಜಯಿಸಿರುವ ಭಾರತದ ಎರಡನೇ ಕಿರಿಯ ವಯಸ್ಸಿನ ಆಟಗಾರನಾಗಿದ್ದಾರೆ.
ಸಂಜನಾ ಬಥುಲಾ 15 ವರ್ಷ, ಮೂರು ತಿಂಗಳು, 11 ದಿನಗಳಲ್ಲಿ 2023ರ ಏಶ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಸ್ಪೀಡ್ ಸ್ಕೇಟಿಂಗ್ 3000 ಮೀ. ರಿಲೇ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್ ಸದ್ಯ ಮೂರನೇ ಕಿರಿಯ ವಯಸ್ಸಿನ ಪದಕ ವಿಜೇತೆಯಾಗಿದ್ದಾರೆ. ಅನಾಹತ್ 2023ರ ಗೇಮ್ಸ್ನಲ್ಲಿ ಮಹಿಳೆಯರ ಟೀಮ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದರು. ಆಗ ಅವರಿಗೆ 15 ವರ್ಷ, 6 ತಿಂಗಳು, 16 ದಿನಗಳ ವಯಸ್ಸಾಗಿತ್ತು.






