ವಿಜಯ ಹಝಾರೆ ಟ್ರೋಫಿ | ದಿಲ್ಲಿ ತಂಡಕ್ಕೆ ಕೊಹ್ಲಿ ವಾಪಸ್, ಪಂತ್ ನಾಯಕ

ವಿರಾಟ್ ಕೊಹ್ಲಿ , ರಿಷಭ್ ಪಂತ್ | Photo Credit : PTI
ಹೊಸದಿಲ್ಲಿ, ಡಿ.20: ಮುಂಬರುವ ರಾಷ್ಟ್ರೀಯ ಏಕದಿನ ಚಾಂಪಿಯನ್ಶಿಪ್ ವಿಜಯ ಹಝಾರೆ ಟ್ರೋಫಿ ಟೂರ್ನಿಗಾಗಿ ದಿಲ್ಲಿ ತಂಡವನ್ನು ಪ್ರಕಟಿಸಲಾಗಿದ್ದು, ಭಾರತದ ಟೆಸ್ಟ್ ತಂಡದ ಉಪ ನಾಯಕ ರಿಷಭ್ ಪಂತ್ರನ್ನು ನಾಯಕನನ್ನಾಗಿ ನೇಮಿಸಲಾಗಿದೆ. ಹಿರಿಯ ಆಟಗಾರ ಡಿಸೆಂಬರ್ 24ರಿಂದ ಆರಂಭವಾಗಲಿರುವ ಟೂರ್ನಿಯ ಕೆಲವು ಪಂದ್ಯಗಳಲ್ಲಿ ಆಡುವ ನಿರೀಕ್ಷೆ ಇದೆ.
ಪಂತ್ ಹಾಗೂ ಕೊಹ್ಲಿ ಅವರಲ್ಲದೆ, ಹರ್ಷಿತ್ ರಾಣಾ, ಇಶಾಂತ್ ಶರ್ಮಾ ಹಾಗೂ ನವದೀಪ್ ಸೈನಿ ಪಂದ್ಯಾವಳಿಯಲ್ಲಿ ಭಾಗವಹಿಸುವ ಬಯಕೆ ವ್ಯಕ್ತಪಡಿಸಿದ್ದಾರೆ.
ಡಿಡಿಸಿಎ ಅಧಿಕೃತ 16 ಸದಸ್ಯರ ತಂಡದಲ್ಲಿ ಪಂತ್, ಕೊಹ್ಲಿ ಹಾಗೂ ರಾಣಾರನ್ನು ಸೇರಿಸಿಲ್ಲ. ಇವರೆಲ್ಲರೂ ನ್ಯೂಝಿಲ್ಯಾಂಡ್ ವಿರುದ್ದ 2026ರ ಜನವರಿ 11ರಿಂದ ಆರಂಭವಾಗಲಿರುವ ಏಕದಿನ ಸರಣಿಗಿಂತ ಮೊದಲು ಕೆಲವೇ ಪಂದ್ಯಗಳಿಗೆ ಲಭ್ಯವಿರಲಿದ್ದಾರೆ.
ಯಾವ ಪಂದ್ಯಗಳಿಗೆ ಕೊಹ್ಲಿ ಹಾಗೂ ಪಂತ್ ಲಭ್ಯವಿದ್ದಾರೆಂದು ಇನ್ನೂ ದೃಢಪಟ್ಟಿಲ್ಲ.
ಆಯುಷ್ ಬದೋನಿ ಅವರನ್ನು ಉಪ ನಾಯಕನಾಗಿ ನೇಮಿಸಲಾಗಿದೆ. ಪಂತ್ ಟೀಮ್ ಇಂಡಿಯಾಕ್ಕೆ ಅಡಲು ತೆರಳಿದಾಗ ಬದೋನಿ ನಾಯಕತ್ವದ ಹೊಣೆ ವಹಿಸಿಕೊಳ್ಳಲಿದ್ದಾರೆ.
*ಖಾಯಂ ತಂಡ: ಆಯುಷ್ ಬದೋನಿ(ಉಪ ನಾಯಕ), ಅರ್ಪಿತ್ ರಾಣಾ, ಯಶ್ ಧುಲ್, ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ತೇಜಸ್ವಿ ಸಿಂಗ್, ನಿತೀಶ್ ರಾಣಾ, ಹೃತಿಕ್ ಶೋಕೀನ್, ಹರ್ಷ ತ್ಯಾಗಿ, ಸಿಮ್ರನ್ಜೀತ್ ಸಿಂಗ್, ಪ್ರಿನ್ಸ್ ಯಾದವ್, ದಿವಿಜ್ ಮೆಹ್ರಾ, ಆಯುಷ್ ದೊಸೆಜಾ, ವೈಭವ್, ರೋಹನ್ ರಾಣಾ, ಅನುಜ್ ರಾವತ್(ವಿಕೆಟ್ಕೀಪರ್)
*ಹೆಚ್ಚುವರಿ ಆಟಗಾರರು: ವಿರಾಟ್ ಕೊಹ್ಲಿ, ರಿಷಭ್ ಪಂತ್, ನವದೀಪ ಸೈನಿ, ಹರ್ಷಿತ್ ರಾಣಾ, ಇಶಾಂತ್ ಶರ್ಮಾ.







