ವಿಜಯ್ ಹಝಾರೆ ಟ್ರೋಫಿ ನಾಕೌಟ್ ಪಂದ್ಯ ; ಧವಳ್ ಕುಲಕರ್ಣಿಗೆ ಕರೆ ನೀಡಿದ ಮುಂಬೈ
ಮುಂಬೈ: ವಿಜಯ್ ಹಝಾರೆ ಟ್ರೋಫಿ ನಾಕೌಟ್ ಪಂದ್ಯಗಳಿಗೆ ಬುಧವಾರ 16 ಸದಸ್ಯರುಗಳನ್ನು ಒಳಗೊಂಡ ತಂಡವನ್ನು ಆಯ್ಕೆ ಮಾಡಿರುವ ಮುಂಬೈ ಆಯ್ಕೆ ಸಮಿತಿಯು ಹಿರಿಯ ವೇಗಿ ಧವಳ್ ಕುಲಕರ್ಣಿಗೆ ಕರೆ ನೀಡಿದ್ದಾರೆ. ನಾಕೌಟ್ ಪಂದ್ಯಗಳು ಡಿಸೆಂಬರ್ 11ರ ನಂತರ ರಾಜ್‌ಕೋಟ್‌ನಲ್ಲಿ ಆಡಲಾಗುತ್ತದೆ.
ಮುಂಬೈ ತಂಡ ಡಿ.11ರಂದು ನಡೆಯುವ ಕ್ವಾರ್ಟರ್ ಫೈನಲ್‌ನಲ್ಲಿ ತಮಿಳುನಾಡು ತಂಡವನ್ನು ಎದುರಿಸಲಿದೆ.
ಈ ಋತುವಿನಲ್ಲಿ ಯಾವುದೇ ಸೀಮಿತ ಓವರ್ ಟೂರ್ನಿಗಳಿಗೆ ಆಯ್ಕೆಯಾಗದ ಕುಲಕರ್ಣಿಗೆ ಕರೆ ನೀಡುವ ನಿರ್ಧಾರಕ್ಕೆ ಕಾರಣವನ್ನು ವಿವರಿಸಿದ ಮುಂಬೈ ಮುಖ್ಯ ಆಯ್ಕೆಗಾರ ರಾಜು ಕುಲಕರ್ಣಿ, ಧವಳ್ ಅವರು ಹಿರಿಯ ಬೌಲರ್. ಎಲ್ಲ ಮೂರು ಮಾದರಿ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಅವರನ್ನು ರಣಜಿ ಟ್ರೋಫಿಯಲ್ಲಿ ಮಾತ್ರ ಆಡಿಸಲು ಯೋಚಿಸಿದ್ದೆವು. ನಾವೀಗ ನಾಕೌಟ್ ಹಂತದಲ್ಲಿದ್ದೇವೆ. ಏಕದಿನ ಕ್ರಿಕೆಟಿಗೆ ಅವರನ್ನು ಕರೆಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು.
34ರ ಹರೆಯದ ಕುಲಕರ್ಣಿ 129 ಲಿಸ್ಟ್ ಎ ಪಂದ್ಯಗಳಲ್ಲಿ 223 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮುಂಬೈ ತಂಡ: ಅಜಿಂಕ್ಯ ರಹಾನೆ(ನಾಯಕ), ಶಮ್ಸ್ ಮುಲಾನಿ(ಉಪ ನಾಯಕ), ಜಯ್ ಬಿಸ್ಟಾ, ದಿವ್ಯಾಂಶ್ ಸಕ್ಸೇನ, ಆಕಾಶ್ ಆನಂದ್, ಶಿವಂ ದುಬೆ, ಹಾರ್ದಿಕ್ ಟಾಮೋರ್, ಪ್ರಸಾದ್ ಪವಾರ್, ತನುಶ್ ಕೋಟ್ಯಾನ್, ಸಾಗರ್ ಮಿಶ್ರಾ, ಅಥರ್ವ ಅಂಕೋಲೇಕರ್, ಧವಳ್ ಕುಲಕರ್ಣಿ, ಮೋಹಿತ್ ಅವಸ್ಥಿ, ರಾಯ್‌ಸ್ಟನ್ ಡಯಾಸ್, ಸಕ್ಷೇಮ್ ಜಾ, ಸಾಯಿರಾಜ್ ಪಾಟೀಲ್.





