ವಿನೂ ಮಂಕಡ್ ಟ್ರೋಫಿ ಟೂರ್ನಿ | ಅನ್ವಯ್ ದ್ರಾವಿಡ್ ಶತಕ, ಕರ್ನಾಟಕಕ್ಕೆ ಗೆಲುವು

ಅನ್ವಯ್ ದ್ರಾವಿಡ್ | Photo Credit : X
ಬೆಂಗಳೂರು: ಭಾರತ ತಂಡದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ 100 ಎಸೆತಗಳಲ್ಲಿ 151 ರನ್ ಗಳಿಸಿ ಕರ್ನಾಟಕ ತಂಡವು ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಗುಜರಾತ್ ತಂಡ ನೀಡಿದ್ದ 358 ರನ್ ಗುರಿಯನ್ನು ಇನ್ನೂ ಐದು ವಿಕೆಟ್ ಬಾಕಿ ಇರುವಾಗಲೇ ಗೆಲ್ಲುವಲ್ಲಿ ನೆರವಾದರು.
ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ನಾಯಕನಾಗಿ ಮುನ್ನಡೆಸಿದ 17ರ ವಯಸ್ಸಿನ ಅನ್ವಯ್ ರನ್ ಚೇಸ್ ವೇಳೆ ಧ್ರುವ್ ಕೃಷ್ಣನ್ ಅವರೊಂದಿಗೆ 3ನೇ ವಿಕೆಟ್ಗೆ 204 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಅನಿಕೇಶ್ ರೆಡ್ಡಿ ಅವರೊಂದಿಗೆ 4ನೇ ವಿಕೆಟ್ಗೆ 61 ರನ್ ಸೇರಿಸಿ ಗೆಲುವನ್ನು ಖಚಿತಪಡಿಸಿದರು. ಅನಿಕೇತ್ ಹಾಗೂ ತೇಜಸ್ ಕರ್ನಾಟಕಕ್ಕೆ ಐದು ವಿಕೆಟ್ ಗೆಲುವು ತಂದುಕೊಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ್ದ ಗುಜರಾತ್ 357 ರನ್ ಗಳಿಸಿತು.
Next Story




