52ನೇ ಏಕದಿನ ಶತಕ ಸಿಡಿಸಿದ ಕೊಹ್ಲಿ: ಸಚಿನ್ ರ ಇನ್ನೊಂದು ದಾಖಲೆಯನ್ನು ಹಿಂದಿಕ್ಕಿದ ಮಾಜಿ ನಾಯಕ

Photo Credit: R.V. Moorthy
ರಾಂಚಿ, ನ. 30: ರಾಂಚಿಯಲ್ಲಿ ರವಿವಾರ ನಡೆದ ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತದ ಪರವಾಗಿ ವಿರಾಟ್ ಕೊಹ್ಲಿ ತನ್ನ 52ನೇ ಏಕದಿನ ಶತಕವನ್ನು ಸಿಡಿಸಿದ್ದಾರೆ. ಈ ಮೂಲಕ ಅವರು ಸಚಿನ್ ತೆಂಡುಲ್ಕರ್ರನ್ನು ಹಿಂದಿಕ್ಕಿ ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಅವರು 120 ಎಸೆತಗಳಲ್ಲಿ 135 ರನ್ ಗಳನ್ನು ಗಳಿಸಿದರು.
ಕ್ರಿಕೆಟ್ನ ಮಾದರಿಯೊಂದರಲ್ಲಿ ಅತಿ ಹೆಚ್ಚಿನ ಶತಕಗಳನ್ನು ಗಳಿಸಿದ ಆಟಗಾರನಾಗಿ ಕೊಹ್ಲಿ ಈಗ ಹೊರಹೊಮ್ಮಿದ್ದಾರೆ. ಈ ಪ್ರಕ್ರಿಯೆಯಲ್ಲಿ ಅವರು ಸಚಿನ್ ತೆಂಡುಲ್ಕರ್ರನ್ನು ಹಿಂದಿಕ್ಕಿದ್ದಾರೆ.
ಟೆಸ್ಟ್ ಮಾದರಿಯಲ್ಲಿ 51 ಶತಕಗಳನ್ನು ಗಳಿಸಿರುವ ಸಚಿನ್ ಈವರೆಗೆ ಈ ದಾಖಲೆಯನ್ನು ಕೊಹ್ಲಿಯೊಂದಿಗೆ ಹಂಚಿಕೊಂಡಿದ್ದರು. ಈಗ ಕೊಹ್ಲಿಯ ಏಕದಿನ ಮಾದರಿಯ ಶತಕಗಳ ಸಂಖ್ಯೆ 52ನ್ನು ತಲುಪಿದ ಬಳಿಕ ಈ ದಾಖಲೆಯು ಅವರ ಹೆಸರಿಗೆ ಹಸ್ತಾಂತರಗೊಂಡಿದೆ.
ಇದು ದಕ್ಷಿಣ ಆಫ್ರಿಕ ವಿರುದ್ಧ ಕೊಹ್ಲಿಯ ಆರನೇ ಏಕದಿನ ಶತಕವಾಗಿದೆ.
ಏಕದಿನ ಮಾದರಿಯಲ್ಲಿ, ಸಚಿನ್ರ 49 ಶತಕಗಳ ದಾಖಲೆಯನ್ನು ಕೊಹ್ಲಿ ಈಗಾಗಲೇ ಮುರಿದು ಮುಂದುವರಿದಿದ್ದಾರೆ.





