ಶತಕದ ಕಿಂಗ್ ಕೊಹ್ಲಿ : ಹರಿಣಗಳಿಗೆ 327 ರನ್ ಗುರಿ
ವಿಶ್ವಕಪ್ : ಈಡನ್ ಗಾರ್ಡನ್ ನಲ್ಲಿ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮ

Photo : cricketworldcup.com
ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ಗೆಲುವಿಗೆ 327 ರನ್ ಸ್ಪರ್ಧಾತ್ಮಕ ಗುರಿ ನೀಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಟಾಸ್ ಗೆದ್ದ ಭಾರತದ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡರು. ಬ್ಯಾಟಿಂಗ್ ಅರಂಭಿಸಿದ ಭಾರತದ ಓಪನರ್ ಗಳು ತಂಡಕ್ಕೆ ಭರ್ಜರಿ ಆರಂಭ ನೀಡುವ ಪ್ರಯತ್ನ ಮಾಡಿದರು. ಸ್ಪೋಟಕವಾಗಿ ಬ್ಯಾಟ್ ಬೀಸಿದ ರೋಹಿತ್ ಶರ್ಮಾ 24 ಬಾಲ್ ಗಳಲ್ಲಿ 40 ರನ್ ಬಾರಿಸಿ ದಕ್ಷಿಣ ಆಫ್ರಿಕಾವನ್ನು ಒತ್ತಡಕ್ಕೆ ಸಿಲುಕಿಸಿದರು. 5.5 ಓವರ್ ನಲ್ಲಿ ತಂಡ 62 ರನ್ ಗಳಿಸಿದ್ದಾಗ ಬ್ಯಾಟಿಂಗ್ ನಲ್ಲಿ ಎಡವಿದ ರೋಹಿತ್, ರಬಾಡ ಬೌಲಿಂಗ್ ನಲ್ಲಿ ಬವುಮಗೆ ಕ್ಯಾಚಿತ್ತು ಔಟ್ ಆದರು. ಅವರ ಬೆನ್ನಗೇ ವಿಕೆಟ್ ಒಪ್ಪಿಸಿದ ಶುಬ್ ಮನ್ ಗಿಲ್ 23 ರನ್ ಬಾರಿಸಿದರು. ತಂಡಕ್ಕೆ ಆಸರೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಐಯ್ಯರ್ ಜೋಡಿ ಭರ್ಜರಿ ಜೊತೆಯಾಟ ಆಡಿದರು. ಆಕರ್ಷಕ ಆಟ ಪ್ರದರ್ಶಿಸಿದ ಐಯ್ಯರ್ 7 ಬೌಂಡರಿ 2 ಸಿಕ್ಸರ್ ಸಹಿತ 77 ರನ್ ಬಾರಿಸಿ ಲುಂಗಿ ಎನ್ ಗಿಡಿ ಬೌಲಿಂಗ್ ನಲ್ಲಿ ವಿಕಟ್ ಕಳೆದುಕೊಂಡರೆ, ರಕ್ಷಣಾತ್ಮಕ ಆಟ ದ ಮೂಲಕ ತಂಡದ ಮೊತ್ತ ಮುನ್ನೂರು ದಾಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ 121 ಎಸೆತಗಲ್ಲಿ10 ಬೌಂಡರಿ ಸಹಿತ 101 ರನ್ ಬಾರಿಸಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ49 ಶತಕ ದಾಖಲಿಸುವುದರೊಂದಿಗೆ ಸಚಿನ್ ಅವರ ಹೆಸರಲ್ಲಿದ್ದ ಅತೀ ಹೆಚ್ಚು ಶತಕದ ದಾಖಲೆ ಸರಿಗಟ್ಟಿದರು. ಭಾರತದ ಪರ ಕೊನೆಯಲ್ಲಿ ಸ್ಟೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಯಾದವ್ 22 ರನ್ ಗಳಿಸಿದರೆ ರವೀಂದ್ರ ಜಡೇಜಾ 29 ರನ್ ಬಾರಿಸಿದರು.
ದಕ್ಷಿಣ ಆಫ್ರಿಕಾ ಪರ ಸಂಘಟಿತ ಬೌಲಿಂಗ್ ಪ್ರದರ್ಶನ ನೀಡಿದ ಲುಂಗಿ ಎನ್ ಗಿಡಿ, ಮಾರ್ಕೊ ಜಾನ್ಸನ್, ರಬಾಡ, ಮಹಾರಾಜ್, ಶಂಶಿ ತಲಾ ಒಂದು ವಿಕೆಟ್ ಪಡೆದರು.





