ಟೆಸ್ಟ್ ಸಿಕ್ಸರ್ಗಳ ಪಟ್ಟಿ: ವೀರೇಂದ್ರ ಸೆಹ್ವಾಗ್ರನ್ನು ಸರಿಗಟ್ಟಿದ ಪಂತ್

ರಿಷಭ್ ಪಂತ್ | PTI
ಲಂಡನ್: ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಂತ ಹೆಚ್ಚು ಸಿಕ್ಸರ್ಗಳನ್ನು ಬಾರಿಸಿದ ಭಾರತೀಯ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ವೀರೇಂದ್ರ ಸೆಹ್ವಾಗ್ರ ಸಾಧನೆಯನ್ನು ರಿಷಭ್ ಪಂತ್ ಸರಿಗಟ್ಟಿದ್ದಾರೆ.
ಪಂತ್ ಈವರೆಗೆ 90 ಸಿಕ್ಸರ್ಗಳನ್ನು ಸಿಡಿಸಿದ್ದಾರೆ. ಇಷ್ಟೇ ಸಂಖ್ಯೆಯ ಸಿಕ್ಸ್ಗಳನ್ನು ಸೆಹ್ವಾಗ್ ಕೂಡ ಬಾರಿಸಿದ್ದಾರೆ. ಅಗ್ರ ಐದರ ಪಟ್ಟಿಯಲ್ಲಿ ರೋಹಿತ್ ಶರ್ಮಾ (88), ಮಹೇಂದ್ರ ಸಿಂಗ್ ಧೋನಿ (78) ಮತ್ತು ರವೀಂದ್ರ ಜಡೇಜ (74) ಇದ್ದಾರೆ.
ಸೆಹ್ವಾಗ್ 104 ಟೆಸ್ಟ್ಗಳಲ್ಲಿ 90 ಸಿಕ್ಸರ್ಗಳನ್ನು ಬಾರಿಸಿದರೆ, ಪಂತ್ ಕೇವಲ 46 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಆ ಮೂಲಕ, ಇಂದಿನ ಕೆಂಪು ಚೆಂಡಿನ ಕ್ರಿಕೆಟ್ (ಟೆಸ್ಟ್)ನಲ್ಲಿ ಅತ್ಯಂತ ಆಕ್ರಮಣಕಾರಿ ವಿಕೆಟ್ಕೀಪರ್-ಬ್ಯಾಟರ್ಗಳ ಪೈಕಿ ಒಬ್ಬರಾಗಿದ್ದಾರೆ.
27 ವರ್ಷದ ಪಂತ್ ಈ ಮೈಲಿಗಲ್ಲನ್ನು ಇಂಗ್ಲೆಂಡ್ ವಿರುದ್ಧದ ಆ್ಯಂಡರ್ಸನ್-ತೆಂಡುಲ್ಕರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯದಲ್ಲಿ ತಲುಪಿದರು. ಭಾರತೀಯ ಇನಿಂಗ್ಸ್ನ 110ನೇ ಓವರ್ನಲ್ಲಿ ಜೋಫ್ರಾ ಆರ್ಚರ್ ಎಸೆತದಲ್ಲಿ ಅವರು ತನ್ನ 90ನೇ ಟೆಸ್ಟ್ ಸಿಕ್ಸರ್ ಸಿಡಿಸಿದರು.
ಕಾಲಿನ ಬೆರಳಿಗೆ ಆಗಿರುವ ಗಾಯದ ಹೊರತಾಗಿಯೂ, ಮೈದಾನಕ್ಕಿಳಿದ ಅವರು ಆರ್ಚರ್ರ ಶಾರ್ಟ್ ಎಸೆತವನ್ನು ಎತ್ತಿ ಪೆವಿಲಿಯನ್ನತ್ತ ಅಟ್ಟಿದರು.
ಆದರೆ, ಆರ್ಚರ್ರ ಮುಂದಿನ ಓವರ್ನಲ್ಲೇ ಪಂತ್ ನಿರ್ಗಮಿಸಿದರು. ಪಂತ್ ಅವರು 75 ಎಸೆತಗಳಲ್ಲಿ 54 ರನ್ ಮಾಡಿದರು.







