ಭಾರತ- ನೇಪಾಳ ನಡುವಿನ ಏಶ್ಯಕಪ್ ಪಂದ್ಯವೂ ಮಳೆಯಿಂದ ರದ್ದಾದರೆ ಏನಾಗುತ್ತದೆ?

Photo: PTI
ಪಲ್ಲೆಕಲೆ: ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವುದರೊಂದಿಗೆ ಪಂದ್ಯ ನೋಡಲು ಕುತೂಹಲದಿಂದ ಕಾದಿದ್ದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಪಂದ್ಯ ರದ್ದಾದ ನಂತರ ಉಭಯ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಂಡಿವೆ.
ಶ್ರೀಲಂಕಾವು ಸೆಪ್ಟೆಂಬರ್ ನಲ್ಲಿ ತಮ್ಮ ದೇಶದಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಿಗದಿಪಡಿಸುವುದಿಲ್ಲ, ದ್ವೀಪರಾಷ್ಟ್ರ ವರ್ಷದ ಈ ಸಮಯದಲ್ಲಿ ಮಾನ್ಸೂನ್ ಗೆ ಸಾಕ್ಷಿಯಾಗಲಿದೆ. ಪಲ್ಲೆಕೆಲೆ ಮತ್ತು ಕೊಲಂಬೊದಂತಹ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗಿದೆ ಹಾಗೂ ಕ್ಯಾಂಡಿಯಲ್ಲಿ ಸೋಮವಾರವೂ ಮಳೆಯ ಭೀತಿ ಇದೆ. ಅಕ್ಯುವೆದರ್ ಪ್ರಕಾರ, 89 ಪ್ರತಿಶತದಷ್ಟು ಮಳೆ ಆಗಮನದ ಸಂಭವನೀಯತೆ ಇದೆ, ಜೊತೆಗೆ ಮಳೆಯ ಜೊತೆಗೆ ಮೋಡ ಕವಿದ ವಾತಾವರಣವಿದೆ, ಜೊತೆಗೆ 26 ರಷ್ಟು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಒಂದು ವೇಳೆ ನೇಪಾಳದ ವಿರುದ್ಧ ಭಾರತದ ಪಂದ್ಯವೂ ಮಳೆಗಾಹುತಿಯಾದರೆ ಭಾರತವು ಮುಂದಿನ ಸುತ್ತಿಗೇರುವ ಅವಕಾಶ ಹೇಗಿರುತ್ತದೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ನಿಯಮಗಳ ಪ್ರಕಾರ, ವಿಜೇತರನ್ನು ನಿರ್ಧರಿಸಲು ಪ್ರತಿ ತಂಡವು ಕನಿಷ್ಠ 20 ಓವರ್ ಗಳವರೆಗೆ ಆಡಬೇಕು. ಪಂದ್ಯವು ವಿಳಂಬವಾಗಿ ಆರಂಭವಾದರೆ, ಕಳೆದುಹೋದ ಗಂಟೆಗಳ ಆಧಾರದ ಮೇಲೆ ಓವರ್ಗಳನ್ನು ಕಡಿತ ಮಾಡುವ ಸಾಧ್ಯತೆಯಿದೆ. ಎರಡನೇ ಇನ್ನಿಂಗ್ಸ್ ಆರಂಭ ತಡವಾದರೆ , ಓವರ್ಗಳು ಕಡಿಮೆಯಾಗುತ್ತಿದ್ದಂತೆ ಸ್ಕೋರ್ಗಳನ್ನು ಸರಿಹೊಂದಿಸಲಾಗುತ್ತದೆ.
ನೇಪಾಳ ವಿರುದ್ಧದ ಪಂದ್ಯದ ಭವಿಷ್ಯವು ಶನಿವಾರದಂತೆಯೇ ಆದರೆ , ಎರಡೂ ತಂಡಗಳು ತಲಾ ಒಂದು ಅಂಕವನ್ನು ಹಂಚಿಕೊಳ್ಳುತ್ತವೆ. ಇದರರ್ಥ ನೇಪಾಳವು ಸೂಪರ್ ಫೋರ್ ರೇಸ್ ನಿಂದ ಹೊರಗುಳಿಯುತ್ತದೆ. ಗ್ರೂಪ್ ಹಂತದಲ್ಲಿ ಭಾರತವು ಎರಡು ಮಳೆಗಾಹುತಿಯಾದ ಪಂದ್ಯಗಳಿಂದ ಒಟ್ಟು ಎರಡು ಅಂಕಗಳನ್ನು ಗಳಿಸುತ್ತದೆ. ನೇಪಾಳದ ವಿರುದ್ಧ ಜಯ ಸಾಧಿಸಿರುವ ಪಾಕಿಸ್ತಾನ ಈಗಾಗಲೇ ಸೂಪರ್-4 ಹಂತಕ್ಕೇರಿದೆ. ಭಾರತವು 2 ಅಂಕದೊಂದಿಗೆ ಸೂಪರ್-4 ಹಂತಕ್ಕೇರಲಿದೆ.