ಮಹಿಳೆಯರ ಏಶ್ಯಕಪ್ ಹಾಕಿ ಟೂರ್ನಿ | ಸಿಂಗಾಪುರ ವಿರುದ್ಧ ಭಾರತಕ್ಕೆ ಭರ್ಜರಿ ಜಯ

PC : @TheHockeyIndia
ಗಾಂಗ್ಶು, ಸೆ.8: ಸಿಂಗಾಪುರ ತಂಡವನ್ನು 12-0 ಗೋಲುಗಳ ಅಂತರದಿಂದ ಹೀನಾಯವಾಗಿ ಸೋಲಿಸಿರುವ ಭಾರತ ತಂಡವು 2025ರ ಆವೃತ್ತಿಯ ಮಹಿಳೆಯರ ಏಶ್ಯಕಪ್ ಹಾಕಿ ಪಂದ್ಯಾವಳಿಯಲ್ಲಿ ಸೂಪರ್-4 ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಂಡಿದೆ.
ಸೋಮವಾರ ಗಾಂಗ್ಶು ಕಾನಲ್ ಸ್ಪೋರ್ಟ್ಸ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಮುಮ್ತಾಝ್ ಖಾನ್ ಹಾಗೂ ನವನೀತ್ ಕೌರ್ ಹ್ಯಾಟ್ರಿಕ್ ಗೋಲು ಗಳಿಸಿದರು.
ಭರ್ಜರಿ ಗೆಲುವು ದಾಖಲಿಸಿರುವ ಭಾರತ ತಂಡವು ‘ಬಿ’ ಗುಂಪಿನಲ್ಲಿ ಜಪಾನ್ ತಂಡವನ್ನು ಗೊಲು ವ್ಯತ್ಯಾಸದಲ್ಲಿ ಹಿಂದಿಕ್ಕಿ ಅಗ್ರ ಸ್ಥಾನಕ್ಕೇರಿದೆ.
ಭಾರತ ತಂಡವು ಮೊದಲ ಕ್ವಾರ್ಟರ್ ನಲ್ಲಿ ನಾಲ್ಕು ಗೋಲುಗಳನ್ನು ಗಳಿಸಿ ಮೇಲುಗೈ ಪಡೆಯಿತು. 2ನೇ ಕ್ವಾರ್ಟರ್ನಲ್ಲಿ ಇನ್ನೂ 3 ಗೋಲುಗಳನ್ನು, 3ನೇ ಕ್ವಾರ್ಟರ್ ನಲ್ಲಿ 4 ಹಾಗೂ ಕೊನೆಯ ಹಂತದಲ್ಲಿ ಒಂದು ಗೋಲು ಗಳಿಸಿತು.
ಭಾರತ ತಂಡವು ಥಾಯ್ಲೆಂಡ್ ವಿರುದ್ಧ 11-0 ಅಂತರದಿಂದ ಗೆಲುವು ದಾಖಲಿಸಿ ಪಂದ್ಯಾವಳಿಯಲ್ಲಿ ತನ್ನ ಅಭಿಯಾನ ಆರಂಭಿಸಿತು. 2ನೇ ಗೇಮ್ನಲ್ಲಿ ಜಪಾನ್ ತಂಡದ ಎದುರು 2-2ರಿಂದ ಡ್ರಾ ಸಾಧಿಸಿತು.





