ಮಹಿಳಾ ಏಶ್ಯನ್ ಚಾಂಪಿಯನ್ಸ್ ಟ್ರೋಫಿ| ಮಲೇಶ್ಯವನ್ನು 4-1 ಅಂತರದಿಂದ ಸೋಲಿಸಿದ ಭಾರತ

Photo Credit : PTI
ಭೋಪಾಲ್: ಭೋಪಾಲ್ನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಮಹಿಳಾ ಹಾಕಿ ತಂಡವು ಮಲೇಶ್ಯವನ್ನು 4-1 ಗೋಲುಗಳ ಅಂತರದಿಂದ ಸೋಲಿಸಿದೆ. ಇದರೊಂದಿಗೆ, ಸತತ ಮೂರನೇ ಬಾರಿಗೆ ಮಹಿಳಾ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವ ನಿಟ್ಟಿನಲ್ಲಿ ತನ್ನ ಅಭಿಯಾನವನ್ನು ಆರಂಭಿಸಿದೆ.
ಎರಡನೇ ಕ್ವಾರ್ಟರ್ನಲ್ಲಿ ನುರಾಮಿರಾ ಜುಲ್ಕಿಫ್ಲಿ ಪ್ರವಾಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಾಗ, ಸಲೀಮಾ ಟೇಟೆ ನಾಯಕತ್ವದ ಭಾರತ ತಂಡ ಹಿನ್ನಡೆ ಅನುಭವಿಸಿತು. ಆದರೆ ಕೆಲವೇ ಸೆಕೆಂಡುಗಳಲ್ಲಿ ಮುಮ್ತಾಜ್ ಖಾನ್ ಗೋಲು ಗಳಿಸಿ ಆತಿಥೇಯ ತಂಡಕ್ಕೆ ಸಮಬಲ ತಂದುಕೊಟ್ಟರು. ಮೊದಲಾರ್ಧದ ಅಂತ್ಯಕ್ಕೆ ಸ್ಕೋರ್ 1-1 ಆಗಿತ್ತು.
ಬಳಿಕ, ಮೂರನೇ ಕ್ವಾರ್ಟರ್ನಲ್ಲಿ ಸಲೀಮಾ ಮತ್ತು ಪೂಜಾ ಸಾಹೂ ಗಳಿಸಿದ ಗೋಲುಗಳ ನೆರವಿನಿಂದ ಭಾರತ ಎರಡು ಗೋಲುಗಳ ಮುನ್ನಡೆ ಸಾಧಿಸಿತು. ನಾಲ್ಕನೇ ಕ್ವಾರ್ಟರ್ನಲ್ಲಿ ಲಾಲ್ರೆಮ್ಸಿಯಾಮಿ ಕೂಡ ಗೋಲು ದಾಖಲಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು.
ಭಾರತ ಶನಿವಾರ ದಕ್ಷಿಣ ಕೊರಿಯ ತಂಡವನ್ನು ಎದುರಿಸಲಿದೆ.
ಇದಕ್ಕೂ ಮೊದಲು, ಇದೇ ಕ್ರೀಡಾಂಗಣದಲ್ಲಿ ನಡೆದ ಇತರ ರೌಂಡ್-ರಾಬಿನ್ ಪಂದ್ಯಗಳಲ್ಲಿ ಜಪಾನ್ 1-0 ಅಂತರದಿಂದ ಕೊರಿಯ ತಂಡವನ್ನು ಮಣಿಸಿದರೆ, ಚೀನಾ 7-0 ಗೋಲುಗಳಿಂದ ಥೈಲ್ಯಾಂಡ್ನ್ನು ಸೋಲಿಸಿತು.






