ಮಹಿಳೆಯರ ಹಾಕಿ ವಿಶ್ವಕಪ್: ಐದನೇ ಸ್ಥಾನದ ಮೇಲೆ ಭಾರತದ ಲಕ್ಷ್ಯ

Photo Credit: PTI
ಆ್ಯಮ್ಸ್ಟೆಲ್ವೀನ್, ಆ. 26: ಆಸ್ಟ್ರೇಲಿಯ ತಂಡದ ವಿರುದ್ಧ ಗೋಲುರಹಿತ ಡ್ರಾಗೊಳಿಸಿದ ನಂತರ ತನ್ನ ಸೆಮಿ ಫೈನಲ್ ಆಸೆ ಕೈಬಿಟ್ಟಿದ್ದ ಭಾರತ ತಂಡವು ಎಫ್ಐಎಚ್ ಮಹಿಳೆಯರ ವಿಶ್ವಕಪ್ನಲ್ಲಿ ಗುರುವಾರ ಐದನೇ-ಆರನೇ ಸ್ಥಾನಕ್ಕಾಗಿ ನಡೆಯುವ ಕ್ಲಾಸಿಫಿಕೇಶನ್ ಪಂದ್ಯದಲ್ಲಿ ಜರ್ಮನಿ ತಂಡವನ್ನು ಎದುರಿಸಲಿದೆ. ಐದನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸುವ ವಿಶ್ವಾಸದಲ್ಲಿದೆ.
ಭಾರತದ ಮಹಿಳಾ ತಂಡವು 1974ರ ವಿಶ್ವಕಪ್ ನಂತರ ನಾಲ್ಕನೇ ಸ್ಥಾನ ಪಡೆದು ಶ್ರೇಷ್ಠ ಸಾಧನೆ ಮಾಡುವ ಭರವಸೆ ಮೂಡಿಸಿತ್ತು. ಆದರೆ ಆಸ್ಟ್ರೇಲಿಯದ ವಿರುದ್ಧ ಗೋಲು ಗಳಿಸದ ಕಾರಣ ಈ ಕನಸು ಕೈಗೂಡಲಿಲ್ಲ.
ಸೆಪ್ಟೆಂಬರ್ನಲ್ಲಿ ನಡೆಯಲಿರುವ ಏಶ್ಯನ್ ಗೇಮ್ಸ್ನತ್ತ ಭಾರತ ತಂಡ ತನ್ನ ಗಮನ ಹರಿಸಲಿದ್ದು, ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದರೆ, 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ ನಲ್ಲಿ ನೇರ ಅರ್ಹತೆ ಪಡೆಯುವುದು ಖಚಿತವಾಗಲಿದೆ.
ಭಾರತ ತಂಡವು ಹಿಂದಿನ ಆವೃತ್ತಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು.
ಆ್ಯಮ್ಸ್ಟೆಲ್ವೀನ್ನಲ್ಲಿ ಕೇವಲ ಒಂದು ಪಂದ್ಯದಲ್ಲಿ ಸೋಲನುಭವಿಸಿ, ಗರಿಷ್ಠ ರ್ಯಾಂ ಕಿನ ಚೀನಾ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯದ ವಿರುದ್ಧ ಡ್ರಾ ಸಾಧಿಸಿರುವ ಹೊರತಾಗಿಯೂ ಭಾರತ ತಂಡವು ಗೋಲುಗಳ ಬರ ಎದುರಿಸಿರುವುದು ಚಿಂತೆಯ ವಿಚಾರವಾಗಿದೆ. ದೀಪಿಕಾ ಹಾಗೂ ನವನೀತ್ ಕೌರ್ ತಲಾ ಎರಡು ಗೋಲು ಗಳಿಸಿದ್ದರು.






