ಮಹಿಳೆಯರ ಟಿ20 ವಿಶ್ವಕಪ್ ಟೂರ್ನಿ | ಭದ್ರತೆಗೆ ಸೇನೆಯ ಮೊರೆ ಹೋದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ

ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ
ಢಾಕಾ : ಮಹಿಳೆಯರ ಟಿ20 ವಿಶ್ವಕಪ್ ಆಯೋಜನೆಗೆ ಭದ್ರತೆಯ ಭರವಸೆ ನೀಡುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು(ಬಿಸಿಬಿ)ಸೇನಾ ಮುಖ್ಯಸ್ಥರಿಗೆ ಪತ್ರ ಬರೆದಿದೆ ಎಂದು ಕ್ರಿಕ್ ಬಝ್ ವೆಬ್ಸೈಟ್ ವರದಿ ಮಾಡಿದೆ.
ಮೂಲ ವೇಳಾಪಟ್ಟಿಯಂತೆ ಟೂರ್ನಿಯು ಅಕ್ಟೋಬರ್ 3ರಿಂದ 20ರ ತನಕ ನಡೆಯಲಿದೆ. ಸೆ.27ರಿಂದ ಟೂರ್ನಿಯ ಅಭ್ಯಾಸ ಪಂದ್ಯಗಳು ಆರಂಭವಾಗಲಿವೆ.
ಹೊಸ ಮೀಸಲಾತಿ ನೀತಿಯ ವಿರುದ್ಧ ವಿದ್ಯಾರ್ಥಿ ಚಳವಳಿ ವ್ಯಾಪಕ ಹಿಂಸೆಗೆ ತಿರುಗಿದ ಬೆನ್ನಲ್ಲೇ ಪ್ರಧಾನಿಯಾಗಿದ್ದ ಶೇಕ್ ಹಸೀನಾ ದೇಶ ತೊರೆದಿದ್ದು ಬಾಂಗ್ಲಾದೇಶದಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿದೆ.
Next Story





