ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ : ಕನ್ನಡಿಗ ಡಿ.ಪಿ. ಮನು, ಕಿಶೋರ್ ಫೈನಲ್ ಗೆ ಪ್ರವೇಶ
ನೀರಜ್ ಚೋಪ್ರಾ ಸಹಿತ ಭಾರತದ ಮೂವರು ಜಾವೆಲಿನ್ ಎಸೆತಗಾರರು ಫೈನಲ್ ಗೆ ಲಗ್ಗೆ
ಡಿ.ಪಿ. ಮನು, Photo: Twitter
ಬುಡಾಪೆಸ್ಟ್: ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಪುರುಷರ ಜಾವೆಲಿನ್ ಎಸೆತದ ಸ್ಪರ್ಧೆಯಲ್ಲಿ ಭಾರತದ ಎಲ್ಲ ಮೂವರು ಜಾವೆಲಿನ್ ಎಸೆತಗಾರರು 12 ಸ್ಪರ್ಧಿಗಳಿರುವ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ.
ಶುಕ್ರವಾರ ಒಲಿಂಪಿಕ್ಸ್ ಚಾಂಪಿಯನ್ ಚೋಪ್ರಾ(88.77 ಮೀ.) ಎ ಗುಂಪಿನಲ್ಲಿ ಮೊದಲ ಸ್ಥಾನ ಪಡೆದು ಫೈನಲ್ ಗೆ ಲಗ್ಗೆ ಇಟ್ಟರೆ, ಕನ್ನಡಿಗ ಡಿ.ಪಿ. ಮನು(81.31) ಎ ಗುಂಪಿನಲ್ಲಿ ಜರ್ಮನಿಯ ಜುಲಿಯನ್ ವೆಬೆರ್ (82.39 ಮಿ.) ನಂತರ ಮೂರನೇ ಸ್ಥಾನ ಹಾಗೂ ಒಟ್ಟಾರೆ ಆರನೇ ಸ್ಥಾನ ಪಡೆದು ಫೈನಲ್ ನಲ್ಲಿ ಸ್ಥಾನ ಪಡೆದು ಫೈನಲ್ ಗೆ ತಲುಪಿದರು.
ಕಿಶೋರ್ ಜೇನಾ 80.55 ಮೀ. ಜಾವೆಲಿನ್ ಎಸೆತದ ಮೂಲಕ ಬಿ ಗುಂಪಿನ ಅರ್ಹತಾ ಸುತ್ತಿನಲ್ಲಿ 5ನೇ ಹಾಗೂ ಒಟ್ಟಾರೆ 9ನೇ ಸ್ಥಾನ ಪಡೆದು ಫೈನಲ್ ಗೆ ತೇರ್ಗಡೆಯಾದರು.
ಶುಕ್ರವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು ತನ್ನ 2ನೇ ಪ್ರಯತ್ನದಲ್ಲಿ 81.31 ಮೀ. ಜಾವೆಲಿನ್ ಎಸೆದಿದ್ದಾರೆ. ಆದರೆ ಅಂತಿಮ ಥ್ರೋನಲ್ಲಿ 72.4 ಮೀ.ದೂರಕ್ಕೆ ಜಾವೆಲಿನ್ ಎಸೆದರು.
ಫೈನಲ್ ಪಂದ್ಯವು ರವಿವಾರ ನಡೆಯಲಿದೆ.