ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್ಶಿಪ್: ಭಾರತ ತಂಡ ಪ್ರಕಟ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಅಮೆರಿಕದ ಯೂಜಿನ್ನಲ್ಲಿ ಈ ವರ್ಷದ ಆಗಸ್ಟ್ 5ರಿಂದ 9ರ ತನಕ ನಡೆಯಲಿರುವ ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್ಶಿಪ್ಗಾಗಿ 36 ಸದಸ್ಯರನ್ನು ಒಳಗೊಂಡ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ.
ತಂಡದಲ್ಲಿ 23 ಪುರುಷರು ಹಾಗೂ 13 ಮಹಿಳೆಯರಿದ್ದಾರೆ. ಗ್ಲೋಬಲ್ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ 18 ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ.
ವಿಶ್ವ ಅತ್ಲೆಟಿಕ್ಸ್ ಅಂಡರ್-20 ಚಾಂಪಿಯನ್ಶಿಪ್ಗೆ ಭಾರತದ ಸಂಪೂರ್ಣ ತಂಡ
ಪುರುಷರ ತಂಡ: ಮುಹಮ್ಮದ್ ಅಶ್ಫಕ್(400 ಮೀ./ಮಿಕ್ಸೆಡ್ 4-400 ಮೀ. ರಿಲೇ), ಪಿಯೂಷ್ ರಾಜ್(400 ಮೀ/ಮಿಕ್ಸೆಡ್ 4-400 ಮೀ. ರಿಲೇ), ವೆಂಕಟರಾಮ್ ರೆಡ್ಡಿ(800 ಮೀ.), ಯುವಿನ್ ಆನಂದ್(800 ಮೀ.), ಅಮಿತ್ ಕುಮಾರ್(400 ಮೀ. ಹರ್ಡಲ್ಸ್), ಬಸಂತ್ (ಹೈಜಂಪ್), ಅಂಬರೀಶ್ ಕಾರ್ತಿಕೇಯನ್(ಜೈಜಂಪ್), ಶಹನವಾಝ್ ಖಾನ್(ಲಾಂಗ್ಜಂಪ್), ಜಿತಿನ್ ಅರ್ಜುನನ್ ರಾಮನ್(ಲಾಂಗ್ಜಂಪ್), ರಾಯ್ಶಾನ್ ಚಂದ್ರಶೇಖರ(ಟ್ರಿಪಲ್ ಜಂಪ್), ಧನುಶ್ ರಾಜ್ ಮನಪ್ಪಟ್ಟಿ(ಟ್ರಿಪಲ್ ಜಂಪ್), ನಿಶ್ಚಯ್ (ಡಿಸ್ಕಸ್ ಥ್ರೋ), ಆಶೀಶ್ ಯಾದವ್(ಜಾವೆಲಿನ್ ಎಸೆತ), ಧರಣಿಧರನ್ ತ್ಯಾಗರಾಜನ್(ಜಾವೆಲಿನ್ ಎಸೆತ), ನಿತಿನ್ ಗುಪ್ತಾ(5000 ಮೀ. ರೇಸ್ವಾಕ್), ಅನ್ಶು ರಜಕ್, ಆದಿತ್ಯ ಪಿಸಾಲ್, ನಿವೇದ್ ಕೃಷ್ಣ, ನೀಲ್ ಸಾಮ್ರಾಜ್, ರುದ್ರ ಸಚಿನ್ ಶಿಂದೆ(ಪುರುಷರ 4-100 ಮೀ. ರಿಲೇ), ರಂಜಿತ್ ಕುಮಾರ್, ಸಾಬೀರ್ ಸಯ್ಯದ್, ನಕುಲ್ ಪ್ರಭು(ಪುರುಷರ 4-400 ಮೀ. ರಿಲೇ)
ಮಹಿಳೆಯರ ತಂಡ: ತನು ಚೌಧರಿ(400 ಮೀ. ಹರ್ಡಲ್ಸ್),ಪೂಜಾ(ಹೈಜಂಪ್), ಅನ್ಶು (ಶಾಟ್ಪುಟ್), ಅಮಾನತ್ ಕಾಂಬೋಜ್(ಡಿಸ್ಕಸ್ ಥ್ರೋ),ಪೂನಮ್ (ಜಾವೆಲಿನ್ ಥ್ರೋ), ಆರತಿ ಭಾವನಾ, ಕಾಜಲ್ ಹೀರಾಭಾಯಿ, ರುಜುಲಾ ಅಮೋಲ್ ಬೋಂಸ್ಲೆ, ಅನನ್ಯ ಸುರೇಶ್(4-100 ಮೀ. ರಿಲೇ), ತಹುರಾ ಖತುನ್, ಭೂಮಿಕಾ ಸಂಜಯ್ ನೆಹಾಟೆ, ಥಿಯಾ ಅರುಮುಗಮ್(4-400 ಮೀ. ರಿಲೇ)




