ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ | ಕಂಚು ಗೆದ್ದ ಟ್ರೀಸಾ-ಗಾಯತ್ರಿ

Photo Credit : PTI
ಹೊಸದಿಲ್ಲಿ: ರೋಚಕವಾಗಿ ಸಾಗಿದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತದ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ರನ್ನು ಮಣಿಸಿದ ಚೀನಾದ ಟಾನ್ ನಿಂಗ್ ಹಾಗೂ ಲಿಯು ಶೆಂಗ್ ಶು ಬಿಡಬ್ಲ್ಯುಎಫ್ ವರ್ಲ್ಡ್ ಚಾಂಪಿಯನ್ಶಿಪ್ನ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಸೆಮಿ ಫೈನಲ್ನಲ್ಲಿ ಸೋತ ಹೊರತಾಗಿಯೂ 2011ರ ನಂತರ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿರುವ ಟ್ರೀಸಾ ಹಾಗೂ ಗಾಯತ್ರಿ ಐತಿಹಾಸಿಕ ಸಾಧನೆ ಮಾಡಿದರು. 15 ವರ್ಷಗಳ ಹಿಂದೆ ಜ್ವಾಲಾ ಗುಟ್ಟಾ ಹಾಗೂ ಅಶ್ವಿನಿ ಪೊನ್ನಪ್ಪ ಮಹಿಳೆಯರ ಡಬಲ್ಸ್ನಲ್ಲಿ ಕಂಚಿನ ಪದಕ ಜಯಿಸಿದ್ದರು.
ಶನಿವಾರ ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಅಂತಿಮ-4ರ ಸುತ್ತಿನ ಪಂದ್ಯದಲ್ಲಿ ಟ್ರೀಸಾ ಹಾಗೂ ಗಾಯತ್ರಿ ಮೊದಲ ಗೇಮ್ ಅನ್ನು 21-18ರಿಂದ ಗೆದ್ದುಕೊಂಡು ಉತ್ತಮ ಆರಂಭ ಪಡೆದರು. ಮರು ಹೋರಾಟವನ್ನು ನೀಡಿದ ಚೀನಾದ ಜೋಡಿ ಎರಡನೇ ಗೇಮ್ ಅನ್ನು 21-13ರಿಂದ ಗೆದ್ದುಕೊಂಡಿತು. ಮೂರನೇ ಹಾಗೂ ಕೊನೆಯ ಗೇಮ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ ಚೀನೀಯರು 21-8ರಿಂದ ಸುಲಭವಾಗಿ ಗೆದ್ದುಕೊಂಡರು.




