ಫಿಫಾ ವಿಶ್ವಕಪ್ ಸ್ಪರ್ಧಾವಳಿಗೆ ತಂಡಗಳು ಅರ್ಹತೆ ಪಡೆಯುವುದು ಹೇಗೆ?

Photo credit: AP
2026ರ ಫಿಫಾ ವಿಶ್ವಕಪ್ನಲ್ಲಿ ಇದೇ ಮೊದಲ ಬಾರಿ 48 ತಂಡಗಳು ಭಾಗವಹಿಸಲಿದ್ದು, 43 ತಂಡಗಳು ಕಾಂಟಿನೆಂಟಲ್ ಟೂರ್ನಮೆಂಟ್ಗಳ ಮೂಲಕ ಸ್ಥಾನ ಗಿಟ್ಟಿಸಲಿವೆ. ಇನ್ನೆರಡು ಹೆಚ್ಚುವರಿ ತಂಡಗಳು ಇಂಟರ್ಕಾಂಟಿನೆಂಟಲ್ ಪ್ಲೇ ಆಫ್ನ ಮೂಲಕ ಅರ್ಹತೆ ಪಡೆಯುತ್ತವೆ. 2026ರ ಮಾರ್ಚ್ನಲ್ಲಿ ನಡೆಯುವ ಪ್ಲೇ ಆಫ್ ಪಂದ್ಯದಲ್ಲಿ ಆರು ತಂಡಗಳು ಭಾಗವಹಿಸಲಿವೆ. ಮೂರು ಆತಿಥೇಯ ದೇಶಗಳಾದ ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ಸ್ವಯಂಚಾಲಿತವಾಗಿ ಅರ್ಹತೆ ಪಡೆಯಲಿವೆ.
ಕಾಂಟಿನೆಂಟಲ್ ವಿಭಜನೆಯ ಪ್ರಕಾರ, ಏಶ್ಯಾವು 8 ನೇರ ಸ್ಥಾನಗಳನ್ನು, ಒಂದು ಇಂಟರ್ಕಾಂಟಿನೆಂಟಲ್ ಪ್ಲೇ ಆಫ್ ಸ್ಥಾನವನ್ನು ಹೊಂದಿದೆ. ಆಫ್ರಿಕಾವು 9 ನೇರ ಸ್ಥಾನಗಳನ್ನು ಹಾಗೂ ಒಂದು ಇಂಟರ್ಕಾಂಟಿನೆಂಟಲ್ ಪ್ಲೇ ಆಫ್ ಸ್ಥಾನ ಹೊಂದಿದೆ.
ಕೆರಿಬಿಯನ್ ಸಹಿತ ಉತ್ತರ ಹಾಗೂ ಮಧ್ಯ ಅಮೆರಿಕವು ಮೂರು ಆತಿಥೇಯ ರಾಷ್ಟ್ರಗಳ ಜೊತೆಗೆ ಮೂರು ನೇರ ಸ್ಥಾನಗಳನ್ನು ಪಡೆಯುತ್ತದೆ. ಜೊತೆಗೆ ಎರಡು ಇಂಟರ್ಕಾಂಟಿನೆಂಟಲ್ ಪ್ಲೇ ಆಫ್ ಸ್ಥಾನಗಳನ್ನು ಪಡೆಯುತ್ತದೆ.
ದಕ್ಷಿಣ ಅಮೆರಿಕವು ಆರು ನೇರ ಸ್ಥಾನಗಳನ್ನು ಹಾಗೂ ಒಂದು ಇಂಟರ್ಕಾಂಟಿನೆಂಟಲ್ ಪ್ಲೇ ಆಫ್ ಸ್ಥಾನ ಪಡೆಯಲಿದೆ.
ಒಶಿಯಾನಿಯಾವನ್ನು ಪ್ರತಿನಿಧಿಸುತ್ತಿರುವ ನ್ಯೂಝಿಲ್ಯಾಂಡ್ ತಂಡ ಮಾರ್ಚ್ನಲ್ಲಿ ಅರ್ಹತೆ ಪಡೆದಿದೆ.
ಯುರೋಪ್ ದೇಶವು ಪಂದ್ಯಾವಳಿಯಲ್ಲಿ 16 ಸ್ಥಾನಗಳನ್ನು ಖಚಿತಪಡಿಸಲಿವೆ.
ಏಶ್ಯಾದಿಂದ ಜಪಾನ್, ಇರಾನ್, ಜೋರ್ಡನ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯ ಹಾಗೂ ಉಜ್ಬೇಕಿಸ್ತಾನ ತಂಡಗಳು ಈಗಾಗಲೆ ಅರ್ಹತೆ ಪಡೆದಿವೆ.
ದಕ್ಷಿಣ ಅಮೆರಿಕದಿಂದ ಅರ್ಜೆಂಟೀನ, ಬ್ರೆಝಿಲ್ ಹಾಗೂ ಈಕ್ವೆಡಾರ್ ತಂಡಗಳು ಅರ್ಹತೆ ಪಡೆದಿದ್ದು ಉರುಗ್ವೆ, ಪರಾಗ್ವೆ ಹಾಗೂ ಕೊಲಂಬಿಯಾ ಅರ್ಹತೆಯ ಹಾದಿಯಲ್ಲಿವೆ. ಉತ್ತರ ಅಮೆರಿಕದಿಂದ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೊ ಅರ್ಹತೆ ಪಡೆದುಕೊಂಡಿವೆ.







