ವಿಶ್ವ ಶೂಟಿಂಗ್ ಚಾಂಪಿಯ ನ್ ಶಿಪ್: ಪ್ರತಾಪ್ ಸಿಂಗ್ ತೋಮರ್ ಗೆ ಬೆಳ್ಳಿ ಪದಕ

Photo: PTI
ಹೊಸದಿಲ್ಲಿ, ಸೆ.11: ಭಾರತೀಯ ಶೂಟರ್ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಈಜಿಪ್ಟ್ನ ಕೈರೊದಲ್ಲಿ ಮಂಗಳವಾರ ನಡೆದ ಐಎಸ್ಎಸ್ಎಫ್ ವಿಶ್ವ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಪುರುಷರ 50 ಮೀ. ರೈಫಲ್ 3 ಪೊಸಿಶನ್ಸ್ ಫೈನಲ್ ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.
ಪ್ರತಾಪ್ ಸಿಂಗ್ ಅವರು ಅರ್ಹತಾ ಸುತ್ತಿನಲ್ಲಿ 597 ಅಂಕ ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಪ್ರತಾಪ್ ಸಹ ಆಟಗಾರ ನೀರಜ್ ಕುಮಾರ್ ಕೂಡ 592 ಅಂಕ ಗಳಿಸಿ ಫೈನಲ್ ಗೆ ಅರ್ಹತೆ ಪಡೆದಿದ್ದರು.
ಸೋಮವಾರ ಭಾರತದ ಯುವ ಶೂಟಿಂಗ್ ಪಟು ಸಾಮ್ರಾಟ್ ರಾಣಾ ಅವರು ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿ ಇತಿಹಾಸ ನಿರ್ಮಿಸಿದ್ದರು. ಭಾರತದ ಇನ್ನೋವ ಸ್ಪರ್ಧಿ ವರುಣ್ ತೋಮರ್ ಕಂಚು ಜಯಿಸಿದ್ದರು.
ಭಾರತದ ಕ್ರೀಡಾಪಟುಗಳು ಈ ತನಕ 3 ಚಿನ್ನ ಸಹಿತ 10 ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ನಾಲ್ಕು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳು ಸೇರಿವೆ.
Next Story





