ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿ : ಎರಡನೇ ಸ್ಥಾನಕ್ಕೇರಿದ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ | PC : PTI
ಡರ್ಬನ್ : ಕಿಂಗ್ಸ್ಮೀಡ್ನಲ್ಲಿ ಶನಿವಾರ ಅಂತ್ಯಗೊಂಡಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಶ್ರೀಲಂಕಾ ಕ್ರಿಕೆಟ್ ತಂಡವನ್ನು 233 ರನ್ಗಳ ಅಂತರದಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ.
ನೀಳಕಾಯದ ವೇಗದ ಬೌಲರ್ ಮಾರ್ಕೊ ಜಾನ್ಸನ್ ಅವರು ಪಂದ್ಯದಲ್ಲಿ ಒಟ್ಟು 11 ವಿಕೆಟ್ಗಳನ್ನು ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ದಕ್ಷಿಣ ಆಫ್ರಿಕಾ ತಂಡವು ಗುರುವಾರದಂದು ದ್ವಿತೀಯ ಹಾಗೂ ಕೊನೆಯ ಟೆಸ್ಟ್ ಪಂದ್ಯವನ್ನು ಆಡಲಿದೆ.
ಡಬ್ಲ್ಯುಟಿಸಿ 2023-25 ಅಂಕ ಪಟ್ಟಿ
ಸ್ಥಾನ ತಂಡ ಪಂದ್ಯ ಗೆಲುವು ಸೋಲು ಡ್ರಾ ಪಾಯಿಂಟ್ಸ್
1. ಭಾರತ 15 9 5 1 110
2. ದಕ್ಷಿಣ ಆಫ್ರಿಕಾ 9 5 3 1 64
3. ಆಸ್ಟ್ರೇಲಿಯ 13 8 4 1 90
4. ನ್ಯೂಝಿಲ್ಯಾಂಡ್ 11 6 5 0 72
5. ಶ್ರೀಲಂಕಾ 10 5 5 0 60
6. ಇಂಗ್ಲೆಂಡ್ 19 9 9 1 93
7. ಪಾಕಿಸ್ತಾನ 10 4 6 0 40
8. ವೆಸ್ಟ್ಇಂಡೀಸ್ 10 2 6 2 32
9. ಬಾಂಗ್ಲಾದೇಶ 11 3 8 0 33
Next Story