ಝೀಶನ್ ಅನ್ಸಾರಿ ಯಾರು?: ಟೈಲರ್ ಪುತ್ರನಿಂದ ಐಪಿಎಲ್ ಮತ್ತು Vijay Hazare Trophyಯ ಹೀರೊ ಆಗುವವರೆಗೆ…

ಝೀಶನ್ ಅನ್ಸಾರಿ | Photo Credit : SRH X
ಹೊಸದಿಲ್ಲಿ: ವಿಜಯ್ ಹಝಾರೆ ಟ್ರೋಫಿ ಬೌಲರ್ಗಳಿಗೆ ಹೇಳಿ ಮಾಡಿಸಿದ ಟೂರ್ನಿ ಅಲ್ಲ ಎಂಬ ಜನಜನಿತ ಮಾತೊಂದಿದೆ. ಇಲ್ಲಿ ಶತಕಗಳಿಗೆ ಬರವೇ ಇರುವುದಿಲ್ಲ. ತ್ರಿಶತಕದ ಮೊತ್ತಗಳಂತೂ ಈ ಪಂದ್ಯಾವಳಿಯಲ್ಲಿ ತೀರಾ ಸಾಮಾನ್ಯ. ಬ್ಯಾಟರ್ಗಳ ಟೂರ್ನಿ ಎಂದೇ ಹೆಸರಾಗಿರುವ ವಿಜಯ್ ಹಝಾರೆ ಟೂರ್ನಿಯಲ್ಲಿ ಬ್ಯಾಟರ್ಗಳಿಗೆ ರನ್ ಬಿಟ್ಟುಕೊಡಲು ನಿರಾಕರಿಸುತ್ತಿರುವ ಬೌಲರ್ ಒಬ್ಬ ಉದಯಿಸಿದ್ದಾನೆ.
ಈತ ರನ್ಗಳನ್ನು ನೀಡಲು ಮಾತ್ರ ಜಿಪುಣತನ ತೋರುತ್ತಿಲ್ಲ; ಬದಲಿಗೆ, ಬ್ಯಾಟರ್ಗಳ ಪಾಲಿಗೂ ದುಃಸ್ವಪ್ನವಾಗಿ ಬದಲಾಗಿದ್ದಾನೆ. ಆತ ಬೇರಾರೂ ಅಲ್ಲ; ಉತ್ತರ ಪ್ರದೇಶ ತಂಡದ ಟೈಲರ್ ಒಬ್ಬರ ಪುತ್ರ ಝೀಶನ್ ಅನ್ಸಾರಿ.
*ಟೈಲರ್ ಒಬ್ಬರ ಕನಸು – ಈ ಝೀಶನ್ ಅನ್ಸಾರಿ
ನಯೀಂ ಅನ್ಸಾರಿ ಜೀವನೋಪಾಯಕ್ಕಾಗಿ ಬಟ್ಟೆಗಳನ್ನು ಹೊಲೆಯುವ ಟೈಲರ್ ವೃತ್ತಿ ಮಾಡುವವರು. ಅವರಿಗೆ ಇಬ್ಬರು ಸಹೋದರರಿದ್ದು, ಅವರದ್ದೂ ಇದೇ ವೃತ್ತಿಯಾಗಿದೆ. ನಯೀಂ ಅನ್ಸಾರಿಗೆ ಮಕ್ಕಳಿದ್ದು, ಅವರೂ ನನ್ನ ವೃತ್ತಿಯನ್ನು ಮಾಡಬಾರದು ಎಂಬುದು ಅವರ ಬಯಕೆಯಾಗಿತ್ತು. ಅವರು ಬೇರೇನಾದರೂ ವೃತ್ತಿ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಅವರಿಗೆ ಬೇರೇನೋ ಬೇಕಿತ್ತು. ಅದು ಸುಸ್ಥಿರ ಬದುಕಾಗಿತ್ತು. ಅದು ಸರಕಾರಿ ಉದ್ಯೋಗವಾಗಿದ್ದರೂ ಆಗಿತ್ತು. ಅದು ಅವರ ಕನಸಾಗಿತ್ತು.
2000 ಇಸವಿಯ ಆರಂಭದಲ್ಲಿ ಕ್ರೀಡೆ ಆ ಉದ್ಯೋಗವನ್ನು ತರುವಂತಿತ್ತು. ನಯೀಂ ಅದರ ಕುರಿತು ತುಂಬಾ ಯೋಚಿಸಿದರು. ಬಳಿಕ ಕಾರ್ಯಪ್ರವೃತ್ತರಾದರು. 2000 ಇಸವಿಯ ಕೊನೆ ದಿನಗಳಲ್ಲಿ ತಮ್ಮ ಮನೆಯ ಬಳಿ ಇರುವ ಸರಕಾರಿ ಕ್ರೀಡಾ ಅಕಾಡೆಮಿಗೆ ತಮ್ಮ ನಾಲ್ವರು ಮಕ್ಕಳನ್ನು ಸೇರಿಸಿದರು. ಈ ಪೈಕಿ ಝೀಶನ್ ಕೂಡ ಒಬ್ಬನಾಗಿದ್ದ. ಆತ ಬೀದಿಗಳಲ್ಲಿ ಕ್ರಿಕೆಟ್ ಆಡಿದಾಗ, ಆತನಿಗೆ ನಾಲ್ಕೋ ಐದೋ ವಯಸ್ಸಾಗಿತ್ತು. ಆದರೆ, ಝೀಶನ್ ಬೌಲಿಂಗ್ ಮಾಡುವುದನ್ನೇ ಇಷ್ಟಪಡುತ್ತಿದ್ದ. ಅಂದಿನಿಂದಲೇ ಆತ ಬಾಲ್ನ್ನು ತಿರುಗಿಸಲು ಯತ್ನಿಸುತ್ತಿದ್ದ.
*ಝೀಶನ್ ಗಾಗಿ ಗಲ್ಲಿಯಲ್ಲಿ ಬ್ಯಾಟ್ ಮಾಡುತ್ತಿದ್ದ ಚಿಕ್ಕಪ್ಪ
ESPNCricinfo ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ನಯೀಂ ಅನ್ಸಾರಿ ಕುತೂಹಲಕಾರಿ ಕತೆಯೊಂದನ್ನು ಹಂಚಿಕೊಂಡಿದ್ದರು. ಝೀಶನ್ ಬೇಗನೆ ಏಳುತ್ತಿದ್ದ. ಕ್ರಿಕೆಟ್ ಅಕಾಡೆಮಿಯನ್ನು ತಲುಪುತ್ತಿದ್ದ. ಯಾವುದಾದರೂ ಬ್ಯಾಟರ್ನ್ನು ಹಿಡಿಯುತ್ತಿದ್ದ. ಇಡೀ ದಿನ ಅವರಿಗೆ ಬೌಲ್ ಮಾಡುತ್ತಿದ್ದ. ಯಾರಾದರೊಬ್ಬರು ದಣಿದರೆ, ಮತ್ತೊಬ್ಬ ಬ್ಯಾಟರ್ ಬರುತ್ತಿದ್ದರು. ಇದು ನಡೆಯುತ್ತಲೇ ಇತ್ತು. ಮನೆಯಲ್ಲೂ ಅದು ನಿಲ್ಲಲಿಲ್ಲ. ಝೀಶನ್ ಮನೆಯ ಪಕ್ಕದ ಗಲ್ಲಿಯಲ್ಲಿ ಆತನ ಚಿಕ್ಕಪ್ಪ ಗಯಾಸ್ ಅನ್ಸಾರಿ ಆತನಿಗಾಗಿ ಬ್ಯಾಟಿಂಗ್ ಮಾಡುತ್ತಿದ್ದರು. ಝೀಶನ್ನ್ನು ಕ್ರಿಕೆಟ್ ಅಕಾಡೆಮಿಗೆ ಕರೆದೊಯ್ಯುತ್ತಿದ್ದ ಗಯಾಸ್, ನಂತರ ಆತನನ್ನು ಮನೆಗೆ ಮರಳಿ ಕರೆ ತರುತ್ತಿದ್ದರು. ಇದಕ್ಕಾಗಿ ಗಯಾಸ್ ಟೈಲರಿಂಗ್ ಅಂಗಡಿಯಲ್ಲಿ ಕಡಿಮೆ ಸಮಯ ಕಳೆಯುತ್ತಿದ್ದರು. ಅದಕ್ಕಾಗಿ ಕುಟುಂಬದಿಂದ ಅನುಮತಿಯನ್ನೂ ಪಡೆದಿದ್ದರು.
*ಯುವ ಬಿರುಗಾಳಿ
2014ರಲ್ಲಿ ಝೀಶನ್ 15ರ ವಯಸ್ಸಿನ ಹದಿಹರೆಯದ ಬಾಲಕ. ಆತ ಕ್ಲಬ್ ಕ್ರಿಕೆಟ್ನಲ್ಲಿ ಒಳ್ಳೆಯ ಪ್ರದರ್ಶನ ನೀಡಿದ್ದ. ಉತ್ತರ ಪ್ರದೇಶ ತಂಡವು ಆತನನ್ನು ಅಂಡರ್–16 ಟ್ರಯಲ್ಸ್ಗೆ ಕರೆದಿತ್ತು. ಆದರೆ, ಅವರು ಆತನನ್ನು ತಿರಸ್ಕರಿಸಿದ್ದರು. ಆದರೆ, ವಿಚಿತ್ರವೊಂದು ಘಟಿಸಿತ್ತು. ಅಂಡರ್–16 ತಂಡಕ್ಕೆ ತಿರಸ್ಕರಿಸಲ್ಪಟ್ಟಿದ್ದ ಝೀಶನ್, ಅಂಡರ್–19 ಹಾಗೂ ಅಂಡರ್–23 ತಂಡಗಳಿಗೆ ಆಯ್ಕೆಯಾಗಿದ್ದರು. ತಿರಸ್ಕಾರ ಅವರ ಪಾಲಿಗೆ ಎರಡು ಪಟ್ಟು ಮುಂಬಡ್ತಿಯಾಗಿ ಪರಿವರ್ತನೆಗೊಂಡಿತ್ತು.
2014–15ರ ಕೂಚ್ ಬಿಹಾರ್ ಟ್ರೋಫಿಯಲ್ಲಿ ಝೀಶನ್ 40 ವಿಕೆಟ್ಗಳನ್ನು ಕಿತ್ತಿದ್ದ. ಇಡೀ ಟೂರ್ನಮೆಂಟ್ನಲ್ಲಿ ಅದೇ ಅತ್ಯಧಿಕ ವಿಕೆಟ್ ಗಳಿಕೆಯಾಗಿತ್ತು. ಇದಾದ ಬಳಿಕ, ಕರ್ನಲ್ ಸಿಕೆ ನಾಯ್ಡು ಅಂಡರ್–23 ಟೂರ್ನಮೆಂಟ್ನಲ್ಲಿ ಮೂರು ಬಾರಿ ಐದು ವಿಕೆಟ್ಗಳ ಗೊಂಚಲಿನೊಂದಿಗೆ ಮತ್ತೆ 18 ವಿಕೆಟ್ಗಳನ್ನು 13.44ರ ಸರಾಸರಿಯಲ್ಲಿ ಕಿತ್ತಿದ್ದರು. ಆಗ ಜನರು ಝೀಶನ್ನ್ನು ಗುರುತಿಸಲು ಪ್ರಾರಂಭಿಸಿದರು.
ಇದಾದ ಬಳಿಕ, 2016ರ ಅಂಡರ್–19 ವಿಶ್ವಕಪ್ನ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಈ ತಂಡದಲ್ಲಿ ಝೀಶನ್ ಕೇವಲ ಎರಡು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದರೂ, ಉತ್ತಮ ಸಂಭಾವನೆಯನ್ನೇ ಪಡೆದಿದ್ದರು. ಆತ ಆ ಮೊತ್ತವನ್ನು ತನ್ನ ಮನೆಯನ್ನು ರಿಪೇರಿ ಮಾಡಲು ಬಳಸಿಕೊಂಡರು. ಹಲವಾರು ವರ್ಷಗಳಿಂದ ಸೋರುತ್ತಿದ್ದ ಅವರ ಮನೆಯಲ್ಲಿ ಇದೀಗ ಸೋರುವುದು ನಿಂತಿದೆ.
*ದೀರ್ಘ ಕಾಲದ ಕಾಯುವಿಕೆ
ವಿಶ್ವಕಪ್ನ ನಂತರ, 2016–17ನೇ ಸಾಲಿನ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಝೀಶನ್ 30 ವಿಕೆಟ್ ಪಡೆದರು. ಅವುಗಳ ಪೈಕಿ ಬಹುತೇಕ ಉತ್ತರ ಪ್ರದೇಶ ತಂಡದ ಪರವಾಗಿ ಪಡೆದಿದ್ದರು. ಇದಾದ ಬಳಿಕ ಅವರು ರಣಜಿ ತಂಡಕ್ಕೆ ಆಯ್ಕೆಯಾದರು. ರೈಲ್ವೇಸ್ ತಂಡದ ವಿರುದ್ಧ ಝೀಶನ್ ರಣಜಿ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು ಪ್ರತಿ ಇನಿಂಗ್ಸ್ನಲ್ಲೂ ಮೂರು ವಿಕೆಟ್ಗಳನ್ನು ಪಡೆದರು. ಆದರೆ, ಮುಂದಿನ ಪಂದ್ಯಕ್ಕೆ ಉತ್ತರ ಪ್ರದೇಶ ತಂಡ ಅವರನ್ನು ಕೈಬಿಟ್ಟಿತು. ಹೀಗಾಗಿ ಅವರು ಕಾಯಬೇಕಾಯಿತು. ಅವರು ಈಗಲೂ ಕಾಯುತ್ತಲೇ ಇದ್ದಾರೆ. ಅವರು ಆಡಿರುವುದು ಕೇವಲ ಐದು ಪ್ರಥಮ ದರ್ಜೆಯ ಪಂದ್ಯಗಳನ್ನು ಮಾತ್ರ.
*ಎಲ್ಲವನ್ನೂ ಬದಲಿಸಿದ ಪರ್ಪಲ್ ಕ್ಯಾಪ್
ಬಳಿಕ 2024ನೇ ಇಸವಿ ಆಗಮಿಸಿತು. ಆಗ ನಡೆದ ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ 24 ವಿಕೆಟ್ಗಳನ್ನು ಕಬಳಿಸುವ ಮೂಲಕ ಝೀಶನ್ ಪರ್ಪಲ್ ಕ್ಯಾಪ್ ಗೌರವಕ್ಕೆ ಪಾತ್ರರಾದರು. ಎಲ್ಲವನ್ನೂ ಮೀರತ್ ಮೇವರಿಕ್ಸ್ ತಂಡವೇ ವಶಪಡಿಸಿಕೊಂಡಿತು. ಅದು ಝೀಶನ್ರ ವೃತ್ತಿ ಜೀವನವನ್ನೇ ಬದಲಿಸಿತು. ಟ್ರಯಲ್ಸ್ಗಾಗಿ ಐಪಿಎಲ್ ಫ್ರಾಂಚೈಸಿಗಳು ಅವರಿಗೆ ಆಮಂತ್ರಣ ನೀಡಿದವು. 2024ರ ಹರಾಜಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಅವರನ್ನು 40 ಲಕ್ಷ ರೂ. ಗೆ ಖರೀದಿಸಿತು.
ನಯೀಂ ಅನ್ಸಾರಿ ಇದನ್ನು ದೇವರ ಪವಾಡವೆನ್ನುತ್ತಾರೆ: “ಸಮಯ ಬರುವುದಕ್ಕೂ ಮುನ್ನವೇ ಯಾರೂ ಏನನ್ನೂ ಪಡೆಯಲು ಸಾಧ್ಯವಿಲ್ಲ” ಎಂದು ಅವರು ಹೇಳುತ್ತಾರೆ. ಅಂತೂ ಕೊನೆಗೂ ಟೈಲರ್ನ ಪುತ್ರನೊಬ್ಬ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ.
*ದೊಡ್ಡ ವೇದಿಕೆಯಾದ ಐಪಿಎಲ್
ಐಪಿಎಲ್ ಪದಾರ್ಪಣೆಗೂ ಮುನ್ನ ಝೀಶನ್ ಕೇವಲ ಎರಡು ಟಿ–20 ಪಂದ್ಯಗಳನ್ನು ಮಾತ್ರ ಆಡಿದ್ದ. ತನ್ನ ಐಪಿಎಲ್ ಪದಾರ್ಪಣೆ ಪಂದ್ಯದಲ್ಲಿ ಆತ ಮೂರು ವಿಕೆಟ್ಗಳನ್ನು ಕಿತ್ತಿದ್ದ. ಆತ ಫಾಫ್ ಡು ಪ್ಲೆಸಿಸ್ ಹಾಗೂ ಕೆ.ಎಲ್. ರಾಹುಲ್ ಅವರನ್ನು ಔಟ್ ಮಾಡಿದ್ದ. ಆ್ಯಡಮ್ ಝಂಪಾರನ್ನು ಗಾಯಗೊಳಿಸಿದ್ದ. ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಓರ್ವ ಸ್ಪಿನ್ನರ್ ಬೇಕಿತ್ತು. ರಾಹುಲ್ ಚಾಹರ್ ತಂಡದಲ್ಲಿದ್ದರು. ಆದರೂ ಅವರು ಝೀಶನ್ರನ್ನು ಆರಿಸಿದ್ದರು. ಆತ ಸನ್ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂಚೂಣಿ ಸ್ಪಿನ್ನರ್ ಆಗಿ ಬದಲಾದರು.
ಝೀಶನ್ ತನ್ನ ಐಪಿಎಲ್ ಪದಾರ್ಪಣೆ ಪಂದ್ಯದ ನಂತರ ಮತ್ತೆ ಒಂಬತ್ತು ಐಪಿಎಲ್ ಪಂದ್ಯಗಳನ್ನಾಡಿದರು. ಆ ಒಂಬತ್ತು ಪಂದ್ಯಗಳಲ್ಲಿ ಆತ ಕೇವಲ ಮೂರು ವಿಕೆಟ್ಗಳನ್ನು ಕೀಳುವಲ್ಲಿ ಮಾತ್ರ ಯಶಸ್ವಿಯಾಗಿದ್ದ. ಐಪಿಎಲ್ ವೇದಿಕೆ ಕಠಿಣವಾಗಿ ಬದಲಾಗಿತ್ತು. ಬ್ಯಾಟರ್ಗಳು ಅವರಿಗೆ ಹಿಗ್ಗಾಮುಗ್ಗಾ ಬಾರಿಸಿದ್ದರು. ಬಾಲ್ ಯಾವಾಗಲೂ ಆತನ ಮಾತು ಕೇಳುತ್ತಿರಲಿಲ್ಲ. ಹೀಗಿದ್ದರೂ ಆತ ತಂಡದಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.
* ಲಿಸ್ಟ್–ಎ ಪದಾರ್ಪಣೆ
ಇದೀಗ ಝೀಶನ್ 2025ರ ಋತುವಿನ ವಿಜಯ್ ಹಝಾರೆ ಟ್ರೋಫಿಯಲ್ಲಿ ಆಡುತ್ತಿದ್ದಾರೆ. ಇದು ಅವರ ಪದಾರ್ಪಣೆ ಲಿಸ್ಟ್–ಎ ಪಂದ್ಯಾವಳಿಯಾಗಿದೆ. ಇಡೀ ವಿಶ್ವದ ಬ್ಯಾಟರ್ಗಳು ಬಾಲ್ನ್ನು ಬೌಂಡರಿಯಾಚೆ ಅಟ್ಟುತ್ತಿರುವುದನ್ನು ನೋಡುತ್ತಿದ್ದಾರೆ. ಆದರೆ, ಈ ಸಪಾಟು ಪಿಚ್ ಮೇಲೆ ಬಾಲ್ಗಳು ಏನು ಮಾಡಲು ಸಾಧ್ಯವಿಲ್ಲವೋ ಅದನ್ನು ಝೀಶನ್ ಮಾಡಿಸುತ್ತಿದ್ದಾರೆ.
ಇಲ್ಲಿಯವರೆಗೆ ನಾಲ್ಕು ಪಂದ್ಯಗಳನ್ನಾಡಿರುವ ಝೀಶನ್, ಐದಕ್ಕಿಂತ ಕಡಿಮೆ ರನ್ ಸರಾಸರಿ, 13ರ ವಿಕೆಟ್ ಸರಾಸರಿಯೊಂದಿಗೆ 13 ವಿಕೆಟ್ಗಳನ್ನು ಕಿತ್ತಿದ್ದಾರೆ. ನೀವು ಈ ಅಂಕಿ-ಸಂಖ್ಯೆಗಳನ್ನು ನೋಡಿ, ಇದು 90ರ ದಶಕದ ಸ್ಕೋರ್ಕಾರ್ಡ್ ಇರಬಹುದು ಎಂದು ಭಾವಿಸಬಹುದು. ಆದರೆ, ಆ ಊಹೆ ಇಂದು ಸರಿಹೊಂದುತ್ತಿಲ್ಲ.
ಪ್ರಥಮ ಪಂದ್ಯದಲ್ಲಿ ಹೈದರಾಬಾದ್ ತಂಡದ ವಿರುದ್ಧ ಝೀಶನ್ ಅವಳಿ ವಿಕೆಟ್ ಗಳನ್ನು ಕಿತ್ತರು. ಮೊದಲಿಗೆ ನಾಯಕ ರಾಹುಲ್ ಸಿಂಗ್ರನ್ನು ಪೆವಿಲಿಯನ್ಗೆ ಕಳಿಸಿದರೆ, ಬಳಿಕ ರಾಹುಲ್ ಬುಧಿಯನ್ನು ಔಟ್ ಮಾಡಿದರು. ಈ ಹಂತದಲ್ಲಿ ಹೈದರಾಬಾದ್ ತಂಡ ಯಾವುದೇ ವಿಕೆಟ್ ನಷ್ಟವಿಲ್ಲದೆ 101 ರನ್ ಗಳಿಸಿತ್ತು. ಆದರೆ, ಝೀಶನ್ ದಾಳಿಗೆ ಕುಸಿದ ಹೈದರಾಬಾದ್ ತಂಡ ಕೇವಲ 240 ರನ್ಗಳಿಗೆ ಆಲೌಟ್ ಆಗಿತ್ತು. ಝೀಶನ್ 31 ರನ್ ನೀಡಿ 4 ವಿಕೆಟ್ಗಳನ್ನು ಪಡೆದಿದ್ದರು.
ಮುಂದಿನ ಪಂದ್ಯ ಚಂಡೀಗಢ ತಂಡದ ವಿರುದ್ಧವಿತ್ತು. ಈ ಪಂದ್ಯದಲ್ಲಿ ಝೀಶನ್ ಕೇವಲ 29 ರನ್ ನೀಡಿ 4 ವಿಕೆಟ್ಗಳನ್ನು ಕಿತ್ತರು. ಬಾಲ್ ಮೇಲೆ ಅದೇ ನಿಯಂತ್ರಣ; ಅದೇ ಹೋರಾಟ.
ಬಳಿಕ ಬರೋಡಾ ಎದುರಿನ ಪಂದ್ಯ. ಎಲ್ಲ ಕಡೆಯೂ ರನ್ ಪ್ರವಾಹವೇ ಹರಿದಿತ್ತು. ಎರಡೂ ತಂಡಗಳು ಹತ್ತಿರಹತ್ತಿರ 700 ರನ್ಗಳ ಗುಡ್ಡೆ ಹಾಕಿದವು. ಈ ಪಂದ್ಯದಲ್ಲಿ ಝೀಶನ್ 53 ರನ್ಗಳನ್ನು ನೀಡಿದರಾದರೂ, ಮೂರು ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ರನ್ಗಳ ಪ್ರವಾಹದ ನಡುವೆಯೂ ಅವರ ರನ್ ಸರಾಸರಿ ಅದ್ಭುತವಾಗಿತ್ತು.
ಅಸ್ಸಾಂ ತಂಡದ ವಿರುದ್ಧವೂ ಇದೇ ಕತೆ. ಅಸ್ಸಾಂ ತಂಡ ಒಂದು ಹಂತದಲ್ಲಿ ಕೇವಲ ಮೂರು ವಿಕೆಟ್ ನಷ್ಟಕ್ಕೆ 241 ರನ್ ಗಳಿಸಿ ಬಿರುಗಾಳಿಯಂತೆ ಮುನ್ನುಗ್ಗುತ್ತಿತ್ತು. ಝೀಶನ್ ಅಸ್ಸಾಂ ತಂಡದ ನಾಗಾಲೋಟವನ್ನು ತುಂಡರಿಸಿದರು. ಮಧ್ಯಮ ಕ್ರಮಾಂಕದ ಮೂರು ವಿಕೆಟ್ಗಳನ್ನು ಆತ ಕಿತ್ತನು. ಇದರಿಂದಾಗಿ ಅಸ್ಸಾಂ ತಂಡ ಕೇವಲ 308 ರನ್ಗಳನ್ನು ಗಳಿಸಲಷ್ಟೇ ಶಕ್ತವಾಯಿತು. ಅವರು ಮತ್ತೆ ತಮ್ಮ ಕೈಚಳಕವನ್ನು ಪುನರಾವರ್ತಿಸಿದ್ದರು.
ಝೀಶನ್ ಅನ್ಸಾರಿ ನಿಗೂಢ ಸ್ಪಿನ್ನರ್ ಏನಲ್ಲ. ಅವರ ಬತ್ತಳಿಕೆಯಲ್ಲಿ ಕೇರಂ ಬಾಲ್ ಆಗಲಿ ಅಥವಾ ತೀವ್ರ ಏರಿಳಿತವಿರುವ ಎಸೆತವಾಗಲಿ ಇಲ್ಲ. ಆತ ತನ್ನ ಬಾಲ್ಗೆ ದೊಡ್ಡ ತಿರುವನ್ನು ಮಾತ್ರ ನೀಡುತ್ತಾನೆ. ಆತ ದೀರ್ಘಾವಧಿ ಬೌಲಿಂಗ್ ಮಾಡುತ್ತಾನೆ. ಪಿಚ್ಗಳು ರಸ್ತೆಯಂತಿದ್ದರೂ ನಾನು ಬಾಲ್ನ್ನು ತಿರುಗಿಸಬಲ್ಲೆ ಎಂಬ ವಿಶ್ವಾಸ ಝೀಶನ್ನಲ್ಲಿದೆ. ಆತನ ತಂದೆ ಸರಕಾರಿ ಉದ್ಯೋಗ ಬಯಸಿದ್ದರು. ಆತನ ಚಿಕ್ಕಪ್ಪ ಕಿರಿದಾದ ರಸ್ತೆಗಳಲ್ಲಿ ಆತನಿಗಾಗಿ ಬ್ಯಾಟ್ ಮಾಡಿದ್ದರು. ಕ್ರಿಕೆಟ್ ಅಕಾಡೆಮಿ ಆತನ ಮನೆಯಾಗಿತ್ತು. ಈ ಪಯಣಕ್ಕೆ ಸುದೀರ್ಘ 16 ವರ್ಷ ತಗುಲಿತು.
ಬ್ಯಾಟರ್ಗಳೇ ಕ್ರಿಕೆಟ್ ಜಗತ್ತನ್ನು ಆಳುತ್ತಿರುವ ಈ ದಿನಗಳಲ್ಲಿ ಬೌಲರ್ಗಳು ಈಗಲೂ ಮುಖ್ಯ ಎಂಬುದಕ್ಕೆ ಝೀಶನ್ ಸಾಕ್ಷಿಯಾಗಿದ್ದಾನೆ. ಆದರೆ, ಕಾಯುವಿಕೆ ಮುಖ್ಯವಾಗುತ್ತದೆ. ಟೈಲರ್ ಅಂಗಡಿಯ ಬಾಲಕನೊಬ್ಬ ವೈಟ್ ಬಾಲ್ ಮಾತನಾಡುವಂತೆ ಮಾಡಬಲ್ಲ ಎಂಬುದಕ್ಕೆ ಈ ಕಾಯುವಿಕೆ ಸಾಕ್ಷಿಯಾಗಿದೆ. ವಿಜಯ್ ಹಝಾರೆ ಟ್ರೋಫಿ ಅನಿರೀಕ್ಷಿತ ಹೀರೊವೊಬ್ಬನನ್ನು ಪತ್ತೆಹಚ್ಚಿದೆ. ಝೀಶನ್ನ ಸಾಧನೆಯನ್ನು ಐಪಿಎಲ್ ಫ್ರಾಂಚೈಸಿಗಳು ಗಮನಿಸುತ್ತಿರಬಹುದು. ಈ ಬಾರಿ ಝೀಶನ್ ರನ್ನು ನಿರ್ಲಕ್ಷ್ಯ ಮಾಡಲಾಗದಷ್ಟು ಅಂಕಿ-ಸಂಖ್ಯೆ ದೊಡ್ಡದಿದೆ.
ಸೌಜನ್ಯ: financialexpress.com







