ಝಿಂಬಾಬ್ವೆಯ ಮಾಜಿ ಕ್ರಿಕೆಟಿಗ ಹೀತ್ ಸ್ಟ್ರೀಕ್ ನಿಧನದ ಸುದ್ದಿ ಅಲ್ಲಗಳೆದ ಹೆನ್ರಿ ಓಲಾಂಗ

ಹೀತ್ ಸ್ಟ್ರೀಕ್, Photo: twitter
ಹರಾರೆ: ಝಿಂಬಾಬ್ವೆಯ ಕ್ರಿಕೆಟ್ ದಂತಕಥೆ ಹೀತ್ ಸ್ಟ್ರೀಕ್ ಅವರ ನಿಧನದ ಕುರಿತ ಸುದ್ದಿಯ ಕುರಿತಾದ ವದಂತಿಗಳಿಗೆ ಮಾಜಿ ಕ್ರಿಕೆಟಿಗ ಹೆನ್ರಿ ಓಲಾಂಗ ಅವರು ತೆರೆ ಎಳೆದಿದ್ದಾರೆ. 49ರ ಹರೆಯದ ಸ್ಟ್ರೀಕ್ ಅವರು ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.ಸ್ಟ್ರೀಕ್ ಸಾವಿನ ಕುರಿತು ಸ್ವತಃ ಟ್ವೀಟ್ ಮಾಡಿದ್ದ ಗಂಟೆಗಳ ನಂತರ ಓಲಾಂಗ ಅವರು ಸ್ಟ್ರೀಕ್ ಅವರು ಜೀವಂತವಾಗಿದ್ದಾರೆ ಹಾಗೂ ಚೆನ್ನಾಗಿದ್ದಾರೆ ಎಂದು ಟ್ವೀಟಿಸಿದ್ದಾರೆ.ಸುಳ್ಳು ಮಾಹಿತಿಯನ್ನು ಟ್ವೀಟರ್ ಮೂಲಕ ನಿರಾಕರಿಸಿದ ಓಲಾಂಗ , "ಹೀತ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಬಹಳ ಉತ್ಪ್ರೇಕ್ಷಿತವಾಗಿವೆ ಎಂದು ನಾನು ದೃಢೀಕರಿಸಬಲ್ಲೆ. ಅವರು ತುಂಬಾ ಜೀವಂತವಾಗಿದ್ದಾರೆ" ಎಂದು ಹೇಳಿದ್ದಾರೆ.
‘ಹೀತ್ ಸ್ಟ್ರೀಕ್ ಕುರಿತ ದುಃಖದ ಸುದ್ದಿ ನಮಗೆ ಬಂದಿದೆ. RIP ಝಿಂಬಾಬ್ವೆ ಕ್ರಿಕೆಟ್ ದಂತಕಥೆ," ಒಲೊಂಗಾ ಈ ಮೊದಲು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.
Next Story







