Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. ಬೆಂಗಳೂರಿನ ನಗರ ಪಾಲಿಕೆಗಳಿಗೆ...

ಬೆಂಗಳೂರಿನ ನಗರ ಪಾಲಿಕೆಗಳಿಗೆ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡಣೆ

ವಾರ್ತಾಭಾರತಿವಾರ್ತಾಭಾರತಿ30 Sept 2025 8:26 PM IST
share
ಬೆಂಗಳೂರಿನ ನಗರ ಪಾಲಿಕೆಗಳಿಗೆ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡಣೆ

ಬೆಂಗಳೂರು, ಸೆ.30: ಮಂಗಳವಾರದಂದು ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಿಗೆ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡಣೆ ಮಾಡಿದ್ದು, ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಯಾವುದೇ ಆಕ್ಷೇಪಣೆ, ಸಲಹೆಗಳನ್ನು ಸಲ್ಲಿಸಲು ಅ.15ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಆಕ್ಷೇಪಣೆ, ಸಲಹೆಗಳನ್ನು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ 436, 4ನೇ ಮಹಡಿ, ವಿಕಾಸ ಸೌಧ, ಡಾ. ಬಿ.ಆರ್.ಅಂಬೇಡ್ಕರ್ ವೀದಿ, ಬೆಂಗಳೂರು-560001 ಇವರಿಗೆ ಸಲ್ಲಿಸಬೇಕಾಗಿದೆ. ನಿಗದಿತ ಅವಧಿಯಲ್ಲಿ ಸ್ವೀಕೃತಗೊಂಡ ಆಕ್ಷೇಪಣೆ, ಸಲಹೆಗಳನ್ನು ಪರಿಶೀಲಿಸಿ ನಗರಪಾಲಿಕೆಗಳ ವಾರ್ಡ್‍ವಾರು ಕ್ಷೇತ್ರ ಪುನರ್ ವಿಂಗಡನೆಯನ್ನು ಅಂತಿಮಗೊಳಿಸಿ ಕ್ರಮವಹಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು ಬೆಂಗಳೂರು ಕೇಂದ್ರ, ಬೆಂಗಳೂರು ಪೂರ್ವ, ಬೆಂಗಳೂರು ಪಶ್ಚಿಮ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಎಂದು ವಿಂಗಡಿಸಲಾಗಿದ್ದು, ಈಗ ವಾರ್ಡ್‍ಗಳನ್ನು ಹಂಚಿಕೆ ಮಾಡಿದೆ. ಬೆಂಗಳೂರು ಕೇಂದ್ರ 63, ಬೆಂಗಳೂರು ಪೂರ್ವ 50, ಬೆಂಗಳೂರು ಪಶ್ಚಿಮ 111, ಬೆಂಗಳೂರು ಉತ್ತರ 72, ಬೆಂಗಳೂರು ದಕ್ಷಿಣ 72 ವಾರ್ಡ್‍ಗಳನ್ನು ಹೊಂದಿವೆ.

ಬೆಂಗಳೂರು ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ ರಾಮಸ್ವಾಮಿಪಾಳ್ಯ, ಜಯಮಹಲ್, ಶಿವಾಜಿನಗರ, ಭಾರತೀನಗರ, ಕೆ. ಕಾಮರಾಜ್ ವಾರ್ಡ್, ಕಾಕ್ಸ್ ಟೌನ್, ಹಳೆ ಬೈಯಪ್ಪನಹಳ್ಳಿ, ಕೃಷ್ಣಯ್ಯನಪಾಳ್ಯ, ಕಸ್ತೂರಿನಗರ, ನಾಗವಾರಪಾಳ್ಯ, ಇಂದಿರಾನಗರ, ಹೊಯ್ಸಳನಗರ, ಹಲಸೂರು, ರಿಚ್‍ಮಂಡ್ ಟೌನ್, ವಸಂತನಗರ, ಸಂಪಂಗಿರಾಮನಗರ, ಶೇಷಾದ್ರಿಪುರಂ, ದತ್ತಾತ್ರೇಯ ವಾರ್ಡ್, ಸ್ವತಂತ್ರಪಾಳ್ಯ ವಾರ್ಡ್, ಓಕಳೀಪುರಂ ವಾರ್ಡ್, ಗೋಪಾಲಪುರ ಸೇರಿ 63 ವಾರ್ಡ್‍ಗಳು ಇವೆ.

ಬೆಂಗಳೂರು ಪೂರ್ವ ಪಾಲಿಕೆಯಲ್ಲಿ ಕೆ ನಾರಾಯಣಪುರ, ಬೈರತಿ, ಹೊರಮಾವು, ಅಗರ, ಚಲ್ಲಾಕೆರೆ, ಬಾಬುಸಾಬ್ ಪಾಳ್ಯ, ಸರೋಜಿನಿ ನಗರ, ಕಲ್ಕೆರೆ, ರಾಮಮೂರ್ತಿನಗರ, ಕೆ. ಚನ್ನಸಂದ್ರ, ಟಿ.ಸಿ.ಪಾಳ್ಯ, ಭಟ್ಟರಹಳ್ಳಿ, ಮೇಡಹಳ್ಳಿ, ಬೆಳತ್ತೂರ್, ಕಾಡುಗೋಡಿ, ಹೂಡಿ, ಬಸವನಪುರ, ದೇವಸಂದ್ರ, ಕೆ.ಆರ್. ಪುರಂ, ಕೊತ್ತೂರ್, ವಿಜಿನಾಪುರ, ದೂರವಾಣಿನಗರ, ಕೆ.ಎಸ್. ನಿಸಾರ್ ಅಹಮದ್ ವಾರ್ಡ್, ಎ ನಾರಾಯಣಪುರ, ಚಿಕ್ಕ ದೇವಸಂದ್ರ, ಕಾವೇರಿ ನಗರ, ಪಟ್ಟಂದೂರು ಅಗ್ರಹಾರ, ಚನ್ನಸಂದ್ರ, ಹಗದೂರು, ವೈಟ್‍ಫೀಲ್ಡ್ ಸೇರಿ 50 ವಾರ್ಡ್‍ಗಳು ಇವೆ.

ಬೆಂಗಳೂರು ಪಶ್ಚಿಮ ಪಾಲಿಕೆಯಲ್ಲಿ ದೊಡ್ಡ ಬಿದರಕಲ್ಲು, ನಾಗಸಂದ್ರ, ಚೊಕ್ಕಸಂದ್ರ, ಪೀಣ್ಯ, ಗೊರಗುಂಟೆಪಾಳ್ಯ, ಸುಬೇದಾರಪಾಳ್ಯ, ಮತ್ತಿಕೆರೆ, ಅರಮನೆ ನಗರ, ಗುಟ್ಟಹಳ್ಳಿ, ಕೋದಂಡರಾಮಪುರ, ಸದಾಶಿವನಗರ, ಮಲ್ಲೇಶ್ವರಂ, ನಾಲ್ವಡಿ ಕೃಷ್ಣರಾಜ ಒಡೆಯರ್ ವಾರ್ಡ್, ಡಾ. ಪುನೀತ್ ರಾಜಕುಮಾರ್ ವಾರ್ಡ್, ಲಕ್ಷ್ಮೀದೇವಿ ನಗರ, ಶಾಂತವೇರಿ ಗೋಪಾಲಗೌಡ ವಾರ್ಡ್, ಅಂದ್ರಹಳ್ಳಿ, ನಾಡಪ್ರಭು ಕೆಂಪೇಗೌಡ ನಗರ ಸೇರಿ 111 ವಾರ್ಡ್‍ಗಳು ಇವೆ.

ಬೆಂಗಳೂರು ಉತ್ತರ ಪಾಲಿಕೆ ವ್ಯಾಪ್ತಿಯಲ್ಲಿ ಚೌಡೇಶ್ವರಿ ವಾರ್ಡ್, ಕಟ್ಟಿಗೇನಹಳ್ಳಿ, ಸಂಪಿಗೆಹಳ್ಳಿ, ಜಕ್ಕೂರು, ಕೆಂಪೇಗೌಡ ವಾರ್ಡ್, ಚಿಕ್ಕ ಬೊಮ್ಮಸಂದ್ರ, ಯಲಹಂಕ ಉಪಗ್ರಹ ಪಟ್ಟಣ, ದೊಡ್ಡ ಬೆಟ್ಟಹಳ್ಳಿ, ಅಟ್ಟೂರು, ತಿಂಡ್ಲು, ಬ್ಯಾಟರಾಯನಪುರ, ಅಮೃತಹಳ್ಳಿ, ಥಣಿಸಂದ್ರ, ಕೆಂಪಾಪುರ, ರಾಜೀವ್ ನಗರ, ಕೊಡಿಗೆಹಳ್ಳಿ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಸಿಂಗಾಪುರ ಸೇರಿ 72 ವಾರ್ಡ್‍ಗಳು ಬರಲಿವೆ.

ಬೆಂಗಳೂರು ದಕ್ಷಿಣ ಪಾಲಿಕೆಯಲ್ಲಿ ಬಂಗಾರಪ್ಪ ನಗರ, ಸುಬ್ರಹ್ಮಣ್ಯಪುರ, ಸಾರ್ವಭೌಮನಗರ, ಪದ್ಮನಾಭನಗರ, ಕದಿರೇನಹಳ್ಳಿ, ಕುಮಾರಸ್ವಾಮಿ ಲೇಔಟ್, ಬನಶಂಕರಿ ದೇವಸ್ಥಾನ, ಶಾಕಂಬರಿನಗರ, ಪಟ್ಟಾಭಿರಾಮ್ ನಗರ, ಬೈರಸಂದ್ರ ತಿಲಕ್ ನಗರ, ಬೈರಸಂದ್ರ, ತಿಲಕ್ ನಗರ, ಎನ್.ಎ.ಎಲ್ ಲೇಔಟ್, ಎಸ್.ಜಿ. ಪಾಳ್ಯ, ಲಕ್ಕಸಂದ್ರ, ನ್ಯಾಷನಲ್ ಗೇಮ್ ವಿಲೇಜ್, ಈಜಿಪುರ, ಅನಿಬೆಸೆಂಟ್ ವಾರ್ಡ್, ಕೋರಮಂಗಲ, ಚಿಕ್ಕ ಆಡುಗೋಡಿ, ಮಡಿವಾಳ, ಅಬ್ದುಲ್ ಕಲಾಂ, ಜಯನಗರ ಪೂರ್ವ, ಕೆಎಸ್‍ಆರ್‍ಟಿಸಿ ಲೇಔಟ್, ಜೆ.ಪಿ. ನಗರ, ವಿಶ್ವಮಾನವ ಕುವೆಂಪು ವಾರ್ಡ್ ಸೇರಿದಂತೆ 72 ವಾರ್ಡ್‍ಗಳು ಬರಲಿವೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X