ಕನ್ನಡ ಜಾಗೃತಿ ಸಮಿತಿಗೆ 249 ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ

ಬೆಂಗಳೂರು, ಸೆ.12: ಕನ್ನಡ ಜಾಗೃತಿ ಸಮಿತಿಗಳಿಗೆ ರಾಜ್ಯದಲ್ಲಿ ಒಟ್ಟು 249 ಅಧಿಕಾರೇತರ ಸದಸ್ಯರನ್ನು ನಾಮನಿರ್ದೇಶನ ಮಾಡಿ ಸರಕಾರ ಆದೇಶ ಹೊರಡಿಸಿದೆ.
31 ಜಿಲ್ಲೆಗಳಲ್ಲಿ ಜಿಲ್ಲಾಮಟ್ಟದಲ್ಲಿ ತಲಾ 5 ಸದಸ್ಯರಂತೆ 155 ಸದಸ್ಯರನ್ನು ರಾಜ್ಯದಲ್ಲಿನ 11 ಮಹಾನಗರ ಪಾಲಿಕಗಳಿಗೆ ತಲಾ 6 ಸದಸ್ಯರಂತೆ 66 ಸದಸ್ಯರನ್ನು, ಬೆಂಗಳೂರಿನ 28 ವಿಧಾನಸಭೆ ಕ್ಷೇತ್ರಕ್ಕೆ 28 ಸದಸ್ಯರನ್ನು ಒಳಗೊಂಡು ಒಟ್ಟು 249 ಕನ್ನಡ ಜಾಗೃತಿ ಸಮಿತಿ ಸದಸ್ಯರನ್ನು ಸರಕಾರ ನಾಮನಿರ್ದೇಶನ ಮಾಡಿದೆ ಎಂದು ಪ್ರಕಟನೆ ತಿಳಿಸಿದೆ.
Next Story





