‘ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್’ನ 10 ಲೀ. ಬಹುಬಳಕೆಯ ಜಾರ್ ಬಿಡುಗಡೆ ಮಾಡಿದ ಜಿಇಎಫ್ ಇಂಡಿಯಾ

ಬೆಂಗಳೂರು, ಅ.26: ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು 10 ಲೀಟರ್ ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಹೊಂದಿರುವ ಮರುಬಳಕೆ ಮಾಡಬಹುದಾದ ಮತ್ತು ಬಹುಬಳಕೆಯ ಜಾರ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ ಲಿಮಿಟೆಡ್‍ನ ಹಿರಿಯ ಉಪಾಧ್ಯಕ್ಷ ಪಿ.ಚಂದ್ರಶೇಖರ ರೆಡ್ಡಿ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ʼಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ ಲಿಮಿಟೆಡ್ʼ (ಜಿಇಎಫ್ ಇಂಡಿಯಾ) ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್‍ನ ಮರುಬಳಕೆ ಮಾಡಬಹುದಾದ 10 ಲೀ. ಜಾರ್ ಅನ್ನು ಬಿಡುಗಡೆ ಮಾಡಿ ಅವರು ಮಾತನಾಡಿದವರು.
ಕುಟುಂಬಕ್ಕೆ ಅನುಕೂಲವಾಗುವಂತೆ 10 ಲೀ. ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್‍ನ ಜಾರ್ ಅನ್ನು ಗ್ರಾಹಕರಿಗಾಗಿ ಪರಿಚಯಿಸಲಾಗಿದೆ. ಟ್ಯಾಂಪರ್ ಪ್ರೂಫ್ ಮುಚ್ಚಳವನ್ನು ಜಾರ್ ಹೊಂದಿದ್ದು, ಪಾತ್ರೆಗೆ ಸುಲಭವಾಗಿ ಸುರಿಯುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸೋರಿಕೆ ಮತ್ತು ಶೇಖರಣಾ ಸಮಸ್ಯೆಗಳನ್ನು ತಪ್ಪಿಸಲು ಇಂದಿನ ಮಹಿಳೆಯರಿಗೆ ಇದು ಸೂಕ್ತವಾದ ಆಯ್ಕೆಯೂ ಇದಾಗಿದೆ. ಜಾರ್‍ನಲ್ಲಿದ್ದ ತೈಲವನ್ನು ಬಳಸಿದ ನಂತರ, ಜಾರ್ ಅನ್ನು ಅಗತ್ಯ ವಸ್ತುಗಳ ಸಂಗ್ರಹಣೆಗೆ ಬಳಸಬಹುದು ಎಂದು ಅವರು ತಿಳಿಸಿದರು.
ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಭಾರತದಲ್ಲಿ ಸೂರ್ಯಕಾಂತಿ ಎಣ್ಣೆ ವಿಭಾಗದಲ್ಲಿ ನಂ.1 ಮಾರಾಟದ ಬ್ರ್ಯಾಂಡ್ ಆಗಿದೆ. ಸೂರ್ಯಕಾಂತಿ ಎಣ್ಣೆಯ ಮಾರುಕಟ್ಟೆ ಗಾತ್ರ ಕರ್ನಾಟಕದಲ್ಲಿ 32 ಸಾವಿರ ಟನ್‍ಗಳಿಗಿಂತ ಹೆಚ್ಚಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಒಡಿಶಾ ಮತ್ತು ಛತ್ತೀಸ್‍ಗಢದಲ್ಲಿ ಪ್ರಸ್ತುತ ಕಾರ್ಯಾಚರಣೆಗಳ ಜೊತೆಗೆ, ಕಂಪೆನಿಯು ತಮಿಳುನಾಡು ಮತ್ತು ಕೇರಳದಲ್ಲಿ ಅಸ್ತಿತ್ವವನ್ನು ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು.
ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್‍ನ 200ಎಂಎಲ್, 500ಎಂಎಲ್ ಪೌಚ್, 1 ಲೀಟರ್ ಪೌಚ್, 500ಎಂಎಲ್ ಬಾಟಲ್, 1 ಲೀ. ಬಾಟಲ್, 2 ಲೀ. ಬಾಟಲ್, 5 ಲೀ. ಜಾರ್ ಈಗಾಗಲೇ ಮಾರುಕಟ್ಟೆಯಲ್ಲಿವೆ. ಈಗ 10 ಲೀ. ಫ್ರೀಡಂ ರಿಫೈನ್ಡ್ ಸನ್ ಫ್ಲವರ್ ಆಯಿಲ್ ಹೊಂದಿರುವ ಮರುಬಳಕೆ ಮಾಡಬಹುದಾದ ಮತ್ತು ಬಹುಬಳಕೆಯ ಜಾರ್ ಅನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ನಮ್ಮ ರಾಯಭಾರಿ(ಬ್ರ್ಯಾಂಡ್ ಅಂಬಾಸಿಡರ್)ಗಳಾಗಿ ಹೊಂದಿರುವುದು ಕರ್ನಾಟಕದ ಜನರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಬ್ರ್ಯಾಂಡ್‍ನ ಅರಿವನ್ನು ಸುಧಾರಿಸಲು ನಮಗೆ ಸಹಾಯ ಮಾಡಿದೆ ಎಂದು ಪಿ.ಚಂದ್ರಶೇಖರ ರೆಡ್ಡಿ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ನಟಿ ರಾಧಿಕಾ ಪಂಡಿತ್ ಉಪಸ್ಥಿತರಿದ್ದರು.







