ಪೊಲೀಸ್ ಇಲಾಖೆಯಲ್ಲಿ ʼಮೇಜರ್ ಸರ್ಜರಿʼ; 27 ಡಿವೈಎಸ್‍ಪಿ(ಸಿವಿಲ್), 131 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳ ವರ್ಗಾವಣೆ

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ʼಮೇಜರ್ ಸರ್ಜರಿʼ ಮಾಡಲಾಗಿದ್ದು, 27 ಡಿವೈಎಸ್‍ಪಿ(ಸಿವಿಲ್) ಹಾಗೂ 131 ಪೊಲೀಸ್ ಇನ್‍ಸ್ಪೆಕ್ಟರ್(ಸಿವಿಲ್)ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ.
ವರ್ಗಾವಣೆಯಾದ 27 ಡಿವೈಎಸ್‍ಪಿ(ಸಿವಿಲ್)ಗಳ ಪೈಕಿ ನಾಲ್ವರನ್ನು ಹಾಗೂ 131 ಪೊಲೀಸ್ ಇನ್‍ಸ್ಪೆಕ್ಟರ್ ಗಳ ಪೈಕಿ 23 ಮಂದಿ ಇನ್‍ಸ್ಪೆಕ್ಟರ್ ಗಳನ್ನು ಲೋಕಾಯುಕ್ತ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಲು ಸ್ಥಳ ನಿಗದಿಪಡಿಸಲಾಗಿದೆ.
ವರ್ಗಾವಣೆಗೊಂಡಿರುವ ಅಧಿಕಾರಿಗಳು ತಕ್ಷಣವೇ ಹೊಸ ಸ್ಥಳಗಳಲ್ಲಿ ವರದಿ ಮಾಡಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.
Next Story





