Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಜ್ಯ
  4. 100 ಕೋಟಿ ರೂ. ಹೂಡಿಕೆ; KSTDCಯ 24...

100 ಕೋಟಿ ರೂ. ಹೂಡಿಕೆ; KSTDCಯ 24 ಹೋಟೆಲ್, 2 ರೆಸ್ಟೋರೆಂಟ್ಗಳಿಗೆ ಹೊಸ ರೂಪ: ಸಚಿವ ಕೆ.ಜೆ.ಜಾರ್ಜ್

- ಮಯೂರ ಹೋಟೆಲ್ ಗಳಲ್ಲಿ ಕೊಠಡಿ, ಆಹಾರ, ಸ್ವಚ್ಛತೆ, ಆತಿಥ್ಯ ಹಾಗೂ ಒಟ್ಟಾರೆ ಅತಿಥಿ ಅನುಭವ ಸುಧಾರಣೆಗೆ ಒತ್ತು

ವಾರ್ತಾಭಾರತಿವಾರ್ತಾಭಾರತಿ5 Oct 2026 3:59 PM IST
share
100 ಕೋಟಿ ರೂ. ಹೂಡಿಕೆ; KSTDCಯ 24 ಹೋಟೆಲ್, 2 ರೆಸ್ಟೋರೆಂಟ್ಗಳಿಗೆ ಹೊಸ ರೂಪ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು, ಅ.5: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿರುವ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (KSTDC) 24 ಹೋಟೆಲ್ ಗಳು ಹಾಗೂ 2 ರೆಸ್ಟೋರೆಂಟ್ ಗಳನ್ನು 100 ಕೋಟಿ ರೂ. ವೆಚ್ಚದಲ್ಲಿ ಹಂತ ಹಂತವಾಗಿ ಸಮಗ್ರವಾಗಿ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಪ್ರವಾಸಿಗರಿಗೆ ಕೇವಲ ವಸತಿ ಒದಗಿಸುವುದಕ್ಕೆ ಸೀಮಿತವಾಗದೆ, ಉತ್ತಮ ಕೊಠಡಿ, ಗುಣಮಟ್ಟದ ಆಹಾರ, ಸ್ವಚ್ಛತೆ, ವೃತ್ತಿಪರ ಆತಿಥ್ಯ, ಸುಗಮ ಕಾಯ್ದಿರಿಸುವಿಕೆ ಹಾಗೂ ಒಟ್ಟಾರೆ ಅತಿಥಿ ಅನುಭವವನ್ನು ಉತ್ತಮಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

KSTDCಯ ಹಲವು ಮಯೂರ ಹೋಟೆಲ್ಗಳು ಹಂಪಿ, ಜೋಗ್ ಫಾಲ್ಸ್, ನಂದಿ ಹಿಲ್ಸ್, ಮಡಿಕೇರಿ, ಕೆಆರ್ಎಸ್ ಸೇರಿದಂತೆ ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಿಗೆ ಅತ್ಯಂತ ಸಮೀಪದ ವಿಶಿಷ್ಟ ಸ್ಥಳಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಆತಿಥ್ಯ ಸಂಸ್ಥೆಗಳಿಗೆ ಸುಲಭವಾಗಿ ಲಭ್ಯವಾಗದಂತಹ ಸ್ಥಳಗಳಲ್ಲಿ KSTDC ಆಸ್ತಿಗಳು ಇರುವುದೇ ನಿಗಮದ ಪ್ರಮುಖ ಬಲವಾಗಿದೆ. ಈ ಸ್ಥಳದ ಅನುಕೂಲವನ್ನು ಉತ್ತಮ ಸೌಲಭ್ಯ ಮತ್ತು ವೃತ್ತಿಪರ ಸೇವೆಯೊಂದಿಗೆ ಜೋಡಿಸಿ ಪ್ರವಾಸಿಗರ ಅನುಭವ ಹಾಗೂ ನಿಗಮದ ಆದಾಯ ಎರಡನ್ನೂ ಹೆಚ್ಚಿಸುವ ಗುರಿ ಹೊಂದಲಾಗಿದೆ.

ಕೊಠಡಿಯಿಂದ ಆತಿಥ್ಯ ಸೇವೆಯವರೆಗೆ ಸಮಗ್ರ ಸುಧಾರಣೆ

100 ಕೋಟಿ ರೂ. ಮೇಲ್ದರ್ಜೆ ಯೋಜನೆಯಡಿ ಹೋಟೆಲ್ ಕೊಠಡಿಗಳು, ಸ್ನಾನಗೃಹಗಳು, ರೆಸ್ಟೋರೆಂಟ್ಗಳು, ಅಡುಗೆಮನೆಗಳು, ಸ್ವಾಗತ ಕೇಂದ್ರಗಳು, ಸಾಮಾನ್ಯ ಪ್ರದೇಶಗಳು, ಪೀಠೋಪಕರಣ, ಬೆಳಕಿನ ವ್ಯವಸ್ಥೆ, ಉದ್ಯಾನ ಮತ್ತು ಸುತ್ತಮುತ್ತಲಿನ ಪರಿಸರ ಸೇರಿದಂತೆ ಪ್ರವಾಸಿಗರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಹಂತ ಹಂತವಾಗಿ ಸುಧಾರಿಸಲಾಗುವುದು. ಮೂಲಸೌಕರ್ಯದ ಜೊತೆಗೆ ಸ್ವಚ್ಛತೆ, ಆಹಾರದ ಗುಣಮಟ್ಟ, ಕೊಠಡಿ ನಿರ್ವಹಣೆ, ಸಿಬ್ಬಂದಿಯ ಆತಿಥ್ಯ ಕೌಶಲ್ಯ, ಆನ್ಲೈನ್ ಕೊಠಡಿ ಕಾಯ್ದಿರಿಸುವ ವ್ಯವಸ್ಥೆ ಹಾಗೂ ಅತಿಥಿಗಳ ಅಭಿಪ್ರಾಯ ಸಂಗ್ರಹ ಮತ್ತು ಸ್ಪಂದನಾ ವ್ಯವಸ್ಥೆಗಳನ್ನೂ ಬಲಪಡಿಸಲಾಗುವುದು. ಆಯಾ ಹೋಟೆಲ್ಗಳ ಸ್ಥಳ, ಪ್ರವಾಸಿಗರ ಬೇಡಿಕೆ ಮತ್ತು ಕಾರ್ಯಸಾಧ್ಯತೆಯನ್ನು ಪರಿಗಣಿಸಿ 3-ಸ್ಟಾರ್ ಮಟ್ಟದ ಹಾಗೂ ಅದಕ್ಕಿಂತ ಉತ್ತಮ ಸೌಲಭ್ಯ ಮತ್ತು ಸೇವಾ ಗುಣಮಟ್ಟಕ್ಕೆ ಮೇಲ್ದರ್ಜೆಗೇರಿಸಲು ಪ್ರತ್ಯೇಕ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಕೆ.ಜೆ. ಜಾರ್ಜ್ ತಿಳಿಸಿದರು.

“KSTDCಯ ಮಯೂರ ಹೋಟೆಲ್ಗಳ ದೊಡ್ಡ ಶಕ್ತಿ ಅವುಗಳ ಸ್ಥಳ. ರಾಜ್ಯದ ಕೆಲವು ಅತ್ಯುತ್ತಮ ಪ್ರವಾಸಿ ತಾಣಗಳಲ್ಲಿ ಅತ್ಯಂತ ವಿಶಿಷ್ಟ ಸ್ಥಳಗಳಲ್ಲಿ ನಮ್ಮ ಆಸ್ತಿಗಳಿವೆ. ಈ ಸ್ಥಳದ ಅನುಕೂಲಕ್ಕೆ ಉತ್ತಮ ಕೊಠಡಿ, ಗುಣಮಟ್ಟದ ಆಹಾರ ಮತ್ತು ವೃತ್ತಿಪರ ಆತಿಥ್ಯವನ್ನು ಸೇರಿಸಬೇಕಾಗಿದೆ. 100 ಕೋಟಿ ರೂ. ಹೂಡಿಕೆಯ ಮೂಲಕ ಪ್ರವಾಸಿಗರ ಒಟ್ಟಾರೆ ಅನುಭವವನ್ನು ಮೇಲ್ದರ್ಜೆಗೇರಿಸಿ, KSTDC ಆಸ್ತಿಗಳನ್ನು ಹೆಚ್ಚು ಸ್ಪರ್ಧಾತ್ಮಕ ಮತ್ತು ಆದಾಯದಾಯಕವಾಗಿಸುವುದು ನಮ್ಮ ಗುರಿ'' ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.

“ಸರ್ಕಾರಿ ಹೋಟೆಲ್ ಎನ್ನುವ ಕಾರಣಕ್ಕೆ ಪ್ರವಾಸಿಗರು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವ ಪರಿಸ್ಥಿತಿ ಇರಬಾರದು. ಸ್ಥಳ, ಸೌಲಭ್ಯ ಮತ್ತು ಸೇವೆ — ಈ ಮೂರರಲ್ಲೂ ಮಯೂರ ಹೋಟೆಲ್ಗಳು ಉತ್ತಮ ಮಾನದಂಡ ನಿರ್ಮಿಸಬೇಕು,” ಎಂದು ಅವರು ತಿಳಿಸಿದರು.

KSTDC ಅಧ್ಯಕ್ಷ ಎಂ. ಶ್ರೀನಿವಾಸ್ ಮಾತನಾಡಿ, “ಮಯೂರ ಹೋಟೆಲ್ಗಳಿಗೆ ವಿಶಿಷ್ಟ ಸ್ಥಳಗಳ ಬಲದ ಜೊತೆಗೆ ಜನರಿಗೆ ಪರಿಚಿತವಾದ ಹೆಸರೂ ಇದೆ. ಆಧುನಿಕ ಸೌಲಭ್ಯಗಳು ಮತ್ತು ಉತ್ತಮ ಸೇವೆಯೊಂದಿಗೆ ಅವುಗಳನ್ನು ಮೇಲ್ದರ್ಜೆಗೇರಿಸಿದರೆ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು, ಕೊಠಡಿಗಳ ಬಳಕೆಯನ್ನು ಹೆಚ್ಚಿಸಲು ಹಾಗೂ ಆದಾಯವನ್ನು ಗಣನೀಯವಾಗಿ ವೃದ್ಧಿಸಲು ಅವಕಾಶವಿದೆ. 100 ಕೋಟಿ ರೂ. ಯೋಜನೆಯನ್ನು ಆದ್ಯತೆ ಆಧಾರದಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು,” ಎಂದರು.

ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಈ ಯೋಜನೆಯನ್ನು ಕೇವಲ ಕಟ್ಟಡಗಳ ನವೀಕರಣವಾಗಿ ನೋಡುತ್ತಿಲ್ಲ. ಪ್ರತಿಯೊಂದು ಆಸ್ತಿಯ ಸ್ಥಳ, ಪ್ರವಾಸಿಗರ ಬೇಡಿಕೆ, ಪ್ರಸಕ್ತ ಬಳಕೆ ಮತ್ತು ಆದಾಯದ ಸಾಮರ್ಥ್ಯವನ್ನು ಪ್ರತ್ಯೇಕವಾಗಿ ವಿಶ್ಲೇಷಿಸಿ ಸುಧಾರಣಾ ಯೋಜನೆ ರೂಪಿಸಲಾಗುವುದು. ಮೂಲಸೌಕರ್ಯ ಅಭಿವೃದ್ಧಿಯ ಜೊತೆಗೆ ಸೇವಾ ಗುಣಮಟ್ಟ, ಕೊಠಡಿ ನಿರ್ವಹಣೆ, ಆಹಾರದ ಗುಣಮಟ್ಟ, ಆನ್ ಲೈನ್ ಕಾಯ್ದಿರಿಸುವಿಕೆ ಮತ್ತು ಅತಿಥಿಗಳ ಪ್ರತಿಕ್ರಿಯೆ ವ್ಯವಸ್ಥೆಯನ್ನು ಬಲಪಡಿಸಿ ಮಯೂರ ಹೋಟೆಲ್ಗಳಲ್ಲಿ ಒಟ್ಟಾರೆ ಆತಿಥ್ಯ ಅನುಭವವನ್ನು ಉತ್ತಮಪಡಿಸಲಾಗುವುದು,” ಎಂದರು.

Tags

KSTDCMinister K.J. George
share
ವಾರ್ತಾಭಾರತಿ
ವಾರ್ತಾಭಾರತಿ
Next Story
X