2nd PUC Result-2026 | ವಾಣಿಜ್ಯ ವಿಭಾಗದ ಅದಿತಿ ಎ.ಬಾಪು, ದಿಶಾ ರಾಜ್ಯಕ್ಕೆ ಪ್ರಥಮ

ದಿಶಾ/ ಪ್ರಿನ್ಸಿಲ್ಲಾ ಕಾರ್ಡೋಜಾ/ಅರ್ಚನಾ ಡಿ.ಎಂ./ಸಂಗೀತಾ/ಸೃಷ್ಟಿ
ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬೆಂಗಳೂರಿನ ಎಸ್ಬಿ ಮಹಾವೀರ್ ಜೈನ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅದಿತಿ ಎ. ಬಾಪು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರಿಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ದಿಶಾ 600 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಪ್ರಿನ್ಸಿಲ್ಲಾ ಕಾರ್ಡೋಜಾ ಪ್ರಥಮ: ವಿಜ್ಞಾನ ವಿಭಾಗದಲ್ಲಿ ಮಂಗಳೂರಿನ ದಿನ ಲರ್ನಿಂಗ್ ಸೆಂಟರ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಪ್ರಿನ್ಸಿಲ್ಲಾ ಕಾರ್ಡೋಜಾ 599 ಅಂಕಗಳನ್ನು ಪಡೆದು, ವಿಭಾಗದಲ್ಲಿಯೇ ರಾಜ್ಯ ಪ್ರಥಮ ಸ್ಥಾನ ಬಂದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಅಭಿರಾಮ್ ವಿ ಭಟ್, ಬೆಂಗಳೂರಿನ ಎಂಜೆಲ್ ತಿವಾರಿ ಸೇರಿದಂತೆ 12 ಮಂದಿ ತಲಾ 598 ಅಂಕಗಳನ್ನು ಪಡೆದು ಪರೀಕ್ಷೆ ಸಾಧನೆ ಮಾಡಿದ್ದಾರೆ.
ಕಲಾ ವಿಭಾಗ: ಕಲಾ ವಿಭಾಗದಲ್ಲಿ ಬಳ್ಳಾರಿಯ ಅರ್ಚನಾ, ಸಂಗೀತಾ, ಕಲಬುರಗಿಯ ಸೃಷ್ಟಿ ತಲಾ 598 ಅಂಕಗಳನ್ನು ಪಡೆದಿದ್ದು, ವಿಭಾಗದಲ್ಲಿ ಪ್ರಥಮ ಸ್ಥನ ಬಂದಿದ್ದಾರೆ. ದಕ್ಷಿಣ ಕನ್ನಡದ ಫಾತೀಮಾತ್ ಶಹ್ಲಾ, ಬಾಗಲಕೋಟೆಯ ಮಹಮದಯನ್ ನದಾಫ್ ಸೇರಿ ಐದು ಮಂದಿ ತಲಾ 595 ಅಂಕಗಳನ್ನು ಪಡೆದಿದ್ದಾರೆ.





