39 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಅಸ್ತು

File Photo: PTI
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳ್ಳುತ್ತಿರುವ ಸಂದರ್ಭದಲ್ಲಿ, ನೆನೆಗುದಿಗೆ ಬಿದ್ದಿದ್ದ ಹಲವು ನಿಗಮ, ಮಂಡಳಿ, ಆಯೋಗಗಳಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಅಸ್ತು ಎಂದಿದೆ.
ರಾಜ್ಯ ಸರಕಾರದ ವಿವಿಧ 39 ನಿಗಮ, ಮಂಡಳಿ, ಆಯೋಗಗಳಿಗೆ ನೂತನ ಅಧ್ಯಕ್ಷರ ನೇಮಕಕ್ಕೆ ಹೈಕಮಾಂಡ್ ಒಪ್ಪಿಗೆ ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಿಗೆ ದಸರಾ ಉಡುಗೊರೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಸುದೀರ್ಘ ಚರ್ಚೆಗಳನ್ನು ನಡೆಸಿ ಪಟ್ಟಿಯನ್ನು ಅಂತಿಮಗೊಳಿಸಿದ್ದರು.
ನಂತರ, ಎಐಸಿಸಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಬಳಿಯೂ ನಿಗಮ, ಮಂಡಳಿಗಳಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಸಂಬಂಧ ಸಿದ್ಧಪಡಿಸಲಾಗಿದ್ದ ಪಟ್ಟಿ ಕುರಿತು ರಾಜ್ಯ ನಾಯಕರು ಚರ್ಚೆ ನಡೆಸಿದ್ದರು. ಬಳಿಕ ಪಟ್ಟಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವೇಣುಗೋಪಾಲ್ ರವಾನಿಸಿದ್ದರು.
ರಾಜ್ಯದಿಂದ ಅಂತಿಮಗೊಳಿಸಿ ಕಳುಹಿಸಿದ್ದ ಪಟ್ಟಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ ಮಲ್ಲಿಕಾರ್ಜುನ ಖರ್ಗೆ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕಳುಹಿಸಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಈ ಪಟ್ಟಿಗೆ ಅನುಮೋದನೆ ನೀಡಿದ ಬಳಿಕ ಸಂಬಂಧಪಟ್ಟ ಇಲಾಖೆಗಳು ನೇಮಕಾತಿ ಆದೇಶವನ್ನು ಪ್ರಕಟಿಸಲಿವೆ.
ನಿಗಮ, ಮಂಡಳಿಗಳ ವಿವರ:
ಕರಾವಳಿ ಅಭಿವೃದ್ಧಿ ಪ್ರಾಧಿಕಾರ-ಎಂ.ಎ.ಗಫೂರ್, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ(ಮೆಸ್ಕಾಂ)-ಕೆ.ಹರೀಶ್ ಕುಮಾರ್, ಕೇಂದ್ರ ಪರಿಹಾರ ಸಮಿತಿ-ಆಗಾ ಸುಲ್ತಾನ್, ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ ಸಂಸ್ಥೆ-ಲಾವಣ್ಯ ಬಲ್ಲಾಳ್ ಜೈನ್.
ರಾಜ್ಯ ಸಫಾಯಿ ಕರ್ಮಚಾರಿ ಆಯೋಗ-ಪಿ.ರಘು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ-ಅರುಣ್ ಪಾಟೀಲ್, ರಾಜ್ಯ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ-ಶಿವಲೀಲಾ ವಿನಯ್ ಕುಲಕರ್ಣಿ, ಜೈವಿಕ ವೈವಿಧ್ಯ ಮಂಡಳಿ-ವಡ್ನಾಳ್ ಜಗದೀಶ್, ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ-ಮುರಳಿ ಅಶೋಕ್.
ರಾಜ್ಯ ಎಸ್.ಸಿ ಮತ್ತು ಎಸ್.ಟಿ ಆಯೋಗ-ಡಾ.ಮೂರ್ತಿ, ಮಾಜಿ ಸೈನಿಕರ ಕಲ್ಯಾಣ ಮಂಡಳಿ-ಕರ್ನಲ್ ಮಲ್ಲಿಕಾರ್ಜುನ್, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ-ಡಾ.ಬಿ.ಸಿ.ಮುದ್ದುಗಂಗಾಧರ್, ರಾಜ್ಯ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ-ಶಾರ್ಲೆಟ್ ಪಿಂಟೋ, ರಾಜ್ಯ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ-ಮಾರಿಯೋಜಿ ರಾವ್.
ರಾಜ್ಯ ಗೋದಾಮು ನಿಗಮ-ಎನ್.ಸಂಪಂಗಿ, ದೇವರಾಜ ಅರಸು ಟ್ರಕ್ ಟರ್ಮಿನಲ್-ವೈ.ಸಯೀದ್ ಅಹ್ಮದ್, ಕಾಡುಗೊಲ್ಲ ಅಭಿವೃದ್ಧಿ ನಿಗಮ-ಮಹೇಶ್, ಬಯಲುಸೀಮೆ ಅಭಿವೃದ್ಧಿ ಮಂಡಳಿ(ಚಿತ್ರದುರ್ಗ)-ಮಂಜಪ್ಪ, ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮ-ಧರ್ಮಣ್ಣ ಉಪ್ಪಾರ.
ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ-ಎಸ್.ಜಿ.ನಂಜಯ್ಯನಮಠ, ರಾಜ್ಯ ಬೀಜ ಅಭಿವೃದ್ಧಿ ನಿಗಮ-ಆಂಜನಪ್ಪ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ-ನೀಲಕಂಠ ಮುಳ್ಗೆ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಕಾಡಾ-ಕಲಬುರಗಿ)-ಬಾಬು ಹೊನ್ನ ನಾಯ್ಕ್, ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿ(ಬೆಳಗಾವಿ)-ಯುವರಾಜ್ ಕದಂ.
ರಾಜ್ಯ ತೊಗರಿ ಬೆಳೆ ಅಭಿವೃದ್ಧಿ ನಿಗಮ(ಕಲಬುರಗಿ)- ಅನಿಲ್ ಕುಮಾರ್ ಜಾಮದಾರ್, ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ-ಪ್ರವೀಣ್ ಹಾರ್ವಲ್, ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ-ಮಂಜುನಾಥ ಪೂಜಾರಿ, ರಾಜ್ಯ ಸಿರಿಧಾನ್ಯ ಅಭಿವೃದ್ಧಿ ಮಂಡಳಿ(ಕಲಬುರಗಿ)-ಸೈಯದ್ ಮೆಹ್ಮೂದ್ ಚಿಸ್ತಿ, ರಾಜ್ಯ ಸವಿತಾ ಸಮಾಜ ಅಭಿವೃದ್ಧಿ ನಿಗಮ-ಎಂ.ಎಸ್.ಮುತ್ತುರಾಜ್.
ರಾಜ್ಯ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ-ನಂಜಪ್ಪ, ರಾಜ್ಯ ಗಾಣಿಗ ಅಭಿವೃದ್ಧಿ ನಿಗಮ-ವಿಶ್ವಾಸ್ ದಾಸ್, ರಾಜ್ಯ ಸಂಯಮ ಮಂಡಳಿ-ಆರ್.ಎಸ್.ಸತ್ಯನಾರಾಯಣ, ರಾಜ್ಯ ರೇಶ್ಮೆ ಮಾರುಕಟ್ಟೆ ಮಂಡಳಿ-ಗಂಗಾಧರ್, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ-ಶಿವಪ್ಪ, ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ-ಬಿ.ಎಸ್.ಕವಲಗಿ.
ಕುಂಬಾರ ಅಭಿವೃದ್ಧಿ ನಿಗಮ-ಡಾ.ಶ್ರೀನಿವಾಸ ವೇಲು, ರಾಜ್ಯ ಕನಿಷ್ಠ ವೇತನ ಮಂಡಳಿ-ಟಿ.ಎಂ.ಶಾಹಿದ್ ಟೆಕ್ಕಿಲ್, ರಾಜ್ಯ ಕೈಮಗ್ಗ ಮೂಲಸೌಕರ್ಯ ಮಂಡಳಿ-ಚೇತನ್ ಕೆ.ಗೌಡ, ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ಮಂಡಳಿ-ಶರಣಪ್ಪ ಸಲಾದ್ಪುರ್ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿ ಪ್ರಕಟಿಸಿದೆ.







