ಬೆಂಗಳೂರು ಹಜ್ ಭವನದ ಸಭಾಂಗಣದಲ್ಲಿ ಬೆಂಕಿ ಅವಘಡ

ಬೆಂಗಳೂರು, ಅ.28: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಹೆಗಡೆ ನಗರ ಸಮೀಪದ ತಿರುಮೇನಹಳ್ಳಿಯಲ್ಲಿರುವ ರಾಜ್ಯ ಹಜ್ ಭವನದಲ್ಲಿ ಬೆಂಕಿ ಅವಗಢ ಸಂಭವಿಸಿದೆ.
ಶನಿವಾರ ಸಂಜೆ ಹಜ್ ಭವನದ ಮೇಲ್ಭಾಗದಲ್ಲಿರುವ ಆಡಿಟೋರಿಯಂ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ತಗುಲಿದೆ ಎನ್ನಲಾಗಿದೆ. ದಟ್ಟ ಹೊಗೆಯೂ ಹೊರಗಡೆ ಬಂದಿದ್ದನ್ನು ಕಂಡ ಅಲ್ಲಿನ ಸಿಬ್ಬಂದಿಗಳು ಕೂಡಲೆ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದಾರೆ.
ಅಲ್ಲದೆ, ಶಾಗ್ನಿ ಶಾಮಕ ದಳದವರಿಗೂ ಮಾಹಿತಿ ರವಾನಿಸಿದ್ದಾರೆ. ಕೂಡಲೆ ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನೆಯಲ್ಲಿ ಯಾವುದೆ ಸಾವು, ನೋವು ಸಂಭವಿಸಲಿಲ್ಲ. ಅಗ್ನಿ ಅವಗಘಡದಿಂದಾಗಿ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್, ʼಮೇಲ್ನೋಟಕ್ಕೆ ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಆಗಿರುವ ಘಟನೆ ಎಂದು ತಿಳಿದು ಬಂದಿದೆ. ಅದಾಗ್ಯೂ ಘಟನೆ ಕುರಿತು ಪರಿಶೀಲನೆ ನಡೆಸಲಾಗುವುದು. ಅದೃಷ್ಟವಶಾತ್ ಯಾವುದೆ ಸಾವು, ನೋವು ಸಂಭವಿಸಲಿಲ್ಲ. ಹಜ್ ಸಮಿತಿಯ ಸಿಬ್ಬಂದಿಗಳು ತ್ವರಿತವಾಗಿ ಕ್ರಮ ಕೈಗೊಂಡಿದ್ದರಿಂದ ಸಂಭಾವ್ಯ ಅನಾಹುತ ತಪ್ಪಿದೆʼ ಎಂದು ತಿಳಿಸಿದ್ದಾರೆ.





