ಇಂಧನ ಉಳಿತಾಯದ ಕರೆ: ಪ್ರಧಾನಿ ನಡೆಯನ್ನು ಪ್ರಶ್ನಿಸಿದ ನಟ ಕಿಶೋರ್ ಕುಮಾರ್

ನಟ ಕಿಶೋರ್ ಕುಮಾರ್
ಬೆಂಗಳೂರು : ʼಇಂಧನವನ್ನು ಮಿತವಾಗಿ ಬಳಸಿʼ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಸಂಬಂಧಿಸಿದಂತೆ ಬಹುಭಾಷಾ ನಟ ಕಿಶೋರ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿ ಅವರು, ʼಪಶ್ಚಿಮ ಏಶ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ವಿವೇಚನೆಯಿಂದ ಬಳಸುವುದು ಅನಿವಾರ್ಯವಾಗಿದೆʼ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಂಬಂಧ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ನಟ ಕಿಶೋರ್ ಅವರು, ಸರಕಾರದ ನಡೆಯನ್ನು ಪ್ರಶ್ನಿಸಿದ್ದಾರೆ.
ಕಿಶೋರ್ ಅವರ ಪೋಸ್ಟ್ನಲ್ಲೇನಿದೆ? :
"ಯಾರು ಇಲ್ಲಿ ಅತಿ ದೊಡ್ಡ ಮೂರ್ಖರು ? ನಮ್ಮನ್ನು ಇಂಧನ ಉಳಿಸಿ ಕಡಿಮೆ ಖರ್ಚು ಮಾಡಿ, ಅದೇ ದೇಶಭಕ್ತಿ ಎಂದು ಹೇಳಿ ಮರುದಿನವೇ ವಾಹನಗಳ ದಂಡಿನೊಂದಿಗೆ ರೋಡ್ ಶೋನಲ್ಲಿ ಭಾಗವಹಿಸುವ ಇವನೋ ???(ಗಲ್ಫ್ ಯುದ್ಧ ಪ್ರಾರಂಭವಾದ ನಂತರದ ಕಳೆದ ಕೆಲವು ತಿಂಗಳುಗಳಲ್ಲಿ ಅವನು ಮಾಡಿದ ಚುನಾವಣಾ ರ್ಯಾಲಿಗಳನ್ನು ಮರೆಯಬಾರದು) ಅಥವಾ ಇವನ ಮಾತನ್ನು ನಂಬಿ, ಮತ ಹಾಕಿ ಇವನನ್ನು ಅಧಿಕಾರದಲ್ಲಿಡುವ ಜನರೋ ???" ಎಂದು ಅವರು ಪ್ರಶ್ನಿಸಿದ್ದಾರೆ.






