ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣ | ಜಾಮೀನು ಸಿಕ್ಕರೂ ರನ್ಯಾ ರಾವ್ ಗೆ ಬಿಡುಗಡೆ ಭಾಗ್ಯವಿಲ್ಲ

ರನ್ಯಾ ರಾವ್
ಬೆಂಗಳೂರು: ಅಕ್ರಮ ಚಿನ್ನ ಸಾಗಾಣಿಕೆ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಗೆ ಜಾಮೀನು ಮಂಜೂರು ಮಾಡಿ ಆರ್ಥಿಕ ಅಪರಾಧಗಳ ನ್ಯಾಯಾಲಯ ಆದೇಶಿದೆ. ಜೊತೆಗೆ ಎರಡನೇ ಆರೋಪಿ ತರುಣ್ ಕೊಂಡಾರು ರಾಜುಗೆ ಜಾಮೀನು ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್ಒ ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸದ ಹಿನ್ನಲೆ ಆರೋಪಿಗಳಿಗೆ ಜಾಮೀನು ನೀಡಿ ನ್ಯಾಯಾಲಯ ಆದೇಸಿದೆ.
ತಲಾ ಇಬ್ಬರು ಶ್ಯೂರಿಟಿ, ಎರಡು ಲಕ್ಷ ರೂ. ಬಾಂಡ್, ದೇಶ ಬಿಟ್ಟು ಹೋಗುವಂತಿಲ್ಲ, ಇದೇ ರೀತಿ ಅಪರಾಧ ಎಸಗಬಾರದು ಎಂದು ಷರತ್ತು ವಿಧಿಸಿ ನ್ಯಾಯದೀಶ ವಿಶ್ವನಾಥ್ ಸಿ.ಗೌಡರ್ ಅವರು ಆದೇಶಿದ್ದಾರೆ.
ಜಾಮೀನು ಸಿಕ್ಕರೂ ರನ್ಯಾ ಬಿಡುಗಡೆ ಇಲ್ಲ:
ರನ್ಯಾ ವಿರುದ್ಧ ಕಾಪಿಪೋಸಾ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಕಾಪಿಪೋಸಾ ಕೇಸಲ್ಲಿ ಜಾಮೀನು ಸಿಗುವವರೆಗೂ ರನ್ಯಾಗೆ ಬಿಡುಗಡೆ ಭಾಗ್ಯ ಇಲ್ಲವೆಂಬ ಮಾಹಿತಿ ಸಿಕ್ಕಿದೆ.
Next Story





